ಮನೆಕಳ್ಳತನ: ಮೂವರು ಆರೋಪಿಗಳ ಬಂಧನ:

ಜಮಖಂಡಿ 25:ಜಮಖಂಡಿ ನಗರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಕಳ್ಳತನ ಮಾಡುತ್ತಿರುವ ಮೂವರು ಆರೋಪಿಗಳನ್ನು ಶಹರ ಠಾಣಿಯ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದು.

24 ಲಕ್ಷ ರೂಪಾಯಿಗಳ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಎಸ್‌ಪಿ ಜಯಪ್ರಕಾಶ ಅವರು ತಿಳಿಸಿದರು.  ಆರೋಪಿಗಳಾದ ಮುಧೋಳ ತಾಲೂಕಿನ ದುರ್ಗಪ್ಪ ಪಕೀರ​‍್ಪ ವಾಲ್ಮೀಕಿ (25), ಜಮಖಂಡಿ ತಾಲೂಕಿನ ಶಿವಕುಮಾರ ನಾಗಪ್ಪ ಹೊಸಮನಿ (21), ಬೆಳಗಾವಿ ಜಿಲ್ಲೆ ಕಿತ್ತೂರ ತಾಲೂಕಿನ ಮಲ್ಲಾಪೂರ ಗ್ರಾಮದ ಮಂಜುನಾಥ ಲಕ್ಷ್ಮಣ ಗುಂಜಿ (25), ಈ ಮೂವರು ಆರೋಪಿಗಳು 3 ಮನೆ ಕಳ್ಳತನ ಪ್ರಕರಣದಲ್ಲಿ 314 ಗ್ರಾಂ ತೂಕದ ಬಂಗಾರದ ಆಭರಣಗಳು, 1 ಕೆ.ಜಿ. ಬೆಳ್ಳಿಯ ಆಭರಣಗಳು, ಒಂದು ಡೆಲ್ ಕಂಪನಿಯ ಲ್ಯಾಪಟಾಪ, ಒಂದು ಕೆ.ಟಿ.ಎಂ. ಬೈಕ್ ಹಾಗೂ ಒಂದು ಲಕ್ಷ ರೂಪಾಯಿ ನಗದು ಹಣ ಹೀಗೆ ಒಟ್ಟು 24 ಲಕ್ಷ ರೂಪಾಯಿ ಕಿಮ್ಮತ್ತಿನ ಕಳ್ಳತನ ಮಾಡಿರುವ ವಸ್ತುಗಳನ್ನು ಪತ್ತೆ ಮಾಡಿ ವಶಪಡೆಯಲಾಗಿದೆ ಎಂದರು.

ಹೆಚ್ಚುವರಿ ಎಸ್‌ಪಿ ಪ್ರಸನ್ ದೇಸಾಯಿ, ಡಿ,ಎಸ್,ಪಿ, ಶಾಂತವೀರ ಈ, ಸಿಪಿಐ ಗುರುನಾಥ ಚವ್ಹಾಣ ಮಾರ್ಗದರ್ಶನದಲ್ಲಿ ತನಿಖಾ ತಂಡವನ್ನು ರಚಿಸಿ.  ಶಹರ ಠಾಣಿಯ ಪಿಎಸ್‌ಐಗಳಾದ ಬಸವರಾಜ ಕೊಣ್ಣೂರೆ, ನಾಗರಾಜ ಖಿಲಾರೆ ನೇತೃತ್ವದಲ್ಲಿ ಎ,ಎಸ್,ಐ, ಗಳಾದ ಪಿ,ಎಂ, ಕುಂಬಾರ, ಕೆ,ಪಿ, ಸವದತ್ತಿ, ಎಚ್, ಎಸ್, ಮೆಂಡೇಗಾರ, ಪೋಲಿಸ್ ಸಿಬ್ಬಂದಿಗಳಾದ ಎಚ್,ಜಿ, ಬಂಗಿ, ಬಿ,ಎಂ, ಜಂಬಗಿ, ಎಸ್,ಪಿ, ತುಪ್ಪದ, ಪಿ,ಎಚ್, ಘಾಟಗೆ, ಎಸ್,ಬಿ, ಹನಗಂಡಿ, ರಮೇಶ ಗಸ್ತಿ, ಮಲ್ಲು ನಿಂಗವ್ವಗೋಳ, ಪಿ,ಎಂ, ಹೊಸಮನಿ, ಆರ್,ಎಚ್ ಪೂಜಾರಿ ಕಾರ್ಯಾಚರಣಿಯಲ್ಲಿ ಭಾಗಿಯಾಗಿದ್ದು.

ಅವರನ್ನು ಜಿಲ್ಲಾ ಎಸ್,ಪಿ, ಜಯಪ್ರಕಾಶ ಅವರು ಶ್ಲಾಘನಿಸಿ. ನಗದು ಹಣ ಬಹುಮಾನವನ್ನು ನೀಡಿದರು.  ಮೂವರು ಆರೋಪಿಗಳನ್ನು ನಾಯ್ಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.  ಪೋಟೋ : ಜಮಖಂಡಿ ನಗರದ ಶಹಶ ಪೊಲೀಸ ಠಾಣಿಯಲ್ಲಿ ಮನೆಕಳ್ಳನ ಮಾಡಿರುವ ಆರೋಪಿಗಳಿಂದ ಚಿನ್ನಾಭರಣಗಳು ಹಾಗೂ ಲಕ್ಷಾಂತ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿರುವುದು

ನವೀನ ಹಳೆಯದು