ಮುಧೋಳ ತಾಲೂಕಿನಲ್ಲಿ ಮಳೆ ಸಿಡಿಲಿಗೆ ರೈತ ಬಲಿ

ತಾಲೂಕಿನಲ್ಲಿ ಶನಿವಾರ ಗುಡುಗು, ಸಿಡಿಲಿನೊಂದಿಗೆ ಭಾರಿ (Heavy Rain) ಮಳೆಯಾಗಿದೆ.

ಇದೇ ವೇಳೆ, ಸಿಡಿಲು ಬಡಿದು ಯುವ ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಧೋಳ(Mudhol) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಬಸಪ್ಪ ಮಾದರ (35) ಎಂದು ಗುರುತಿಸಲಾಗಿದೆ. ಮತ್ತೊಬ್ಬ ರೈತ ವಿಠ್ಠಲ ಮಾದರ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವೇಳೆ ಇಬ್ಬರು ಮುಧೋಳ ತಾಲೂಕಿನ ಬಿಕೆ ಅಲಗುಂಡಿ ಗ್ರಾಮದ ತಮ್ಮ ಜಮೀನಿನಲ್ಲಿ ಬೋರ್‌ವೆಲ್‌ನ ವಿದ್ಯುತ್ ಮೋಟರ್ ಆನ್ ಮಾಡಲು ಹೋಗಿದ್ದರು. ಬಸಪ್ಪ ಸ್ಥಳದಲ್ಲೇ ಮೃತಪಟ್ಟರೆ, ವಿಠ್ಠಲ ಗಾಯಗೊಂಡಿದ್ದಾರೆ.

ಈ ಮಧ್ಯೆ, ಜೂನ್ 28 ರವರೆಗೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನವೀನ ಹಳೆಯದು