ಬಾಗಲಕೋಟೆ ನೂತನ ವಿವಿಗೆ ರನ್ನನ ಹೆಸರಿಡಲು ಆಗ್ರಹ


ಮುಧೋಳ : ಜಿಲ್ಲೆಯ ಜಮಖಂಡಿಯಲ್ಲಿ ಪ್ರಸಕ್ತ ವರ್ಷದಿಂದ ಪ್ರಾರಂಭಿಸಿರುವ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ರನ್ನ ವಿಶ್ವವಿದ್ಯಾಲಯ ಎಂದು ಮಾಡಬೇಕೆಂದು ಕವಿಚಕ್ರವರ್ತಿ ನಾಮಕರಣ ಬಾಗಲಕೋಟ ಜಿಲ್ಲಾ ಕಸಾಪ, ನಿಕಟಪೂರ್ವ ಅಧ್ಯಕ್ಷ ಹಾಗೂ ಕನ್ನಡ ಮತ್ತೂ ಸಂಸ್ಕೃತಿ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಶ್ರೀಶೈಲ ಕರಿಶಂಕರಿ ಹಾಗೂ ಪತ್ರಕರ್ತ ಅಶೋಕ ಕುಲಕರ್ಣಿ ನೂತನ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದರಿಂದ ಕವಿಚಕ್ರವರ್ತಿ ಎನಿಸಿಕೊಂಡಂತ ರನ್ನನ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನವೀನ ಹಳೆಯದು