ಡಿಪ್ಲೊಮಾ ಪ್ರಥಮ ವರ್ಷದ ಪ್ರವೇಶಕ್ಕೆ ಅರ್ಜಿ

ಬಾಗಲಕೋಟೆ: ನವನಗರ ಸೆಕ್ಟರ ನಂ.43 ರಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ 2023-24ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ತರಗತಿಗಳ ನೇರ ಪ್ರವೇಶ ಪ್ರಾರಂಭವಾಗಿದ್ದು, SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35 ರಷ್ಟು ಅಂಕ ಪಡೆದು ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಜೂನ್ 11 ರೊಳಗಾಗಿವ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯಲ್ಲಿ ಕಂಪ್ಯೂಟರ ಸೈನ್ಸ್ ಇಂಜಿನೀಯರಿಂಗ್, ಸಿಎಲ್ ಇಂಜಿನೀಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನೀಯರಿಂಗ್‌ ಹಾಗೂ ಮೆಕ್ಯಾನಿಕಲ್ ಎಂಜಿನೀಯರಿಂಗ್ ಕೋರ್ಸಗಳಿದ್ದು, ಹೆಚ್ಚಿನ ಮಾಹಿತಿಗಾಗಿ ಸರಕಾರಿ ಪಾಲಿಟೆಕ್ನಿಕ್‌ನ ಹಿರಿಯ ಪ್ರಾಚಾರ್ಯ ರಮೇಶ ಶೆಲ್ಲಿಕೇರಿ (9448946929) ಮತ್ತು ಕಚೇರಿ ಅಧೀಕ್ಷಕರು (9741606354) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ನವೀನ ಹಳೆಯದು