ಇಂದು ನಾಮಪತ್ರ ಸಲ್ಲಿಸಿದ ಕಾರಜೋಳರ ಆಸ್ತಿ ಎಷ್ಟು ಗೊತ್ತಾ..?


ಮುಧೋಳ: ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಿ ಮುಧೋಳ ಜನರ ಸೇವೆ ಮಾಡುತ್ತಿರುವ ಗೋವಿಂದ ಕಾರಜೋಳ ಮುಧೋಳು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಾಮಪತ್ರ ಸಲ್ಲಿಕೆ ಮಾಡಿದರು.

ಬೆರಳೆಣಿಕೆ ನಾಯಕರೊಂದಿಗೆ ಸಾಂಕೇತಿಕವಾಗಿ ತಹಶೀಲದಾರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.

ನಂತರ ತಮ್ಮನ್ನು ಭೇಟಿಯಾದ ಮಾಧ್ಯಮಗಳ ಜತೆಗೆ ಮಾತನಾಡುತ್ತಲೇ ಕ್ಷೇತ್ರದಲ್ಲಿ ತಮ್ಮ ಬೆಳವಣಿಗೆಗೆ ಕಾರಣರಾದ ಎಸ್.ಎಸ್.ಮಲಘಾಣ ಅವರನ್ನು ನೆನೆದು ಕಣ್ಣೀರು ಹಾಕಿದರು. ರಾಜ್ಯದಲ್ಲಿ ಏನೇ ಬದಲಾವಣೆಯಾದರೂ ಕ್ಷೇತ್ರದಲ್ಲಿ ಜನ ನನ್ನ ಕೈಬಿಟ್ಟಿಲ್ಲ.

ಈಗಲೂ ಅದೇ ಅಭಿಮಾನವನ್ನು ತೋರುತ್ತಾರೆ. ನಿಸ್ವಾರ್ಥದಿಂದ ದುಡಿದಿದ್ದೇನೆ. ನಾನು ನಿಮ್ಮ ಮನೆ ಮಗ ದುಡಿದಿರುವುದಕ್ಕೆ ಕೂಲಿ ಕೊಡಿ ಎಂದು ಕೇಳುತ್ತೇನೆ.

ಕಾಂಗ್ರೆಸ್ ಸೇರಿ ಯಾರೇ ಬಂಡಾಯ ನಿಂತರೂ ತಲೆ ಕೆಡಿಸಿಕೊಳ್ಳುವುದಿಲ್ಲ ಜನ. ನನ್ನ ಕೈ ಬಿಡುವುದಿಲ್ಲ ಎಂಬ ಅಚಲ ನಂಬಿಕೆ ನನ್ನದು ಎಂದು ಹೇಳಿದರು.

ಇಂದು ನಾಮಪತ್ರ ಸಲ್ಲಿಸಿದ ಕಾರಜೋಳರ ಆಸ್ತಿ ವಿವರ:


2022-23 ರಲ್ಲಿ ತೋರಿಸಲಾದ ಆದಾಯ : 41,65,230

ಸದ್ಯ ಕಾರಜೋಳರ ಕೈಯಲ್ಲಿ 5 ಲಕ್ಷ ಹಾಗೂ ಅವರ ಪತ್ನಿ ಕೈಯಲ್ಲಿ 2 ಲಕ್ಷ ನಗದನ್ನು ಹೊಂದಿದ್ದಾರೆ.

ಬ್ಯಾಂಕಿನಲ್ಲಿ ಠೇವಣಿ


ಕಾರಜೋಳರ ಹೆಸರಿನಲ್ಲಿ ಒಂದು ಕೋಟಿ ಅರವತ್ತೊಂಬತ್ತು ಲಕ್ಷದ ನಲವತ್ತೊಂಬತ್ತು ಸಾವಿರದ ನೂರ ಎಪ್ಪತ್ನಾಲ್ಕು ರೂಪಾಯಿ ಹಾಗೂ ಅವರ ಪತ್ನಿ ಶಾಂತಾದೇವಿ ಹೆಸರಿನಲ್ಲಿ ಒಂದು ಲಕ್ಷದ ನಲವತ್ತನಾಲ್ಕು ಸಾವಿರದ ಎರಡು ನೂರ ತೊಂಬತ್ನಾಲ್ಕು ರೂಪಾಯಿ ಯಷ್ಟು ಠೇವಣಿ ಬ್ಯಾಂಕಿನಲ್ಲಿ ಹೊಂದಿದ್ದಾರೆ.

ಸಾಲ


ಕಾರಜೋಳರು ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ ಯಾವುದೇ ಸಾಲವನ್ನು ಹೊಂದಿಲ್ಲ

ಭೂಮಿ


ವಿಜಯಪುರದಲ್ಲಿ 40X60 ಜಾಗದಲ್ಲಿ ಮನೆ ಹಾಗೂ ಬೆಂಗಳೂರಿನಲ್ಲಿ 50X80 ಅಳತೆಯ ಬಿಡಿಎ ನಿವೇಶನ

ಇದನ್ನು ಹೊರತುಪಡಿಸಿ ತಮ್ಮ ಹೆಸರಿನಲ್ಲಿ ಒಂದು ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ 3 ಕೃಷಿಯೇತರ ಜಮೀನುಗಳನ್ನು ಹೊಂದಿದ್ದಾರೆ.

ಹಾಗೂ ತಮ್ಮ ಹೆಸರಿನಲ್ಲಿ 22 ಎಕರೆ 24 ಗುಂಟೆ ಹಾಗೂ ತಮ್ಮ ಪತ್ನಿ ಹೆಸರಿನಲ್ಲಿ 7 ಗುಂಟೆ ಕೃಷಿ ಜಮೀನನ್ನು ಹೊಂದಿದ್ದಾರೆ.

ಆಭರಣ


ಕಾರಜೋಳರ ಶ್ರೀಮತಿ ಶಾಂತಾದೇವಿ ಅವರು ಹೆಸರಿನಲ್ಲಿ 101 ತೊಲಿ ಬಂಗಾರ ಹಾಗೂ 5 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ಹೊಂದಿದ್ದಾರೆ.

ಇತರೆ

ಕಾರಜೋಳರು ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 5 ಸಾವಿರ ರೂಪಾಯಿ ಮೌಲ್ಯದ ಒಂದು ಶೇರನ್ನು ಹೊಂದಿದ್ದಾರೆ.
ನವೀನ ಹಳೆಯದು