ಎಲೆಕ್ಷನ್ ಹೊತ್ತಲ್ಲೇ ಕಂತೆ, ಕಂತೆ ಹಣ ಸಾಗಾಟ; ಬರೋಬ್ಬರಿ 5 ಕೋಟಿ ರೂ. ನಗದು ಜಪ್ತಿ

ಮುಧೋಳ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಲೋಕಾಪುರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಲೋಕಾಪುರ ಬಳಿಯ ಲಕ್ಷಾನಟ್ಟಿ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸಲಾಗ್ತಿತ್ತು. ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಈ ಹಣವನ್ನ ಸಾಗಿಸಲಾಗುತ್ತಿತ್ತು. ಸಮರ್ಪಕ ದಾಖಲೆಯಿಲ್ಲದ ಹಿನ್ನೆಲೆ ಚುನಾವಣಾಧಿಕಾರಿಗಳು 5 ಕೋಟಿ ರೂಪಾಯಿ ಹಣವನ್ನ ಜಪ್ತಿ ಮಾಡಿದ್ದಾರೆ.


ಬೊಲೆರೋ ವಾಹನದಲ್ಲಿದ್ದವರು ಇದು ಯೂನಿಯನ್ ಬ್ಯಾಂಕ್‌ಗೆ ಸೇರಿದ ಹಣ ಎಂದು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ಯೂನಿಯನ್ ಬ್ಯಾಂಕ್‌ನಿಂದ ಮುಧೋಳ ಯೂನಿಯನ್ ಬ್ಯಾಂಕ್‌ಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ಸೂಕ್ತ ದಾಖಲೆ ನೀಡದ ಹಿನ್ನೆಲೆ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ನವೀನ ಹಳೆಯದು