Jobs: ಬಾಗಲಕೋಟೆ ಜಿಲ್ಲೆಯಾದ್ಯಂತ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮುಧೋಳ: ಬಾಗಲಕೋಟೆ ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಬಸವೇಶ್ವರ ವಿದ್ಯಾವರ್ಧಕ ಸಂಘವು ತನ್ನ ಶಾಲೆಗಳಿಗೆ ವಿವಿಧ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತ ಗಮನಹರಿಸುವುದರೊಂದಿಗೆ, ಸಂಘವು ತನ್ನ ಸಂಸ್ಥೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ವ್ಯಕ್ತಿಗಳನ್ನು ಹುಡುಕುತ್ತಿದೆ. ಬೋಧನೆಯಲ್ಲಿ ಆಸಕ್ತಿ ಹೊಂದಿರುವ ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅರ್ಜಿ ಸಲ್ಲಿಸಲು ಮತ್ತು ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ಒದಗಿಸುವ ಸಂಘದ ಧ್ಯೇಯೋದ್ದೇಶದ ಭಾಗವಾಗಲು ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಹುದ್ದೆಗಳ ವಿವರ

ಪದವಿ ಪೂರ್ವ ವಿಭಾಗ

ಹುದ್ದೆ: ಪ್ರಾಚಾರ್ಯರು

ವಿದ್ಯಾರ್ಹತೆ: ಎಂ.ಎ, ಎಂ.ಕಾಂ, ಬಿ.ಎಡ್ ಜೊತೆ 3 ವರ್ಷದ ಅನುಭವ

ಸ್ಥಳ: ಮುಧೋಳ & ರಾಮದುರ್ಗ ತಾಲೂಕ

------------------------------------------------

ಹುದ್ದೆ: ಉಪನ್ಯಾಸಕರು

ವಿದ್ಯಾರ್ಹತೆ: ಎಂ.ಎ./ಎಂ.ಕಾಂ/ಎಂ.ಎಸ್.ಸಿ, ಬಿ.ಎಡ್ ಜೊತೆ

ವಿಷಯಗಳು: ಇಂಗ್ಲೀಷ್,ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವಾಣಿಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಸ್ಥಳ: ಬಾಗಲಕೋಟೆ, ಮುಧೋಳ, ರಾಮದುರ್ಗ ತಾಲೂಕು

------------------------------------------------

ಪ್ರೌಢ ಶಾಲಾ ವಿಭಾಗ

ಹುದ್ದೆ: ಮುಖ್ಯಾಧ್ಯಾಪಕರು

ವಿದ್ಯಾರ್ಹತೆ: ಬಿ.ಎ. ಬಿ.ಎಡ್, ಬಿ.ಎಸ್ ಸ್ಸಿ, ಬಿ.ಎಡ್ ಪದವಿಯೊಂದಿಗೆ 5 ವರ್ಷ ಅನುಭವ ಹೊಂದಿದವರಗೆ ಆದ್ಯತೆ

ಸ್ಥಳ: ಬಾಗಲಕೋಟೆ, ಮುಧೋಳ, ಹುನಗುಂದ ತಾಲೂಕು

------------------------------------------------

ಹುದ್ದೆ: ಸಹ ಶಿಕ್ಷಕರು / ದೈಹಿಕ ಶಿಕ್ಷಕರು/ಚಿತ್ರಕಲಾ ಶಿಕ್ಷಕರು ವಿದ್ಯಾರ್ಹತೆ: ಬಿ.ಎ ಬಿ.ಎಡ್/ ಬಿಎಸ್ಸಿ ಬಿ.ಎಡ್/ ಬಿ.ಎ./ಬಿ.ಕಾಂ./ಬಿಎಸ್‌ಸಿ, ಬಿ.ಪಿ.ಬಿ.ಎಡ್/ಎ.ಎಂ.ಜಿ.ಡಿ/ ಡಿಪ್ಲೋಮಾ ಕಂಪ್ಯೂಟರ

ವಿಷಯ: ಕನ್ನಡ ಭಾಷೆ/ ಇಂಗ್ಲೀಷ್ ಹಿಂದಿ/ಸಂಸ್ಕೃತ/ ವಿಜ್ಞಾನ(ಪಿಸಿಎಂ). ವಿಜ್ಞಾನ(ಸಿಬಿಜಡ್) ಕಲಾ | ದೈಹಿಕ ಶಿಕ್ಷಕ /ಚಿತ್ರಕಲಾ ಶಿಕ್ಷಕ/ ಕಂಪ್ಯೂಟರ ಶಿಕ್ಷಕ

ಸ್ಥಳ: ಸ್ಥಳ:ಬಾಗಲಕೋಟೆ, ಮುಧೋಳ, ರಾಮದುರ್ಗ, ಹುನಗುಂದ ತಾಲೂಕು

------------------------------------------------

ಹುದ್ದೆ: ದ್ವಿತೀಯ ದರ್ಜೆ ಸಹಾಯಕ

ವಿದ್ಯಾರ್ಹತೆ: ಬಿ.ಕಾಂ./ಬಿಎಸ್ಸಿ/ಬಿ.ಎ./ ಬಿಸಿಎ/ಬಿಬಿಎ ಜೊತ ಕಂಪ್ಯೂಟರ ಜ್ಞಾನ ಅವಶ್ಯವಾಗಿ ಇರಬೇಕು.

ಕಚೇರಿ ಕೆಲಸಕ್ಕಾಗಿ Tally/Computer ಹೊಂದಿದವರೆಗೆ ಹೆಚ್ಚಿನ ಆದ್ಯತೆ

ಸ್ಥಳ: ಸ್ಥಳ:ಬಾಗಲಕೋಟೆ, ಮುಧೋಳ, ರಾಮದುರ್ಗ, ಬದಾಮಿ ತಾಲೂಕು

------------------------------------------------

ಹುದ್ದೆ: ವಾಹನ ಚಾಲಕರು (ಭಾರಿ ವಾಹನ)

ಅನುಭವ ಹೊಂದಿದವರಿಗೆ ಹೆಚ್ಚಿನ ಆದ್ಯತೆ ಕೊಡಲಾಗುವದು.

ಸ್ಥಳ: ಬಾಗಲಕೋಟೆ, ಮುಧೋಳ, ರಾಮದುರ್ಗ ತಾಲೂಕು

------------------------------------------------

ಮೇಲ್ಕಾಣಿಸಿದ ಎಲ್ಲ ಹುದ್ದೆಗಳು ಅನುದಾನ ರಹಿತ ಇರುತ್ತದೆ, ಅನುಭವ ಮತ್ತು ಅರ್ಹತೆ ತಕ್ಕಂತೆ ವೇತನವನ್ನು ಸಂಘದ ನಿಯಮಾವಳಿಯ ಪ್ರಕಾರ ನೀಡಲಾಗುವದು, ಅಭ್ಯರ್ಥಿಗಳು ಈ ಪ್ರಕಟಣೆಯ ದಿನಾಂಕದಿಂದ 10 ದಿನದ ಒಳಗಾಗಿ ಅರ್ಜಿಯನ್ನು ಕಾರ್ಯಾಧ್ಯಕ್ಷರು, ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಬಾಗಲಕೋಟ ಇವರ ಹೆಸರಿನಲ್ಲಿ ಕಳುಹಿಸಬೇಕು. ಅಥವಾ atmsomu@gmail.com ಗೆ ಅರ್ಜಿಯನ್ನು ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಧ್ಯಕ್ಷರು, ಹೈಸ್ಕೂಲ ಆಡಳಿತ ಮಂಡಳಿ ಬವಿವಿ ಸಂಘ,ಬಾಗಲಕೋಟ, ಕಚೇರಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ.

ನವೀನ ಹಳೆಯದು