ಬಾಗಲಕೋಟೆಗೆ ಸಂಚರಿಸುವ ಈ ರೈಲುಗಳ ಸೇವೆಯಲ್ಲಿ ವ್ಯತ್ಯಯ

ಮುಧೋಳ: ಆಲಮಟ್ಟಿ-ವಂದಾಲ ನಿಲ್ದಾಣಗಳ ನಡುವಿನ ಇಂಜಿನಿಯರಿಂಗ್ ಕೆಲಸಗಳನ್ನು ಕೈಗೊಳ್ಳುವುದರಿಂದ ಕೆಳಗಿನ ಕೆಲವು ರೈಲುಗಳ ರದ್ದು, ಭಾಗಶಃ ರದ್ದು ಮಾಡಲಾಗಿದೆ.

ಹುಬ್ಬಳ್ಳಿ- ವಿಜಯಪುರ ನಡುವೆ ಚಲಿಸುವ ರೈಲು ಸಂಖ್ಯೆ" 06919/06920 ದೈನಂದಿನ ವಿಶೇಷ ಪ್ಯಾಸೆಂಜರ್ ರೈಲನ್ನು ಮಾರ್ಚ್ 15 ಮತ್ತು 18 ರಂದು ರದ್ದುಗೊಳಿಸಲಾಗಿದೆ. ಮಾರ್ಚ್ 14 ಮತ್ತು 17 ರಂದು ಮಂಗಳೂರು ಜಂಕ್ಷನ್-ವಿಜಯಪುರ ನಡುವೆ ಚಲಿಸುವ ರೈಲು ಸಂಖ್ಯೆ 07378 ವಿಶೇಷ ಎಕ್ಸ್‌ಪ್ರೆಸ್ ಬಾಗಲಕೋಟೆ-ವಿಜಯಪುರ ನಡುವೆ ರದ್ದುಗೊಳಿಸಲಾಗುತ್ತದೆ. ಈ ರೈಲು ಮಂಗಳೂರು- ಬಾಗಲಕೋಟೆ ನಡುವೆ ಮಾತ್ರ ಚಲಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ನವೀನ ಹಳೆಯದು