ಸೇವೆ ನ್ಯೂನತೆ: ಮುಧೋಳ ಎಸ್‌ಬಿಐ ಬ್ಯಾಂಕ್‌ಗೆ ದಂಡ

ಮುಧೋಳ: ಸೇವಾ ನ್ಯೂನತೆಗಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಮುಧೋಳ ಶಾಖೆಗೆ ಗ್ರಾಹಕರ ಕುಂದು ಕೊರತೆಗಳ ನ್ಯಾಯಾಲಯ ದಂಡ ವಿಧಿಸಿದೆ.  ಮುಧೋಳ ತಾಲೂಕ ದಾದ “ನಟ್ಟಿಯ ಲಕ್ಷ್ಮಣ ನಿಂಗನಗೌಡರ, ಅವರ ಎಸ್‌ಬಿಐ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿ ಪ್ರತಿವರ್ಷ ಈ ಖಾತೆಯಿಂದ ವಿಮೆ ಹಣ ಮುರಿಯುತ್ತ ಬರಲಾಗಿತ್ತು. ಅವರು ನಿಧನರಾಗಿದ್ದರಿಂದ ವಾರಸುದಾರರಾದ ಪತ್ನಿ ಶ್ರೀಮತಿ ಸುವರ್ಣಾ ಅರ್ಜಿ ಸಲ್ಲಿಸಿ ವಿಮೆ ಹಣ ವಿಮಾ ಮೊತ್ತ 2 ಲಕ್ಷ ರೂ ಕೋರಿದಾಗ ವಿಮಾ ಪಾಲಸಿಯೇ ಮಾಡಿಲ್ಲ ಎಂದು ಬ್ಯಾಂಕಿನವರು ವಾದಿಸಿದ್ದಾರೆ.

ಇದರಿಂದ ನೊಂದ ಶ್ರೀಮತಿ ಸುವರ್ಣಾ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಎಸ್‌ಬಿಐ ಶಾಖಾ ವ್ಯವಸ್ಥಾಪಕ ಹಾಗೂ ನ್ಯಾಷನಲ್ ಇನ್ಸುರೆನ್ಸ್ ಕಂಪನಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ವಿರುಧ್ದbದೂರು ಸಲ್ಲಿಸಿದ್ದು ವಿಚಾರಣೆ ಆರಂಭವಾಗುತ್ತಿದ್ದಂತೆ ಬ್ಯಾಂಕ್‌ ದೂರುದಾರರ ಖಾತೆಗೆ 2 ಲಕ್ಷ ರೂ ವಿಮೆ ಜಮೆ ಮಾಡಿದ್ದು ಅರ್ಜಿಯನ್ನು ತಪ್ಪಾಗಿ ಇನ್ನಾರನ್ನ ಕಂಪನಿಗೆ ಕಳುಹಿಸಿದ್ದಾಗಿ ಹೇಳಲಾಗಿದೆ. ಸೇವಾ ನಿವೃತ್ತಿ ಎಂದು ಭಾವಿಸಿ ಆಯೋಗ 2 ಲಕ್ಷ ರೂಗೆ ಶೇ 6 ರಂತೆ 13 ಸಾವಿರ ರೂ ಬಡ್ಡಿ, ಮಾನಸಿಕ ವ್ಯಥೆಗೆ 5 ಸಾವಿರ ರೂ ಹಾಗೂ ದಾವಾ ವೆಚ್ಚ ಎಂದು 2 ಸಾವಿರ ರೂಗಳನ್ನು ಕೊಡಲು ಆಯೋಗದ ಅಧ್ಯಕ್ಷ ವಿಜಯ ಕುಮಾರ ಪಾವಲೆ ಸದಸ್ಯರಾದ ರಂಗನಗೌಡ ದಂಡನ್ನವರ, ಸಮಿವುನ್ನಿಸಾ ಆವಾರ ಅವರಿದ್ದ ಪೀಠ ಆದೇಶಿಸಿದೆ.

ನವೀನ ಹಳೆಯದು