Lokapur chariot festival: ಲೋಕೇಶ್ವರ ಅದ್ದೂರಿ ರಥೋತ್ಸವ


ಲೋಕಾಪುರದ ಆರಾಧ್ಯದೈವ ಲೋಕೇಶ್ವರ ಜಾತ್ರೆಯ ನಿಮಿತ್ತ ರವಿವಾರ ಸಂಜೆ 6.15 ಗಂಟೆಗೆ ಅಪಾರ ಭಕ್ತಾದಿಗಳ ಮಧ್ಯೆ ರಥೋತ್ಸವ ವಿಜೃಂಭಣೆಯಿಂದ ನೇರವೇರಿತು.

ರಥವನ್ನು ವಿವಿಧ ಬಣ್ಣ ಬಣ್ಣದ ಬಟ್ಟೆಗಳಿಂದ, ರುದ್ರಾಕ್ಷಿ ಮಾಲೆ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. ರಥಕ್ಕೆ ಕಳಾಸರೋಹಣ ತುದಿಯಲ್ಲಿ ವರ್ಣಾಲಂಕಾರ ಧ್ವಜವನ್ನು ಕಟ್ಟಲಾಗಿತ್ತು. ಬಳಿಕ ನವರತ್ನ ಹಾಗೂ ಫಲ ಪುಷ್ಪಾಲಂಕಾರ, ಹೂವಿನಿಂದ ಕಂಗೊಳಿಸುವ ಶ್ರೀ ಲೋಕನಾಥ
ವಿಗ್ರಹವನ್ನು ರಥದಲ್ಲಿರಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸಾಗುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಲೋಕೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಹಾದೇವ ಜೈಕಾರ ಹಾಕುತ್ತಾ ರಥ ಎಳೆದು ಪುನೀತರಾದರು. ಲೋಕೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ರಥ ಬೆಳಗಾವಿ-ರಾಯಚೂರ ರಾಜ್ಯ ಹೆದ್ದಾರಿ ರಸ್ತೆಯ ಮೇಲೆ ಸಾಗುತ್ತಿದ್ದಂತಯೇ ಭಕ್ತರು ಬಾಳೆಹಣ್ಣು, ಉತ್ತತ್ತಿ, ಹೂ, ಹಣ್ಣು, ನಾಣ್ಯಗಳನ್ನು ರಥದತ್ತ ಎಸೆದು ಭಕ್ತಿಸೇವೆ ಸಮರ್ಪಿಸಿದರು. ರಥದಲ್ಲಿ ಆಸೀನರಾದ ಸ್ವಾಮೀಜಿ ಭಕ್ತರತ್ತ ಎಸೆದ ಪ್ರಸಾದ ಹಿಡಿಯಲು ನಾಮುಂದು ತಾ ಮುಂದು ಎಂದು ನೂಕುನುಗ್ಗಲು ನಡೆಯಿತು.

ರಥೋತ್ಸವ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿ ಮರಳಿ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತ್ತು.

ರಥೋತ್ಸವದಲ್ಲಿ ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವದ ಮುಂಚೆ ನಂದಿಕೋಲ, ಜಾಂಜ್ ದೊಂದಿಗೆ ಹಲವು ಮೇಳಗಳೊಂದಿಗೆ ಮೆರವಣೆಗೆಯ ಮುಖಾಂತರ ದೇಸಾಯಿಯವರ ವಾಡೆಯಿಂದ ಮೇನ ಬಜಾರ, ಶ್ರೀ ಬಸವೇಶ್ವರ ವೃತ್ತದ ಮಾರ್ಗವಾಗಿ ಶ್ರೀಲೋಕೇಶ್ವರ ದೇವಸ್ಥಾನ ಬಂದು ತಲುಪಿತು. ಜಾತ್ರೆಯ ನಿಮಿತ್ಯ ದೇವಸ್ಥಾನವನ್ನು ದೀಪ ಅಲಂಕಾರದಿಂದ ಅಲಂಕರಿಸಲಾಗಿತ್ತು.

ಸ್ಥಳೀಯ ಗಣ್ಯರಾದ ಲೋಕಣ್ಣ ಚನ್ನಪ್ಪ ಉದಪುಡಿ, ಅವರ ಸಹಕಾರದೊಂದಿಗೆ ಜಾತ್ರಾ ಕಮೀಟಿಯ ಅಧ್ಯಕ್ಷ ಕಿರಣರಾವ ದೇಸಾಯಿ ಇವರ ನೇತೃತ್ವದಲ್ಲಿ ರಥೋತ್ಸವ ನೆರವೇರಿತು. .

ಸಿಪಿಐ ಚನ್ನಪ್ಪ ಅಯ್ಯನಗೌಡ ಪಾಟೀಲ, ಠಾಣಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ ಹಾಗೂ ಪೋಲಿಸ್ ಸಿಬ್ಬಂದಿ ಪೋಲಿಸ್ ಬಂದುಬಸ್ತ ಮಾಡಲಾಗಿತ್ತು.

ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಲೋಕಾಪುರ & ಲೋಕೇಶ್ವರನ ಇತಿಹಾಸ

ಇಂದಿನ ಲೋಕಾಪುರ ಗ್ರಾಮವನ್ನು ರಾಷ್ಟ್ರಕೂಟರ ಅರಸು ಮನೆತನದ ಸಾಮಂತರಾದ ಚಲ್ಲಕೇತನ ಮನೆತನದ ಅರಸನಾದ ವಿರಂಬಕೆಯನ ದ್ವಿತೀಯ ಲೋಕಾಧಿತ್ಯ (ಲೋಕಟೆ) ನು ತನ್ನ ತಂದೆ (ವಿರಂಬಕೆ) ಯ ನೆನಪಿಗೋಸ್ಕರ ಬಂಕಾಪೂರ ಹಾಗೂ ತನ್ನ (ಲೋಕಾಧಿತ್ಯ) ಹೆಸರಿನಲ್ಲಿ ಲೋಕಾಪುರವನ್ನು ಏಕಕಾಲದಲ್ಲಿ ಕ್ರಿ.ಶ 898 ರಲ್ಲಿ ಸ್ಥಾಪಿಸಿದನು. ಲೋಕ ಮಾಹೇಶ್ವರಿ ದೇವಾಲಯ - ಲೋಕನಾಥ ಬಸದಿ, ಲೋಕ ಸಮುದ್ರ ಸರೋವರ ಸಹ ನಿರ್ಮಿಸಿದನು ಎಂಬುದು ಲೋಕಾಪುರದ ಶಾಸನ ತಿಳಿಸುತ್ತದೆ. 
ಲೋಕೇಶ್ವರ ದೇವಾಲಯದಲ್ಲಿನ ರಾಷ್ಟ್ರಕೂಟರ ಶಾಸನ
ಲೋಕೇಶ್ವರ ದೇವಾಲಯ ರಾಷ್ಟ್ರಕೂಟ ಅರಸರು ವಿಷ್ಣುನ ಭಕ್ತರಾಗಿದ್ದರೂ ಸಹ ಜೈನಧರ್ಮದ ಕಡೆಗೆ ಅವರು ವಿಶೇಷ ಆಸಕ್ತಿ ವಹಿಸಿದ್ದರು. ಆದರೆ ರಾಷ್ಟ್ರಕೂಟರ ಸಾಮಂತರಾದ ಚಲಚೇತನ ಮನೆತನದ ಅರಸರಾದ ಬಂಕೇಯು ಲೋಕಾಧಿತ್ಯ (ಲೋಕಟೆ ) ನು ಜೈನ ಧರ್ಮ ಪ್ರಸಾರದ ಹೆಚ್ಚಳಕ್ಕೆ ಹಗಲಿರುಳು ಶ್ರಮಿಸಿದರು. ಅಂದಿನ ಲೋಕ ಮಾಹೇಶ್ವರಿ ದೇವಾಲಯ ಇಂದು ಭಕ್ತರ ಆರಾಧ್ಯ ದೈವ ಲೋಕದೊಡೆಯ ಶ್ರೀಲೋಕೇಶ್ವರ ದೇವಾಲಯ ಎಂದು ಪ್ರಖ್ಯಾತಿ ಪಡೆದಿದೆ.
ನವೀನ ಹಳೆಯದು