Women IPL 2023: ಮಹಿಳಾ ಐಪಿಎಲ್ ಹರಾಜು ಸ್ಥಳ, ದಿನಾಂಕ, ತಂಡದ ಪರ್ಸ್ ಮೌಲ್ಯ, ಟಿವಿ & ನೇರಪ್ರಸಾರ

2023ರ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್‌ ಚೊಚ್ಚಲ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಅದಕ್ಕೂ ಮುಂಚಿತವಾಗಿ ಹರಾಜು ಪ್ರಕ್ರಿಯೆ ಪೂರ್ಣಗೊಳಲ್ಲಿದೆ. ಸದ್ಯ ಭಾರತ ಸೇರಿದಂತೆ ಹಲವು ದೇಶದ ಆಟಗಾರ್ತಿಯರು ಫೆ.10ರಿಂದ ಆರಂಭವಾಗುವ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಗೆ ಸಜ್ಜಾಗುತ್ತಿದ್ದಾರೆ.

ಬೆಂಗಳೂರು, ದೆಹಲಿ, ಗುಜರಾತ್ ಜೈಂಟ್ಸ್, ಲಕ್ನೋ ಮತ್ತು ಮುಂಬೈ ಒಟ್ಟು ಐದು ತಂಡಗಳು ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಉದ್ಘಾಟನಾ ಋತುವಿನಲ್ಲಿ ಭಾಗವಹಿಸಲಿವೆ.

ಮಹಿಳಾ ಐಪಿಎಲ್ 2023ರ ಹರಾಜು ಪ್ರಕ್ರಿಯೆ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಫೆಬ್ರವರಿ 12ರಂದು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಭಾರತ ವನಿತೆಯರು ಟಿ20 ವಿಶ್ವಕಪ್‌ನ ತಮ್ಮ ಆರಂಭಿಕ ಪಂದ್ಯವನ್ನು ಆಡಲಿದ್ದಾರೆ.

ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನ ಪಾಕಿಸ್ತಾನ ವಿರುದ್ಧ ಮಹತ್ವದ ಪಂದ್ಯ ಆಡಲಿದ್ದೇವೆ ಮತ್ತು ನಾವು ಅದರ ಮೇಲೆ ಗಮನ ಹರಿಸಿದ್ದೇವೆ,' ಎಂದು ಟಿ20 ವಿಶ್ವಕಪ್ ನಾಯಕಿಯರ ಪತ್ರಿಕಾಗೋಷ್ಠಿಯಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಹೇಳಿದರು.

'ಟಿ20 ವಿಶ್ವಕಪ್ ಎಲ್ಲಕ್ಕಿಂತ ಮುಖ್ಯವಾಗಿದೆ. ನಮ್ಮ ಗಮನ ಐಸಿಸಿ ಟ್ರೋಫಿ ಮೇಲಿರಲಿದೆ. ಐಪಿಎಲ್ ಹರಾಜಿನ ಬಗ್ಗೆ ತಲೆಕಡೆಸಿಕೊಳ್ಳಲ್ಲ. ನಮ್ಮ ಗಮನ ಯಾವುದರ ಮೇಲೆ ಇರಬೇಕೆಂದು ಎಂದು ನಮಗೆ ತಿಳಿದಿದೆ,' ಎಂದರು.

ಮುಂಬರುವ ಮಹಿಳಾ ಐಪಿಎಲ್ ಲೀಗ್‌ನಲ್ಲಿ ಆಡಲಿರುವ ತನ್ನ ಹೊಸ ಫ್ರಾಂಚೈಸಿಯ ಮಹಿಳಾ ಕೋಚಿಂಗ್ ಬಳಗವನ್ನು ಮುಂಬೈ ಇಂಡಿಯನ್ಸ್ ತಂಡ ಪ್ರಕಟಿಸಿದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇನ್ನು ಪದ್ಮಶ್ರೀ-ಅರ್ಜುನ ಪ್ರಶಸ್ತಿ ವಿಜೇತೆ ಹಾಗೂ ಭಾರತ ತಂಡದ ಮಾಜಿ ವೇಗಿ ಜೂಲನ್ ಗೋಸ್ವಾಮಿ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಆಗಿ ಎರಡು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮುಂದಿನ ಸೋಮವಾರ (ಫೆಬ್ರವರಿ 13) ರಂದು ಉದ್ಘಾಟನಾ ಮಹಿಳಾ ಐಪಿಎಲ್ 2023ರ ಹರಾಜಿನ ಕುರಿತು ಮಹತ್ವದ ಮಾಹಿತಿ ಇಲ್ಲಿದೆ.

ಸ್ಥಳ ಮತ್ತು ದಿನಾಂಕ: ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (WIPL) 2023ರ ಹರಾಜು ಪ್ರಕ್ರಿಯೆ ಸೋಮವಾರ, ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದೆ.

ತಂಡಗಳು: ಉದ್ಘಾಟನಾ ಮಹಿಳಾ ಐಪಿಎಲ್ ಋತುವಿನಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಗುಜರಾತ್, ಲಕ್ನೋ ಹೆಸರಿನಲ್ಲಿ ಐದು ತಂಡಗಳ ಫ್ರಾಂಚೈಸಿಗಳಿವೆ.

ತಂಡಗಳ ಪರ್ಸ್ ಮೌಲ್ಯ: ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಹರಾಜಿನಲ್ಲಿ ಪ್ರತಿ ತಂಡ ತಲಾ 12 ಕೋಟಿ ರೂ.ಗಳನ್ನು ಹೊಂದಿರುತ್ತದೆ.

ತಂಡದಲ್ಲಿರಬೇಕಾದ ಒಟ್ಟು ಆಟಗಾರ್ತಿಯರು: 2023ರ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಪ್ರತಿ ತಂಡವು 15ರಿಂದ 18 ಆಟಗಾರ್ತಿಯರನ್ನು ಖರೀದಿಸಬೇಕು. ಏಳು ಆಟಗಾರ್ತಿಯರು ವಿದೇಶಿ ಆಟಗಾರರಾಗಿರಬೇಕು.

ಅನ್‌ಕ್ಯಾಪ್ಡ್ ಆಟಗಾರ್ತಿಯರ ಮೂಲ ಬೆಲೆ: ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರ್ತಿಯರ ಮೂಲ ಬೆಲೆ 10 ಲಕ್ಷ ರೂ.ನಿಂದ 20 ಲಕ್ಷ ರೂ. ನಡುವೆ ಇರಲಿದೆ.

ಕ್ಯಾಪ್ಡ್ ಆಟಗಾರ್ತಿಯರ ಮೂಲ ಬೆಲೆ: ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜಿನಲ್ಲಿ ಕ್ಯಾಪ್ಡ್ ಆಟಗಾರ್ತಿಯರ ಮೂಲ ಬೆಲೆ 30 ಲಕ್ಷ ರೂ.ನಿಂದ 50 ಲಕ್ಷ ರೂ. ನಡುವೆ ಇರಲಿದೆ.

ಪಂದ್ಯಗಳು ನಡೆಯುವ ಸ್ಥಳಗಳು: ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಮೊದಲ ಋತುವಿನಲ್ಲಿ ಮುಂಬೈ ಮತ್ತು ನವಿ ಮುಂಬೈನ ಸ್ಟೇಡಿಯಂನಲ್ಲಿ ಐದು ತಂಡಗಳು ಆಡಲಿವೆ.

ಟಿವಿ ಮತ್ತು ನೇರಪ್ರಸಾರ: ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಹರಾಜು ಪ್ರಕ್ರಿಯೆಯನ್ನು Sports 18 ಟಿವಿ ಚಾನೆಲ್‌ಗಳಲ್ಲಿ ನೇರಪ್ರಸಾರ ಮತ್ತು Jio Cinema ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ನವೀನ ಹಳೆಯದು