Theatre ಶಿವಕಲ್ಯಾಣ ಚಿತ್ರಮಂದಿರ ಇನ್ನು ನೆನಪು ಮಾತ್ರ

ಮುಧೋಳ: ಜನವರಿ 18, 1981 ರಂದು ವೇದಮೂರ್ತಿ ಉತ್ತೂರು ಶ್ರೀ ಬಸಯ್ಯ ಅಜ್ಜನವರ ಅಮೃತ ಹಸ್ತದಿಂದ ಡಾ. ರಾಜಕುಮಾರ್ ಅಭಿನಯದ ಶ್ರೀನಿವಾಸ ಕಲ್ಯಾಣ ಚಲನಚಿತ್ರದಿಂದ ಪ್ರಾರಂಭವಾದ ಚಿತ್ರಮಂದಿರ, ಸತತ ನಾಲ್ಕು ದಶಕಗಳ ಕಾಲ ನಮ್ಮ ಮುಧೋಳ ತಾಲೂಕಿನ ಜನರನ್ನು ಮನರಂಜಿಸುತ್ತಾ ಬಂದಿದ್ದ ಈ ಚಿತ್ರಮಂದಿರವು ಇನ್ನು ಕೆಲವೇ ದಿನಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮಲ್ಟಿಪ್ಲೆಕ್ಸ್ (Multiplex) ಆಗಿ ಪರಿವರ್ತನೆ ಹೊಂದಲಿದೆ. 

ನಗರದ ಐಕಾನಿಕ್ ಚಿತ್ರಮಂದಿರ ಎನಿಸಿಕೊಂಡಿದ್ದ, ಹತ್ತಾರು ಜನರಿಗೆ ಉದ್ಯೋಗ ಕೊಟ್ಟಂತಹ ಈ ಚಿತ್ರಮಂದಿರ ಹೆಚ್ಚಿನ ನಿರ್ವಹಣೆಯನ್ನು ನಿಭಾಯಿಸಲು ಸಾಧ್ಯವಾಗದೆ, ಏಕ-ಪರದೆಯ (single screen) ಸಿನೆಮಾ ಹಾಲ್‌ ಶಾಶ್ವತ ಮುಚ್ಚುವಿಕೆಗೆ ಆಶ್ರಯಿಸಿದೆ.

ಅತ್ಯಂತ ಸಾಂಪ್ರದಾಯಿಕ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಈ ಚಿತ್ರಮಂದಿರ ನಗರದ ಜನತೆಯ ಪ್ರೀತಿಗೆ ಪಾತ್ರವಾಗಿತ್ತು, ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ ಆಗಿವೆ, ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಅನಂತ್ ಕುಮಾರ್ ಅವರು ನಟಿಸಿದ ಚಿತ್ರಗಳು ಈ ಚಿತ್ರಮಂದಿರದಲ್ಲಿ ಅತಿ ಹೆಚ್ಚು ಪ್ರದರ್ಶನ ಕಾಣುತ್ತಿದ್ದವು.

ಅದರಲ್ಲೂ ಡಾ. ವಿಷ್ಣುವರ್ಧನ್ ಅವರು ನಟಿಸಿದ ಯಜಮಾನ ಚಿತ್ರವನ್ನು ರಾತ್ರಿಯುದ್ದಕ್ಕೂ ಟಿಕೆಟ್ ಗಾಗಿ ಕಾದು, ಟ್ಯಾಕ್ಟರ್, ಎತ್ತಿನಗಾಡಿಯಲ್ಲಿ ಬಂದು ನೋಡಿದಂತಹ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ನಾನು ಈ ಚಿತ್ರಮಂದಿರದಲ್ಲಿ ಇತ್ತೀಚೆಗೆ ನೋಡಿದ ಸಿನೆಮಾ ಪುನೀತ್ ಅಭಿನಯದ ಜೇಮ್ಸ್.

ಚಿತ್ರಮಂದಿರದ ಮಾಲೀಕರಾದ ಶ್ರೀ ಕತ್ತಿ ಅವರು ಹೊಸ ಆಲೋಚನೆಯೊಂದಿಗೆ ಚಿತ್ರಮಂದಿರವನ್ನು ಕೆಡವಿ ಎರಡು ಪರದೆಯ ಮಲ್ಟಿಪ್ಲೆಕ್ಸ್‌ನೊಂದಿಗೆ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ, ಮತ್ತೆ ಮುಧೋಳ ಜನತೆಯನ್ನು ಮನರಂಜಿಸಲು ಅನುವು ಮಾಡುತ್ತಿರುವ ಇವರುಗಳಿಗೆ ಶುಭವಾಗಲಿ.

ನವೀನ ಹಳೆಯದು