SSLR Recruitment 2023: ಸರ್ವೇ ಸೆಟಲ್ಮೆಂಟ್ & ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ (Survey Settlement and Land Records Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2000 ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ (Licensed Landlords) ಹುದ್ದೆಗಳು ಖಾಲಿ ಇದ್ದು, ಪಿಯುಸಿ, ಡಿಪ್ಲೋಮಾ, ಬಿಇ, ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 20, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ: ಕರ್ನಾಟಕ ರಾಜ್ಯ ಕಂದಾಯ ಇಲಾಖೆ
ಹುದ್ದೆ: ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್
ಒಟ್ಟು ಹುದ್ದೆ: 2000
ವಿದ್ಯಾರ್ಹತೆ: ಪಿಯುಸಿ, ಡಿಪ್ಲೊಮಾ, ಎಂಜಿನಿಯರಿಂಗ್
ವೇತನ: ನಿಯಮಾನುಸಾರ
ಉದ್ಯೋಗದ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 20, 2023
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹುದ್ದೆಗಳಿವೆ?
ಉಡುಪಿ- 86, ಉತ್ತರ ಕನ್ನಡ- 75, ಕೊಡಗು- 25, ಕೋಲಾರ- 53, ಗದಗ- 54, ಚಿಕ್ಕಮಗಳೂರು- 83, ಚಿತ್ರದುರ್ಗ- 73, ಚಾಮರಾಜನಗರ- 35, ತುಮಕೂರು- 110, ದಕ್ಷಿಣ ಕನ್ನಡ- 36, ದಾವಣಗೆರೆ- 95, ಧಾರವಾಡ- 92, ಬೆಂಗಳೂರು ಗ್ರಾಮಾಂತರ- 66, ಬೆಂಗಳೂರು ಜಿಲ್ಲೆ- 125, ಬಿಜಾಪುರ- 32, ಬೆಳಗಾವಿ - 85 ಬಳ್ಳಾರಿ- 55, ವಿಜಯನಗರ- 47, ಬಾಗಲಕೋಟೆ- 47, ಬೀದರ್- 35, ಮಂಡ್ಯ- 71, ಮೈಸೂರು- 40, ಯಾದಗಿರಿ- 20, ರಾಮನಗರ - 100, ರಾಯಚೂರು- 40, ಶಿವಮೊಗ್ಗ- 125z ಹಾವೇರಿ- 152, ಹಾಸನ- 60, ಕೊಪ್ಪಳ- 28, ಕಲಬುರಗಿ- 10, ಚಿಕ್ಕಬಳ್ಳಾಪುರ- 45, ಒಟ್ಟು -2000 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್, ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಲೈಸೆನ್ಸ್ಡ್ ಲ್ಯಾಂಡ್ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 20, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 65 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅನುಭವ:
ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಲ್ಯಾಂಡ್ ಸರ್ವೇ ರೆವೆನ್ಯೂ ಸಿಸ್ಟಮ್ನಲ್ಲಿ ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಪಾವತಿಸುವ ವಿಧಾನ- ಆನ್ಲೈನ್
ಇತರೆ ಶುಲ್ಕ:
ಟ್ರೈನಿಂಗ್ ಶುಲ್ಕ- 5000 ರೂ. (ಡಿಮ್ಯಾಂಡ್ ಡ್ರಾಫ್ಟ್)
ಲೈಸೆನ್ಸ್ ಶುಲ್ಕ- 3000 ರೂ.
ಆಯ್ಕೆ ಪ್ರಕ್ರಿಯೆ: ಆನ್ಲೈನ್ ಟೆಸ್ಟ್ ಲಿಖಿತ ಪರೀಕ್ಷೆ
ವೇತನ: ನಿಗದಿಪಡಿಸಿಲ್ಲ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 20, 2023
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್- 080-22221038 ಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರೊಳಗೆ ಕರೆ ಮಾಡಿ.