ವಾಹನ ಸಂಚಾರಕ್ಕೆ ಅಡ್ಡಿ ಆರೋಪ; ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಿದ ನಗರಸಭೆ

ರಸ್ತೆ ಆಸುಪಾಸಿನಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ ಎಂದಿರುವ ಮುಧೋಳ ನಗರಸಭೆ, ಪಟ್ಟದ ಪ್ರಮುಖ ರಸ್ತೆಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳು ಸ್ಥಳಾಂತರ ಮಾಡಿದೆ. 

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಗರಸಭೆ ಪಕ್ಕದಲ್ಲಿಯೇ ಅಗ್ನಿಶಾಮಕ ದಳದ ಕಚೇರಿಯೂ ಇದೆ. ಅದರ ಸಮೀಪವೇ ಅಗ್ನಿಶಾಮಕ ದಳದ ವಾಹನಗಳು ನಿಲ್ಲುತ್ತವೆ. ಅದೇ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಅಂಗಡಿ ಹಾಕಿಕೊಳ್ಳುವುದರಿಂದ ತುರ್ತು ಸಮಯದಲ್ಲಿ ಅಗ್ನಿಶಾಮಕ ವಾಹನಗಳು ತೆರಳಲು ತೊಂದರೆಯಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. 

ಕಳೆದ ಮೂರು ದಿನಗಳ ಹಿಂದೆ ಆ ರಸ್ತೆಯಲ್ಲಿ ಅಂಗಡಿ ತೆರೆಯದಂತೆ ಬೀದಿ ಬದಿ ವ್ಯಾಪಾರಿಗಳಿಗೆ ಪೌರಾಯುಕ್ತರು ನೋಟಿಸ್ ನೀಡಿದ್ದರು. ಶುಕ್ರವಾರ ದಿಢೀರ್‌ ದಾಳಿ ನಡೆಸಿ, ವ್ಯಾಪಾರಿಗಳು ಸ್ಥಳಾಂತರಿಸಿದ್ದಾರೆ.

"ರಸ್ತೆ ಆಸುಪಾಸಿನಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ ಎಂದಿರುವ ಮುಧೋಳ ನಗರಸಭೆ, ಪಟ್ಟದ ಪ್ರಮುಖ ರಸ್ತೆಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳು ಸ್ಥಳಾಂತರ ಮಾಡಿದೆ.

ನವೀನ ಹಳೆಯದು