Akka Anu Govt Schools ಯಾರ್ ಈ ಕೆಚ್ಚೆದೆಯ ಕನ್ನಡತಿ ಅಕ್ಕ ಅನು? ಸರ್ಕಾರಿ ಶಾಲೆಗಳನ್ನು ಕಂಡರೆ ಯಾಕಿಷ್ಟು ಪ್ರೀತಿ?

ಇಂದು ನಾವು ನಿಮಗೆ ಓರ್ವ ವಿಶೇಷವಾದ ವ್ಯಕ್ತಿಯ ಬಗ್ಗೆ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ ಇವರು ಮೂಲತಃ ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಚಿಕ್ಕಬೇರಗಿ ಗ್ರಾಮದವರು. ಇವರು ಕೇವಲ ಸಾಮಾನ್ಯ ಯುವತಿ ಮಾತ್ರ ಅಲ್ಲ ಕೆಚ್ಚೆದೆಯ ಕನ್ನಡತಿಯು ಹೌದು. ಹಾಗಾದರೆ ಇವರು ಯಾರು ಎಂಬ ಪ್ರಶ್ನೆ ಈಗ ನಿಮ್ಮನ್ನು ಕಾಡುತ್ತಿದ್ದರೆ ಅವರು ಬೇರೆ ಯಾರೂ ಅಲ್ಲ ಅವರೇ ಅಕ್ಕ ಎಂದು ಪ್ರಸಿದ್ಧರಾಗಿರುವ ಅನು ಅವರು. ಇವತ್ತಿನ ದಿನ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹೆಸರು ಹೆಚ್ಚು ಪ್ರಸ್ತುತ.

ಇವರ ಮೂಲ ಹೆಸರು ಅನು, ಇವರು ತಮ್ಮನ್ನು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡ ಕಾರಣ ಜನರು ಇವರನ್ನು ಅಕ್ಕ ಎಂದು ಗೌರವದಿಂದ ಕರೆದರು ಹಾಗೂ ಇವರಿಗೂ ಕೂಡ ಜನರಿಂದ ಅಕ್ಕ ಅನು ಎಂದು ಕರೆಸಿಕೊಳ್ಳುವುದಕ್ಕೆ ಇಷ್ಟ ಮತ್ತು ಹೆಮ್ಮೆಯಂತೆ. ಅನು ಅವರ ಊರುಗಳ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುತ್ತಾರೆ. ಅದರಲ್ಲಿ ಹೆಣ್ಣುಮಕ್ಕಳು ಸಮಾಜಸೇವೆ ಸೇವೆಗೆಂದು ಹೊರಗೆ ಬರುವುದು ತುಂಬಾ ಅಪರೂಪದ ಸಂಗತಿ. ಆದರೆ ಅನು ಅವರು ಆ ಎಲ್ಲಾ ಬಂಧನಗಳಿಂದ  ಹೊರಬಂದು ತಮ್ಮನ್ನು ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡು ಕೆಚ್ಚೆದೆಯ ಕನ್ನಡತಿಯಾಗಿದ್ದಾರೆ.

ಇವರ ಕಾರ್ಯದ ಉದ್ದೇಶ:

ಅಕ್ಕ ಅನು ಅವರ ಮುಖ್ಯ ಉದ್ದೇಶ ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ಹಾಗೂ ಸಾಧ್ಯವಾಗುವ ಮಟ್ಟಿಗೆ ಸೌಲಭ್ಯ ಒದಗಿಸುವುದು. ಇತ್ತೀಚೆಗೆ ಅನೇಕ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಕನ್ನಡ ನಾಡು-ನುಡಿ ಉಳಿಯಬೇಕೆಂದರೆ ಮೊದಲು ಕನ್ನಡ ಶಾಲೆಗಳು ಉಳಿಯಬೇಕು ಎಂಬುದು ಇವರ ಆದ್ಯತೆ ಮತ್ತು ಅಭಿಪ್ರಾಯ. ಕನ್ನಡ ಶಾಲೆಗಳಿಗೆ ಯಾಕೆ ಮಕ್ಕಳು ಬರುತ್ತಿಲ್ಲ ಎಂಬ ಸಮಸ್ಯೆಗೆ ಸುಲಭ ಉತ್ತರವೆಂದರೆ ಎಂದರೆ ಖಾಸಗಿ ಶಾಲೆಗಳಲ್ಲಿ ಇರುವ ಸೌಲಭ್ಯಗಳು ಕನ್ನಡ ಶಾಲೆಗಳಲ್ಲಿ ದೊರೆಯುವುದಿಲ್ಲ ಹಾಗಾಗಿ ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಬೇಕಾಗುವಂತಹ ವರ್ಣರಂಜಿತ ಚಿತ್ರಗಳು, ನಕ್ಷೆಗಳು ಹಾಗೂ ಅವುಗಳನ್ನು ಬಿಡಿಸುವುದರ ಜೊತೆಗೆ ಶಾಲೆಯ ವಾತಾವರಣವನ್ನು ಶುಚಿ ಗೊಳಿಸುವುದು ಈ ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಇವರು ಇದುವರೆಗೂ ಸುಮಾರು ನೂರಕ್ಕೂ ಹೆಚ್ಚು ಶಾಲೆಗಳಿಗೆ ನೂತನ ರೂಪವನ್ನು ನೀಡಿದ್ದಾರೆ.

ಈ ರೀತಿಯ ಕೆಲಸಗಳಿಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ ಹೀಗಾಗಿ 2018 ರ ಆರಂಭದಲ್ಲಿ ಸುಮಾರು 60 ಸಾವಿರ ಸಾಲ ಪಡೆದು ಮೊದಲಿಗೆ ತುಮೂರಿನ ಕೊರಟೆಗೆರೆಯ ಶಾಲೆಯನ್ನು ಆಯ್ಕೆ ಮಾಡಿ ಸ್ಥಳೀಯ ಕೂಲಿಕಾರರನ್ನು ಕರೆದುಕೊಂಡು ಶಾಲೆಗೆ ಬಣ್ಣ ಹಚ್ಚಲಾಯಿತು ಎಂದು ನೆನಪಿಸಿಕೊಳ್ಳುತ್ತಾರೆ.

ಇವರದ್ದು 13 ಯುವ ಜನರ ಬಲಿಷ್ಠ ತಂಡ ಕಳೆದ 4 ವರ್ಷದಿಂದ ಇವರೆಲ್ಲಾ ಸೇರಿಯೇ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದಾರೆ. ಇವರೆಲ್ಲಾ 3 ರಿಂದ 4 ನಾಲ್ಕು ತಂಗಳಿಗೊಮ್ಮೆ ಮನೆಗೆ ಹೋಗುತ್ತಾರೆ.

ಆತ್ಮಹತ್ಯೆಗೆ ಮುಂದಾಗಿದ್ದ ಅಕ್ಕ ಅನು

ಹೌದು ಮಾಡಿದ್ದ ಹತ್ತು ಲಕ್ಷ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಕೈಗೊಂಡಿದ್ದರು. ಆದರೆ ಇವರ ಸ್ನೇಹ ತಂಡ ಇವರ ಬೆಂಬಲಕ್ಕೆ ನಿಂತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿತ್ತು ಹಾಗೂ ಮತ್ತೇ ಸಮಾಜಮುಖೀ ಕಾರ್ಯಕ್ಕೆ ಹೆಗಲುಕೊಟ್ಟರು.

ಇಲ್ಲಿವರೆಗೂ ಅಕ್ಕ ಅನು ರಾಜ್ಯದೆಲ್ಲೆಡೆ ಸಂಚರಿಸಿ ಸುಮಾರು 22ಕ್ಕೂ ಅಧಿಕ ಜಿಲ್ಲೆಗಳಲ್ಲಿನ ಕೇವಲ ಶಾಲೆ ಮಾತ್ರವಲ್ಲ. ಗೋಶಾಲೆ, ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಪುಷ್ಕರಣಿಗಳನ್ನೂ ಸ್ವಚ್ಛ ಮಾಡುವ ಮತ್ತು ಬಣ್ಣ ಹಚ್ಚುವ ಕೆಲಸ ಮಾಡಿದ್ದಾರೆ.

ನವೀನ ಹಳೆಯದು