ಬಾಗಲಕೋಟೆ: ಜಮಖಂಡಿ ಹೆಸ್ಕಾಂ ವಿಭಾಗದ ವ್ಯಾಪ್ತಿಯಲ್ಲಿ ಬರುವ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ಉಪವಿಭಾಗದಲ್ಲಿರುವ ಚಿಮ್ಮಡ 110ಕೆಪಿ ಮಾರ್ಗದಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಒಳ-ಹೊರ ಕುಣಿಕೆ ಗೋಪುರವನ್ನು ಅಳವಡಿಸುವ ಕಾಮಗಾರಿಯನ್ನು ಬೃಹತ್ ಕಾಮಗಾರಿ ವಿಭಾಗ ಕೆಪಿಟಿಸಿಎಲ್ ರವರು ಫೆಬ್ರವರಿ 11 ರಂದು ಬೆಳಗ್ಗೆ 9 ರಿಂದ ಸಂಜೆ 5 ವರೆಗೆ ಮಾರ್ಗ ಮುಕ್ತಿ ಕೈಗೊಳ್ಳಲು ಉದ್ದೇಶಿಸಿದ್ದಾರೆ. ಇದರಿಂದ ತೇರದಾಳ ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲ 11ಕೆವಿ ಫೀಡರ್‌ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಹಾಗೂ ರೈತರು ಸಹಕರಿಸುವಂತೆ ಜಮಖಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.