Karnataka Budget 2023: ಇತಿಹಾಸದಲ್ಲೇ ಮೊದಲ ಬಾರಿ ನೀರಾವರಿಗೆ 25 ಸಾವಿರ ಕೋಟಿ: ಸಚಿವ ಗೋವಿಂದ ಕಾರಜೋಳ ಬಣ್ಣನೆ

ಮುಧೋಳ: ನೀರವಾರಿ ಯೋಜನೆಗಾಗಿ ಬಜೆಟ್ ನಲ್ಲಿ 25 ಸಾವಿರ ರೂ.ಗಳ ಬೃಹತ್ ಮೊತ್ತವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದು, ಬಹುಷ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಣ್ಣಿಸಿದರು.

ಅವರು, ನೀರಾವರಿಗೆ ಎಲ್ಲಿಲ್ಲದ ಒತ್ತು ಸಿಕ್ಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಪುನರ್ವಸತಿಗಾಗಿಯೇ 5 ಸಾವಿರ ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಮೀಸಲಿರಿಸಿದ್ದು ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ನೀರಾವರಿಗೆ 25 ಸಾವಿರ ಕೋಟಿ ರೂ.ಗಳನ್ನು ಒದಗಿಸಿರುವುದರಿಂದ 1.50 ಲಕ್ಷ ಹೆಕ್ಟೇರ್ ನೀರಾವರಿ ಸಾಮರ್ಥ್ಯ ಸೃಜಿಸಲು ಅನುವುಮಾಡಿಕೊಡುತ್ತದೆ.. ನೇಕಾರರು ಮತ್ತು ಇತರ ಉದ್ಯಮಿಗಳಿಗೆ ಪ್ರೋತ್ಸಾಹ ಧನವನ್ನು ವಿಸ್ತರಿಸಿರುವುದು ಅವರ ಬದುಕಿನಲ್ಲು ಗುಣಾತ್ಮ ಕ ಬದಲಾವಣೆಯನ್ನು ತರಲಿದೆ ಎಂದರು.

ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಒದಗಿಸುವ ಐತಿಹಾಸಿಕ ಕ್ರಾಂತಿಕಾರಕ ಕ್ರಮವು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಒದಗಿಸುವ ಮೊದಲ ರಾಜ್ಯ ಸರ್ಕಾರವಾಗಿದೆ. ವಿದ್ಯಾ ದಾನದ ಕಲ್ಪನೆಯನ್ನು ನೈಜ ರೂಪದಲ್ಲಿ ಅನ್ವರ್ಥಕಗೊಳಿ ಸಲಾಗಿದೆ. ಎಲ್ಲ ವರ್ಗಗಳನ್ನು ತಲುಪಿರುವ ಬಜೆಟ್ ಇದಾಗಿದೆ ಎಂದು ಬಣ್ಣಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ, ಬೆಂಗಳೂರು ಮತ್ತು ಇತರೆ ದೊಡ್ಡ ನಗರಗಳಿಗೆ ತಾರತಮ್ಯ ರಹಿತ ವಾದ ಅಭಿವೃದ್ಧಿ ಪೂರಕ ಬಜೆಟ್ ಇದಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡವರ ಮಕ್ಕಳಿಗೆ ನಿಗಮಗಳ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅನುದಾನ ಒದಗಿಸಿರುವುದು ಉದ್ಯೋಗ ಸೃಷ್ಟಿಗೆ ಅನುಕೂಲ ಕಲ್ಪಿಸಿದೆ ಎಂದರು.

ಈ ಮುಂಗಡ ಪತ್ರದ ಅನುಷ್ಟಾನದಿಂದ ಉದ್ಯೋಗ ಸೃಷ್ಟಿ ಸಮಾನತೆಯ ಕಲ್ಪನೆಗಳನ್ನು ನೈಜ ರೂಪದಲ್ಲಿಯ ಅನುಷ್ಟಾನ ಜನರ ಬದುಕಿನಲ್ಲಿ ಗುಣಾತ್ಮಕ ವಾದ ಬದಲಾವಣೆ ಮತ್ತು ಸಮಗ್ರ ಅಭಿವೃದ್ಧಿಯ ಚಿಂತನೆ ಗಳನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಚಿಕಿತ್ಸಕ ಬುದ್ದಿಯಿಂದ ವಿನ್ಯಾಸಗೊಳಿ ಸಿರುವ 2023-24ನೇ ಸಾಲಿನ ದೂರದೃಷ್ಟಿ ಮುಂಗಡ ಪತ್ರ ಮಂಡಿಸಿದೆ ಎಂದು ವಿವರಿಸಿದರು.

ಮಂಟೂರ ಮತ್ತು ಸಸಾಲಟ್ಟಿ ಏತ ನೀರಾವರಿ ಯೋಜನೆ ಈಗಾಗಲೇ ಆರಂಭಗೊಂಡು ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ. ಮುಖ್ಯಮಂತ್ರಿಗಳು ಈ ವಿಚಾವರನ್ನೂ ಬಜೆಟ್‌ನಲ್ಲಿ ಮಂಡಿಸಿದ್ದಾರೆ ಎಂದು ವಿವರಿಸಿದರು.

ನವೀನ ಹಳೆಯದು