ಬಾಗಲಕೋಟೆ: ಭೂಸ್ವಾಧೀನ ಪ್ರಕರಣದಲ್ಲಿ ವಾರಸುದಾರರಿಗೆ ನೀಡಬೇಕಾಗಿದ್ದ ಪರಿಹಾರಧನವನ್ನು ಬೇರೆಯವರಿಗೆ ಹಸ್ತಾಂತರಿಸಿದ ಲೋಪವನ್ನು ಸರಿಪಡಿಸದ ಕಾರಣ ನವನಗರದಲ್ಲಿರುವ ಯು.ಕೆ.ಪಿ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿ ಪೀಠೋಪಕರಣ ಜಪ್ತಿ ಮಾಡಲಾಗಿದೆ.
ಜೆಎಂಎಫ್‌ಸಿ, ಸಿವಿಲ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಶ ಪ್ರಶಾಂತ ಶರಣ ಬಸವೇಶ್ವರ ಚಟ್ಟಿ ಅವರ ಆದೇಶದನ್ವಯ ಮಂಗಳವಾರ ಕಚೇರಿ ಪೀಠೋಪಕರಣ ಜಪ್ತಿ ಮಾಡಲಾಯಿತು.
ಸೀಮಿಕೇರಿ ಗ್ರಾಮದ ರಿ.ಸ.ನಂ.248/18 4 ಎಕರೆ ಜಮೀನಿಗೆ ಶೇಷಗಿರಿರಾವ ಸರದೇಸಾಯಿ ವಾರಸುದಾರರಿದ್ದು, ಅವರು ಅದನ್ನು ಸಾಬಣ್ಣ ಕೆಂಚಣ್ಣವರ ಅವರಿಗೆ ಹಸ್ತಾಂತರಿಸಿ ದಾಖಲು ಮಾಡಲಾಯಿತು. ಅವರ ನಿಧನದ ನಂತರ ಪತ್ನಿ ಹೆಸರಿಗೆ ಹಸ್ತಾಂತರವಾಯಿತು. ಅವರ ನಿಧನದ ನಂತರ ವಾರಸುದಾರರಾದರು, ಒಂದು ವರ್ಷ ಒಂಬತ್ತು ತಿಂಗಳ ಹಿಂದೆ 4 ಎಕರೆ ಪೈಕಿ 3.26 ಗುಂಟೆ ಪನರ್ವಸತಿ ಕೇಂದ್ರಕ್ಕೆ ಸ್ವಾಧೀನಗೊಂಡಿದ್ದು 12 ಗುಂಟೆ ಅವರ ಹೆಸರಿನಲ್ಲಿದೆ.
ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ಧನ ಕೊಟ್ಟಿಲ್ಲ ಎಂದು ಕಚೇರಿ ಸಂಪರ್ಕಿಸಿದಾಗ ಪರಿಹಾರ ಧನ ತಪ್ಪಿನಿಂದಾಗಿ ಅದು ಬೇರೆಯವರಿಗೆ, ಪಾವತಿಯಾಗಿದ್ದು, ಬೆಳಕಿಗೆ ಬಂದಿದ್ದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಅದನ್ನು ಸರಿಪಡಿಸುವ ಭರವಸೆ ಕಾರ್ಯಗತ ಗೊಳ್ಳದಿರುವ ಬಗ್ಗೆ ನ್ಯಾಯಾಲಯವು ಅಸಮಾ ಧಾನ ವ್ಯಕ್ತಪಡಿಸಿತು.
ಈ ಕಾರಣಕ್ಕೆ ನ್ಯಾಯಾಲಯ ಎಸ್‌ಎಲ್‌ಓ ಕಚೇರಿ ಜಪ್ತಿಗೆ ಆದೇಶ ನೀಡಿದ್ದು, ಇಂದು ಮಧ್ಯಾಹ್ನ ಜಪ್ತಿ ಮಾಡಲಾಯಿತು, ಪ್ರತಿವಾದಿ ಪರ ಈರಣ್ಣ ಕಲ್ಯಾಣಿ ವಕಾಲತ್ತು ವಹಿಸಿದ್ದರು.