ನಂದು ಪಾಟೀಲರಿಗೆ ಶ್ರದ್ದಾಂಜಲಿ


ಮುಧೋಳ: ಮತ್ತೊಬ್ಬರ ಶ್ರೇಯೋ ಭಿವೃದ್ಧಿಗೆ ಶ್ರಮಿಸಿದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಜ್ಯ ಕಬಡ್ಡಿ ಅಸೋಶಿಯಸನ್ನನ ಖಜಾಂಚಿ ನಂದಕುಮಾರ ಪಾಟೀಲರ ನಿಧನದಿಂದ ತುಂಬಲಾರದ ನಷ್ಟವಾಗಿದ್ದು, ರಾಜಕೀಯ, ಸಹಕಾರಿ ರಂಗ, ಹೋರಾಟ, ಉದ್ಯಮ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರವಾಗಿತ್ತೆರದು ಎಂದು ಮಾಜಿ ಸಚಿವ ಎಸ್‌. ಆರ್. ಪಾಟೀಲ ಹೇಳಿದರು.

ನಗರದ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದಿಂದ ನಡೆದ ದುಖಸೂಚಕ ಅವರು ಮಾತನಾಡಿದರು.ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ನಂದಕುಮಾರ ಪಾಟೀಲರ ನೆನಪು ಚಿರಕಾಲ ಉಳಿಯಲಿ ಎಂದು ಆಶಿಸಿದರು.

ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಮಾತನಾಡಿ, ಬದುಕಿನ ಕೊನೆಯ ಕ್ಷಣದವರಿಗೂ ಅವರ ಸಾಮಾಜಿಕ ಕಳಕಳಿಯನ್ನು ಮೆಚ್ಚುವಂಥದ್ದು. ಪ್ರತಿಯೊಂದು ಕೆಲಸವನ್ನು ಅವರು ಸಮರ್ಥವವಾಗಿ ನಿಭಾಯಿಸಿ ಯಶಸ್ವಿಯಾಗುತ್ತಿದ್ದರು ಎಂದರು.

ರಾಜ್ಯ ಕಿಸಾನ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ ಮೆಗಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ, ಶಿವಕುಮಾರ ಮಲಘಾಣ, ಉದಯಸಿಂಗ್ ಪಡತಾರೆ, ಬಸವರಾಜ ಇಟಕನ್ನವರ, ತಮ್ಮಣ್ಣ ಅರಳಿಕಟ್ಟಿ, ಬಸವರಾಜ ಜಮಖಂಡಿ, ರಾಜು ಬಾಗವಾನ, ಸಿದ್ದು ಕೊಣ್ಣೂರು, ಗೋವಿಂದ ಬದನೂರ, ತಿಮ್ಮಣ್ಣ ಬಟಕುರ್ಕಿ, ಹಣಮಂತ ಅಡವಿ, ಗೋವಿಂದಪ್ಪ ಗುಜ್ಜನವರ, ವೆಂಕಣ್ಣ ಅಂಕಲಗಿ, ರಾಜುಗೌಡ ಪಾಟೀಲ, ದುಂಡಪ ಲಿಂಗರಡ್ಡಿ, ಎಚ್ ಎಲ್‌.ಪಾಟೀಲ, ಕೃಷ್ಣಪ್ಪ ಕನಕರಡ್ಡಿ, ಸುಶೀಲಕುಮಾರ ಬೆಳಗಲಿ, ಬ್ಲಾಕ್ ಕಾಂಗ್ರೆಸ್‌ ಘಟಕದ ಅಧ್ಯಕ್ಷ, ಧರೆಪ್ಪ ಸಾಂಗ್ಲಿಕರ, ಅಶೋಕ ಕಿವಡಿ ಇತರರು ಮತನಾಡಿ ನಂದು ಪಾಟೀಲರ ಸೇವೆಯನ್ನು ಸ್ಮರಿಸಿದರು.

ನವೀನ ಹಳೆಯದು