
ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಘೋಷಿಸಿರುವ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ 5335 ರೂ. ಗಳಂತೆ ಖರೀದಿಸಲಾಗುತ್ತಿದ್ದು, ಮಾ. 31ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಪಿ.ಸುನೀಲ್ ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಕ್ವಿಂಟಲ್‌ಗೆ 5335 ರೂ.ಗಳಂತೆ ಪ್ರತಿ ಎಕರೆಗೆ 4 ಕ್ವಿಂಟಲ್ ಮತ್ತು ಗರಿಷ್ಠ ಪ್ರಮಾಣ ಪ್ರತಿ ರೈತರಿಂದ 15 ಕ್ವಿಟಂಲ್‌ಗೆ ರಷ್ಟು ಖರೀದಿಸಲಾಗುತ್ತದೆ. ಜಿಲ್ಲೆಯಲ್ಲಿ ರೈತರ ನೋಂದಣಿ ಕಾರ್ಯವನ್ನು ಮಾರ್ಚ 31ರಿಂದ ಹಾಗೂ ಖರೀದಿಯನ್ನು ಮೇ 15 ವರೆಗೆ ನಿಗಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ರೈತರು ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಚೆನ್ನಾಗಿ ಒಣಗಿರುವ, ಮಣ್ಣಿನಿಂದ ಚೆನ್ನಾಗಿ ಬೇರ್ಪಡಿಸಲ್ಪಟ್ಟ, ಸಾಣಿಗೆಯಿಂದ ಸ್ವಚ್ಛಮಾಡಿರುವ ಗುಣಮಟ್ಟ ಗಾತ್ರದ ಕಡೆಲೆಕಾಳು ಅಂದರೆ ಗಾತ್ರದ ತೇವಾಂಶ 14% ರ ಒಳಗೆ ಇರುವ ಕಡಲೆಕಾಳನ್ನು ಖರೀದಿಸಲಾಗುವುದು ಎಂದರು.
ಖರೀದಿ ಕೇಂದ್ರಗಳಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳಲು ಆದಾರ ಕಾರ್ಡ ಪ್ರತಿ, ರೈತರಿತಗೆ ಸಂಬಂಧಿಸಿ ಎಫ್.ಆಯ್.ಡಿ ಸಂಖ್ಯೆ ಸಲ್ಲಿಸಿ ಹೆಸರು ನೋಂದಾಯಿಸಬೇಕು. ಕಡಲೆಕಾಳು ಉತ್ಪನ್ನವನ್ನು ಖರೀದಿಸುವ ಪೂರ್ವದಲ್ಲಿ ರೈತರು ನೀಡಿರುವ ವಿವರವನ್ನು ಎನ್.ಆಯ್ .ಸಿ ಸಂಸ್ಥೆಯ ತಂತ್ರಾಶದೊಂದಿಗೆ ಭೂಮಿ ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿದ ನಂತರವೇ ನೋಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ದಶಕದಲ್ಲಿ ಬೆಳೆ ಬೆಳೆಯದೇ ಇರುವ ರೈತರು ಹತ್ತಿರದ ಕೃಷಿಇಲಾಖೆಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎ.ಲಕ್ಕುಂಡಿ, ಖರೀದಿ ಸಂಸ್ಥೆಯ ಪ್ರತಿನಿದಿ ಸುಪ್ರಿಯಾ ಸೇರಿದಂತೆ ಇತತರು ಇದ್ದರು.
ನೋಂದಣಿ, ಖರೀದಿ ಕೇಂದ್ರಗಳ ವಿವರ
ಬಾಗಲಕೋಟೆ
ತಾಲೂಕಿನ ಬೆನಕಟ್ಟಿ ಪಿ.ಕೆ.ಪಿ.ಎಸ್, ಎಫ್.ಪಿ.ಓ ಬಾಗಲಕೋಟ
ಬದಾಮಿ
ತಾಲೂಕಿನ ಪಿ. ಕೆ.ಪಿ.ಎಸ್ ಕೆರೂರು, ಟಿ.ಎ.ಪಿ.ಸಿ.ಎಂ.ಎಸ್ ಬದಾಮಿ, ಎಫ್.ಪಿ.ಓ ಆಶಾಕಿರಣ ಹೂಲಗೇರಿ
ಮುದೋಳ
ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಮುದೋಳ, ಎಫ್.ಪಿ.ಓ ಸರ್ವಬಂದು ಮುಧೋಳ
ಇಳಕಲ್
ತಾಲೂಕಿನ ಜಿ.ಎಫ್.ಸಿ.ಎಲ್ .ಇಲಕಲ್ ಪಿ.ಕೆ.ಪಿ.ಎಸ್ ಬುದಿಹಾಳ, ಪಿಕೆಪಿಎಸ್ ಹಿರೇಆದಾಪೂರ, ಪಿಕೆಪಿಎಸ್ ಕಂದಗಲ್
ಹುನಗುಂದ
ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದ ಎಫ್.ಪಿ.ಓ ಸೂಳಿಬಾವಿ, ಎಫ್.ಪಿ.ಓ ಅಮರಾವತಿ, ಪಿ.ಕೆ.ಪಿ.ಎಸ್. ನಂದವಾಡಗಿ, ಪಿ. ಕೆ.ಪಿ.ಎಸ್ ಮುಗನೂರು, ಪಿ.ಕೆ.ಪಿ.ಎಸ್ ಕೂಡಲಸಂಗಮ
ಜಮಖಂಡಿ
ತಾಲೂಕಿನ ಎಫ್.ಪಿ.ಓ ತೊದಲಬಾಗಿ
ಬೀಳಗಿ
ಪಿ.ಕೆ.ಪಿಎಸ್ ಗೋಠ, ಬೀಳಗಿ ತಾಲೂಕಿನಟಿ.ಎ.ಪಿ.ಎಂ. ಎಸ್ ಬೀಳಗಿ, ಪಿ.ಕೆ.ಪಿ.ಎಸ್ ಬೀಳಗಿ.
ಕೇಂದ್ರಗಳಲ್ಲಿ ನೋಂದಣಿ ಮತ್ತು ಖರೀದಿ ಮಾಡಲಾಗುತ್ತದೆ.