ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಧೋಳ ಪೊಲೀಸರಿಂದ ನಾಲ್ವರು ಕಳ್ಳರ ಬಂಧನ


ಮುಧೋಳ : ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಧೋಳ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಜಮಖಂಡಿ ತಾಲೂಕಿನ ನಾವಲಗಿಯ ಸಂತೋಷ ಮಾಂಗ (20), ರಬಕವಿ ಬನಹಟ್ಟಿ ತಾಲೂಕಿನ ಹೊಸೂರು ಗ್ರಾಮದ ರಮೇಶ ಮಂಗ್ರೊಳ್ಳಿ (19), ರಾಘವೇಂದ್ರ ಆಲಗೂರು (19) ಹಾಗೂ ಅವಿನಾಶ ಇಂಗಳಗಾವಿ (20) ಬಂಧಿತ ಆರೋಪಿಗಳು.

ಬಂಧಿತರಿಂದ ಕಳ್ಳತನಕ್ಕೆ ಉಪಯೋಗಿಸಿದ್ದ 2 ಬೈಕ್, ಮೊಬೈಲ್‍, ಟ್ಯಾಬ್‍ ಹಾಗೂ ಕಳ್ಳತನ ಮಾಡಿದ್ದ 5.5ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಜಯಪ್ರಕಾಶ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಶಾಂತವೀರ ಈ, ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‍ಐಗಳಾದ ಸಂಗಮೇಶ ಹೊಸಮನಿ, ಡಿ.ಬಿ. ಕೊತವಾಲ ಪೊಲೀಸ್ ಸಿಬ್ಬಂದಿ ಆರ್.ಬಿ. ಕಟಗೇರಿ, ಜಗದೀಶ ಕಾಂತಿ, ಸುನೀಲ ಐದಮನಿ, ಬಿ.ಡಿ.ಕುರಿ, ದಾದಾಪೀರ ಅತ್ರಾವತ, ಹನಮಂತ ಮಾದರ, ಎಂ.ಬಿ. ದಳವಾಯಿ, ಸುರೇಶ ಭದ್ರಶೆಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನವೀನ ಹಳೆಯದು