ಗುಲಾಬಿ ಕೊಟ್ಟು ಜಾಗೃತಿ ಮೂಡಿಸಿದ ಟ್ರಾಫಿಕ್ ಪೊಲೀಸರು

ಬಾಗಲಕೋಟೆ: ವಾಹನ ಸವಾರರನ್ನು ನಿಲ್ಲಿಸಿದ ತಕ್ಷಣ ಏಕವಚನದಲ್ಲಿ ಮಾತನಾಡಿ ಪೊಲೀಸರು ದಂಡ ವಿಧಿಸುವುದನ್ನು ಸದಾ ಕಾಣುತ್ತೇವೆ ಆದರೆ ಬಾಗಲಕೋಟೆ ಸಂಚಾರ ವಿಭಾಗ ಪೊಲೀಸರು ಶುಕ್ರವಾರ ಇದಕ್ಕೆ ಅಪವಾದ ಎಂಬಂತೆ ಗುಲಾಬಿ ಹಿಡಿದು ಗಾಂಧಿಗಿರಿ ಮೆರೆದರು.
ಹೌದು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಮುಂದಾದ ಸಂಚಾರ ವಿಭಾಗದ ಪಿಎಸ್‌ಐ ಅನಿತಾ ರಾಠೋಡ ನೇತೃತ್ವದ ಸಿಬ್ಬಂದಿ ನಗರದ ಬಸವೇಶ್ವರ ವೃತ್ತದಲ್ಲಿ ವಾಹನಗಳನ್ನು ತಡೆದು ಗುಲಾಬಿ ಹೂವು ನೀಡಿ ಸಂಚಾರ ನಿಯಮಗಳ ಜಾಗೃತಿ ಮೂಡಿಸಿದರು.
ಎಸ್‌ಪಿ ಜಯಪ್ರಕಾಶ ಮಾರ್ಗದರ್ಶನದಲ್ಲಿ ಸಂಚಾರ ನಿಯಮಗಳ ಜಾಗೃತಿಗೆ ಮುಂದಾಗಿರುವ ಪೊಲೀಸರು ವಿಭಿನ್ನ ರೀತಿಯಲ್ಲಿ ಸಾರ್ವಜನಿಕರನ್ನು ಸೆಳೆದು ನಿಯಮಗಳ ಬಗ್ಗೆ ತಿಳಿ ಹೇಳುತ್ತಿದ್ದಾರೆ. ಅದರಂತೆ ಶುಕ್ರವಾರವೂ ಸಹ ಪೊಲೀಸರು ಹೂವುಗಳನ್ನು ನೀಡಿ ಸಂಚಾರ ನಿಯಮ ಪಾಲಿಸುವುದರಿಂದ ನಿಶ್ಚಿತವಾಗಿ ಅಪಘಾತಗಳನ್ನು ತಪ್ಪಿಸಬಹುದು. ವೇಗದ ಚಾಲನೆ, ಕುಡಿದು ವಾಹನ ಓಡಿಸುವುದನ್ನು ನಿಲ್ಲಿಸಬೇಕು. ವಾಹನ ವಿಮೆ, ದಾಖಲೆಗಳನ್ನು ಸರಿಯಾಗಿಟ್ಟುಕೊಂಡು ಸಹಕರಿಬೇಕೆಂದು ಮನವಿ ಮಾಡಿದರು. ಪೊಲೀಸರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.
ನವೀನ ಹಳೆಯದು