![](https://blogger.googleusercontent.com/img/b/R29vZ2xl/AVvXsEh3LPNkLj1AwrrLzOyOqdXbVMWXWBNCoOuwiKgMXCdIr2XvB2Brt-bz6rX1GKCLpw0tjAOQeHn-RVUWxt53tro306Ygc2zqr6i0PNMBUwJbyzX3p4TiWjqZxWKwutcv4mQEGwBy0Qtub_IdcZ3l2ARF16BQ1A3bmKen6otHallePcqifoF2JmMS_5El/w400-h213/Bagalkot%20Job%20Fair%2016%20%E0%B2%B0%E0%B2%82%E0%B2%A6%E0%B3%81%20%E0%B2%AE%E0%B2%BF%E0%B2%A8%E0%B2%BF%20%E0%B2%89%E0%B2%A6%E0%B3%8D%E0%B2%AF%E0%B3%8B%E0%B2%97%20%E0%B2%AE%E0%B3%87%E0%B2%B3.webp)
ಬಾಗಲಕೋಟೆ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಫೆಬ್ರವರಿ 16 ರಂದು ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯಾಗಿರಿಯಲ್ಲಿರುವ ಬಸವೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ 20ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಎಸ್.ಎಸ್.ಎಲ್.ಸಿ ಯಿಂದ ಪದವೀಧರರಿಗೆ ಅವಕಾಶವಿರುತ್ತದೆ. ಅಭ್ಯರ್ಥಿಗಳು https://forms.gle/ADUB76LPAatsupsd9 ಗೂಗಲ್ ಫಾರ್ಮ್ ಮುಖಾಂತರ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9538162203, 7676634184, 083554-295210. ಸಂಪರ್ಕಿಸಬಹುದಾಗಿದೆ.