ಬಾಗಲಕೋಟೆಯ ಕಿಲ್ಲೆಯಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

ಬಾಗಲಕೋಟೆ: ಕಿಲ್ಲೆಯ ಶ್ರೀ ನರೇಂದ್ರ ಯುವಕ ಮಂಡಳಿ ಕಾರ್ಯಕರ್ತರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ಮರಳಿದ ವೀರ ಯೋಧರನ್ನು ಸನ್ಮಾನಿಸಿ ಭರಮಾಡಿಕೊಂಡಿತು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮನೆಗೆ ಬರುವ ವೀರ ಯೋಧರಿಗೆ ಮಂಡಳದ ವತಿಯಿಂದ ಗೌರವ ಸಮರ್ಪಣೆ ಸಲ್ಲಿಸಲಾಗುತ್ತದೆ ಅದರಂತೆ ಸೇನೆಯಿಂದ ನಿವೃತ್ತಿಹೊಂದಿದ ಬೀಳಗಿ ತಾಲೂಕಿನ ಸಿದ್ದಾಪೂರ ಎಲ್ ಟಿ ಗ್ರಾಮದ ಹವಾಲ್ದಾರ ರವಿ ಲಮಾಣಿ, ಬೀಳಗಿ ತಾಲೂಕಿನ ಬಿರಕಬ್ಬಿ ಗ್ರಾಮದ ಹವಾಲ್ದಾರ ಗೋಪಾಲ ಇಲಕಲ್, ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಹವಾಲ್ದಾರ ಈರಪ್ಪ ಫಕೀರಪ್ಪಗೋಳ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ನವೀನ ಹಳೆಯದು