ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ

ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಅವರು 1952 ರಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿದರು. ಅವರು ಬಿಜಾಪುರದ ಸೈನಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದರು ಹಾಗೂ 1972 ರ ಡಿಸೆಂಬರ್‌ನಲ್ಲಿ ಮೊದಲ ಬೆಟಾಲಿಯನ್ ಸಿಖ್ ಲೈಟ್ ಕಾಲಾಳುಪಡೆಗೆ ನಿಯೋಜಿಸಲ್ಪಟ್ಟರು.

ಅವರು ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್, ಆರ್ಮಿ ವಾರ್ ಕಾಲೇಜಿನಲ್ಲಿ ಹೈಯರ್ ಕಮಾಂಡ್ ಕೋರ್ಸ್, ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಯುಎಸ್ಎಯ ವಾಷಿಂಗ್ಟನ್ ಡಿಸಿಯ ಅಟ್ಲಾಂಟಿಕ್ ಕೌನ್ಸಿಲ್ನಲ್ಲಿ ಸೀನಿಯರ್ ಫೆಲೋಶಿಪ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರು ಎಂ.ಫಿಲ್. ಇಂದೋರ್‌ನ ಡಿಎವಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಪಡೆದುಕೊಂಡಿದ್ದಾರೆ

ಅವರು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಮೊದಲ ಬೆಟಾಲಿಯನ್ ಸಿಖ್ ಲೈಟ್ ಕಾಲಾಳುಪಡೆ, ಕಾಲಾಳುಪಡೆ ಬ್ರಿಗೇಡ್ ಮತ್ತು ಕಾಲಾಳುಪಡೆ ವಿಭಾಗದ ಮುಂದಾಳತ್ವ ವಹಿಸಿಕೊಂಡಿದ್ದರು. ಅವರು ಪಂಜಾಬ್‌ನ ಪ್ರತಿಷ್ಠಿತ ಕಾರ್ಪ್ಸ್ನ ಕಾರ್ಪ್ಸ್ ಕಮಾಂಡರ್ ಆಗಿದ್ದರು. ತದ ನಂತರ, ಮಿಲಿಟರಿ ತರಬೇತಿ ಸಂಸ್ಥೆಯ ಡೈರೆಕ್ಟರ್ ಜನರಲ್ ಆಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು ಮತ್ತು ನಂತರ ಸೇನಾ ಪ್ರಧಾನ ಕಚೇರಿಯಲ್ಲಿ ಸೈನ್ಯದ ಉಪ ಮುಖ್ಯಸ್ಥರಾಗಿಯೂ ದೇಶ ಸೇವೆ ಸಲ್ಲಿಸಿದ್ದಾರೆ.

ಸಂದ ಪುರಸ್ಕಾರಗಳು
ಅವರಿಗೆ ಭಾರತದ ರಾಷ್ಟ್ರಪತಿ ಮೂರು ಬಾರಿ ಪ್ರಶಸ್ತಿ ನೀಡಿದ್ದಾರೆ. 1992 ರಲ್ಲಿ ಶತ್ರುಗಳ ಎದುರು ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಸೇನಾ ಶೌರ್ಯ ಪದಕ. ಅವರಿಗೆ ಸೈನ್ಯ ಮತ್ತು ರಾಷ್ಟ್ರಕ್ಕೆ ನೀಡಿದ ಅತ್ಯುತ್ತಮ ಮತ್ತು ವಿಶಿಷ್ಟ ಸೇವೆಗಾಗಿ ಅತೀ ವಿಶೀಷ್ಠ ಸೇವಾ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ

59 ನೇ ವಯಸ್ಸಿನಲ್ಲಿ, ಅವರು 12000 ಅಡಿಗಳಿಗಿಂತ ಹೆಚ್ಚು ಎತ್ತರದಿಂದ ಎರಡು ಗಂಟೆಗಳಿಗಿಂತ ಕಡಿಮೆ ತರಬೇತಿಯೊಂದಿಗೆ ಏಕವ್ಯಕ್ತಿ ಸ್ಕೈಡೈವ್ ಮಾಡಿದ್ದರು. ಈ ರೆಕಾರ್ಡ್ ಬ್ರೇಕಿಂಗ್ ಜಂಪ್ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ 2013 ಆವೃತ್ತಿಯಲ್ಲಿ ದಾಖಲಿಸಲಾಗಿದೆ.

ಅವರು ನಿವೃತ್ತಿಯ ನಂತರ ಕರ್ನಾಟಕದ ಕಾರ್ಯತಂತ್ರದ ಅಭಿವೃದ್ಧಿಗೆ ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಅವರಿಗೆ 2015 ರಲ್ಲಿ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಿದೆ ಮತ್ತು ಅವರಿಗೆ ಸಾಮಾಜಿಕ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.

18 ಏಪ್ರಿಲ್ 2018 ರಂದು, ಅಮೇರಿಕಾ ಮತ್ತು ಗ್ರೇಟ್ ಬ್ರಿಟನ್‌, ನ್ಯೂಯಾರ್ಕ್‌ನಲ್ಲಿ ನಡೆದ ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಅಂತರರಾಷ್ಟ್ರೀಯ ನಾಯಕತ್ವ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ
ನವೀನ ಹಳೆಯದು