ನಗರದಲ್ಲಿ ಪಾದಚಾರಿಗಳಿಗಾಗಿ ಜಿಬ್ರಾ ಕ್ರಾಸಿಂಗ್

ಮುಧೋಳ : ನಗರದ ಪ್ರಮುಖ ವೃತ್ತ ಹಾಗೂ ವಾಹನ ದಟ್ಟಣೆ ಪ್ರದೇಶಗಳಲ್ಲಿ ಉಂಟಾಗುವ ಅಪಘಾತ ತಪ್ಪಿಸುವ ದೃಷ್ಟಿಯಿಂದ ಜಿಬ್ರಾ ಕ್ರಾಸಿಂಗ್‌ ಅಳವಡಿಕೆ ಕಾರ್ಯ ನಡೆದಿದೆ.

ವಾಹನದಟ್ಟನೆಯಿರುವ ಯಾದವಾಡ ವೃತ್ತ. ರನ್ನ ವೃತ್ತ, ದಾನಮ್ಮ ದೇವಿ ಗುಡಿ ರಸ್ತೆ ಸೇರಿದಂತೆ ವಾಹನ ದಟ್ಟನೆ ಇರುವ ಕಡೆಯಲ್ಲಿ ಜಿಬ್ರಾ ಕ್ರಾಸಿಂಗ್ ಕಾರ್ಯ ನಡೆದಿದೆ. ಸಾರ್ವಜನಿಕರು ವಾಹನ ದಟ್ಟಣೆ ಇರುವ ಕಡೆಯಲ್ಲಿ ರಸ್ತೆ ದಾಟುವಾಗ ಅನೇಕ ಬಾರಿ ಅಪಘಾತಗಳು ಸಂಭವಿಸಿದ್ದವು. ಅದನ್ನು ಅರಿತ ಪೊಲೀಸ್‌ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಜಿಬ್ರಾ ಕ್ರಾಸಿಂಗ್‌ ಅಳವಡಿಸಲಾಗುತ್ತಿದೆ.

ಜಿಬ್ರಾ ಕ್ರಾಸಿಂಗ್‍ ಜೊತೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿದರೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಆ ಬಗ್ಗೆ ಸ್ವಲ್ಪ ಯೋಚಿಸಬೇಕು ಎಂಬುದು ನಗರ ನಿವಾಸಿಗಳ ಅಭಿಪ್ರಾಯವಾಗಿದೆ.

ನವೀನ ಹಳೆಯದು