ಹಿನ್ನೆಲೆ
ಮುಧೋಳದ ಘೋರ್ಪಡೆ ಮನೆತನದವರ ಮೂಲ ಅಡ್ಡ ಹೆಸರು ಭೋಸಲೆ. ಶಿವಾಜೀ ರಾಜನ ಮನೆತನವೂ ಘೋರ್ಪಡೆಗಳ ಮನೆತನವೂವೊಂದೇಯೆಂದು ಹೇಳುತ್ತಾರೆ. ಘೋರ್ಷಡೆಗಳ ಪೂರ್ವಜನೊಬ್ಬನು ಘೋರ್ಪವೆಂದರೆ ಉಡದ ಟೊಂಕಕ್ಕೆ ಹಗ್ಗ ಕಟ್ಟಿ ಅದನ್ನು ಒಂದು ಕೋಟೆಯ ಗೋಡೆಗೆ ಏರಿಸಿ ಉಡವು ಗೋಡೆಯನ್ನು ಗಟ್ಟಿಯಾಗಿ ಹಿಡುಕೊಂಡು ನಿಲ್ಲಲಾಗಿ, ಅವನು ಆ ಹಗ್ಗದ ಆಧಾರದಿಂದ ಕೋಟೆಯ ಮೇಲೆ ಹೋಗಿ ಕೋಟೆಯನ್ನು ವಶಪಡಿಸಿಕೊಂಡನಂತೆ. ಆದ್ದರಿಂದ ಅವನ ವಂಶದವರಿಗೆ ಘೋರ್ಷಡೆಯೆಂಬ ಹೆಸರು ಬಂತು. ಇವರೊಳಗೆ ನವಕಸ, ಸಾತಕಸ, ಎಂಬ ಎರಡು ಶಾಖೆಗಳುಂಟು. ಮುಧೋಳದವರು ನವಕಸ, ಅಂದರೆ ಉತ್ತಮ ಶಾಖೆಯವರು; ಸೊಲ್ಲಾಪುರಕ್ಕೆ ಶೇರಿದ ಕಾಪಶಿಯ, ಸೇನಾಪತಿಯ ವಂಶದವರೂ, ಗುತ್ತಿಯ ಮುರಾರಿರಾಯನ ವಂಶದವರೂ ಸಾತಕಸ ಶಾಖೆಯವರು. ಮುಧೋಳದ ಮನೆತನದ ಪೂರ್ವಜನಾದ ಬಾಜೀ ಘೋರ್ಷ್ಪಡೆಯು ವಿಜಾಪುರದ ದರ್ಬಾರಿನಲ್ಲಿ ಸರದಾರನಾಗಿದ್ದನು. ಮುಧೋಳದ ಜಹಾಗೀರು ಆ ದರ್ಬಾರಿನಿಂದಲೇ ಇವರಿಗೆ ದೊರೆಯಿತು.
ಮುಧೋಳದ ಮೇಲೆ ಶಿವಾಜಿಯ ದಾಳಿ
ಅಂದಿನ ಮುಧೋಳದ ರಾಜ ಬಾಜಿಯ ಕರ್ನಾಟಕದಲ್ಲಿ ಕಪಟದಿಂದ ಶಿವಾಜಿಯ ತಂದೆ ಶಹಾಜೆಯನ್ನು ಶರೆ ಹಿಡಿದು ವಿಜಾಪುರಕ್ಕೆ ಕಳಿಸಿದ್ದರಿಂದ ಶಿವಾಜಿಯು ಮುಧೋಳವನ್ನು ಸುಟ್ಟ ಸಂಗತಿಯು ಇತಿಹಾಸದಲ್ಲಿ ಪ್ರಸಿದ್ಧವಿದೆ. ಬಾಜಿಯ ಪೂರ್ವದ ಇತಿಹಾಸವು ತಿಳಿದಿಲ್ಲ. ಆದರೆ ಘೋರ್ಪಡೆಗಳು ಪೂರ್ವದಲ್ಲಿ ಸಹ ಹೆಸರಾಗಿದರೆಂಬ ಸಂಗತಿಯು ಮೇಲೆ ಹೇಳಿದ ಉಡದ ವೃತ್ತಾಂತದಿಂದ ತಿಳಿಯುತ್ತದೆ.
ಆಳ್ವಿಕೆ
ಬಾಜಿಯ ತರುವಾಯ ಅವನ ಮಗ ಮಾಲೋಜಿಯು ಸಂಸ್ಥಾನದ ಓಡೆಯ ನಾದನು. ವಿಜಾಪುರವು ಹಾಳಾದ ಬಳಿಕ ಔರಂಗಜೇಬನು ಮಾಲೋಜಿಗೆ ಜಹಾಗೀರಿನ ಸನದು ಕೊಟ್ಟನು. ಮಾಲೋಜಿಯ ತರುವಾಯ ಮೂರು ತಲೆಯ ವರೆಗೆ ಇತಿಹಾಸವೇನು ತಿಳಿದಿಲ್ಲ. ನಾಲ್ಕನೇ ತಲೆಯವನ ಹೆಸರು ಮಾಲೋಜಿಯೇ. ಇವನು ಬಹು ದಿವಸ ರಾಜ್ಯವಾಳಿದನು. ಬಾಳಾಜೀ ವಿಶ್ವನಾಥನಿಂದ ಕಡೆಯ ಬಾಜೀರಾಯನವರೆಗೆ ಯಾವತ್ತು ಪೇಶವಗಳನ್ನು ಇವನು ನೋಡಿದ್ದನೆಂದು ಹೇಳುತ್ತಾರೆ. ಪೇಶವನ ಜರೀ ಪಟಕಾಯೆಂಬ ನಿಶಾನಿಯು ಮಾಲೋಜಿಯ ವಶದಲ್ಲಿತ್ತು. ಆದ್ದರಿಂದ ಪೇಶವನ ಎಲ್ಲಾ ಯುದ್ಧಗಳಲ್ಲಿ ಮಾಲೋಜಿಯು ಇರುತ್ತಿದ್ದನು. ಇವನ ಮೈಗೆ ಬಹಳ ಗುಂಡುಗಳು ತಗಲಿದ್ದರಿಂದ ಅವನಿಗೆ ನಡಿಯಲಿಕ್ಕು ಸಹ ಬರುತ್ತಿದ್ದಲ್ಲವೆಂದು ಹೇಳುತ್ತಾರೆ. ಪುಣೆಯಲ್ಲಿ ಇವರು ವಾಸವಿರುತ್ತಿದ್ದ ಭಾಗಕ್ಕೆ ಘೋರ್ಪಡ್ಯಾಚೀ ಪೇಠಯೆಂಬ ಹೆಸರು ಬಂದಿದೆ. ಅಲ್ಲಿ ಮಾಲೋಜಿಯ ಮನೆ ಈಗ್ಯೂ ಇರುತ್ತದೆ.
ಸಹೋದರರ ಕಲಹ
ಮಾಲೋಜಿಯು ೧೮೦೫ರಲ್ಲಿ ಮರಣ ಹೊಂದಿದ ಬಳಿಕ ಅವನ ಮಗ ನಾರಾಯಣ ರಾಯನು ೧೧ ವರ್ಷ ರಾಜ್ಯವನ್ನಾಳಿ ೧೮೧೬ರರಲ್ಲಿ ಮರಣ ಹೊಂದಿದನು. ಇವನಿಗೆ ಗೋವಿಂದರಾಯ, ಲಕ್ಷ್ಮಣರಾಯ, ವೆಂಕಟರಾಯಯೆಂಬ ಮೂವರು ಮಕ್ಕಳಿದ್ದರು. ತಂದೆಯ ತರುವಾಯ ಸಿಂಹಾಸದ ಸಲುವಾಗಿ ಈ. ಮೂವರಿಗೂ ಜಗಳ ಹುಟ್ಟಿ ಇವರು ಪುಣೆಗೆ ಹೋಗಲಾಗಿ, ವೆಂಕಟರಾಯನ ತಾಯಿಯ ಪ್ರಯತ್ನದಿಂದ ಅವನಿಗೆ ರಾಜ್ಯಾಧಿಕಾರವು ಕೊಡಲ್ಪಟ್ಟಿತು; ಗೋವಿಂದರಾಯನಿಗೂ ಲಕ್ಷ್ಮಣರಾಯನಿಗೂ ಪೇಶವನು ತನ್ನ ದಂಡಿನಲ್ಲಿ ಚಾಕರಿಯ ಕೊಟ್ಟನು.
ನಾನೇ ರಾಜನೆಂದು ಬಂದ ವ್ಯಕ್ತಿ
ಆಪ್ಟೆಯ ಯುದ್ಧದಲ್ಲಿ ಗೋವಿಂದರಾಯ ಮಡಿದನು; ಲಕ್ಷ್ಮಣರಾಯನು ಬಡೋದೆಯ ಸಂಸ್ಥಾನದಲ್ಲಿ ಚಾಕರಿಗೆ ನಿಂತನು. ಮುಂದೆ 7 ವರ್ಷದ ನಂತರ ಒಬ್ಬ ಮನುಷ್ಯನು ನಾನೇ ಗೋವಿಂದರಾಯನೆಂದು ಹೇಳಿ ಮುಧೋಳದ ಸಿಂಹಾಸನದ ಸಲುವಾಗಿ ಮುಂಬಯಿ ಸರ್ಕಾರಕ್ಕೆ ಅರ್ಜಿಯನ್ನು ನೀಡಿದನು. ಅವನು ತದ್ರೂಪ ಗೋವಿಂದರಾಯನ ಹಾಗೇ ಇದ್ದದ್ದರಿಂದ ಗೋವಿಂದ ರಾಯನ ಹೆಂಡತಿಯು ಅವನ ಬಳಿಯಲ್ಲಿ ಹೋಗಿ ನಿಂತಳು. ಮೂರು ವರ್ಷ ಅವನ ವಿಚಾರಣೆ ನಡೆದು, ಕಡೆಯಲ್ಲಿ ಅವನಿಗೆ ಕನ್ನಡ ಭಾಷೆ. ಬಾರದ್ದರಿಂದ ಅವನು ಗೋವಿಂದರಾಯನಲ್ಲೆಂದು ಸರಕಾರದವರು ಠರಾವು ಮಾಡಿದರು. ಅವನುವೊಬ್ಬ ಗೋಸಾವಿ ಇದ್ದನೆಂದು ಕಡೆಗೆ ಸಿದ್ಧವಾಯಿತು.
1850ರ ನಂತರ
ವೆಂಕಟರಾಯನು ೧೮೫೪ರಲ್ಲಿ ಮರಣ ಹೊಂದಿದನು. ವೆಂಕಟರಾಯನ ತರುವಾಯ ಅವನ ಮಗ ಬಳವಂತರಾಯನು ಚಿಕ್ಕಂದಿನಲ್ಲಿ ಚನ್ನಾಗಿ ವಿದ್ಯಾಭ್ಯಾಸ ಮಾಡಿ, ಎರಡೇ ವರ್ಷ ಕಾರಭಾರ ಮಾಡಿ ಮರಣ ಹೊಂದಿದನು. ಬಳವಂತರಾಯನ ಮಗ ವೆಂಕಟರಾಯನನ್ನು ಸರಕಾರದವರು ಕೊಲ್ಲಾಪುರದಲ್ಲಿ ಚನ್ನಾಗಿ ವಿದ್ಯಾಭ್ಯಾಸ ಮಾಡಿಸಿ ಅವನು ಪ್ರೌಢನಾದ ಬಳಿಕ ಅವನಿಗೆ ಸನ್ ೧೮೮೨ರಲ್ಲಿ"
ಮುಖತ್ಯಾರಿಯನ್ನು ಕೊಟ್ಟರು.
ಲೇಖನ ಮೂಲ - ಬಾಂಬೆ ಗ್ಯಾಜೆಟಿಯರ್