ಮುಧೋಳ ತಾಲೂಕಿನ ಮೂರು ಕಡೆ ವಿದ್ಯುತ್ ಪ್ರಸರಣ ಕೇಂದ್ರ


ಮುಧೋಳ: ತಾಲೂಕಿನ ದಾದನಟ್ಟಿ, ಇಂಗಳಗಿ, ಮೆಟ್ಟಗುಡ್ಡ ಗ್ರಾಮಗಳ ಬಳಿ ತಲಾ 15 ಕೋಟಿ ರೂ.ಗಳ ವೆಚ್ಚದಲ್ಲಿ 110 ಕೆವಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಗೆ ‌ಮಂಜೂರಾತಿ‌ ಸಿಕ್ಕಿದೆ ಎಂದು ಕ್ಷೇತ್ರದ ಶಾಸಕ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ‌ ತಿಳಿಸಿದ್ದಾರೆ.

ಇದರಿಂದಾಗಿ ರೈತರಿಗೆ ವ್ಯತ್ಯಯವಿಲ್ಲದ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ. ರೈತರ ಬಹುದಿನಗಳ ಆಸೆ ಈ ಮೂಲಕ ಈಡೇರಿದೆ ಎಂದು ಅವರು ತಿಳಿಸಿದ್ದಾರೆ.

ನವೀನ ಹಳೆಯದು