ದೊಡ್ಡ ಮೊತ್ತಕ್ಕೆ ಮಾರಾಟವಾದ ಮುಧೋಳ ಎತ್ತು

ಮುಧೋಳ : ಸಮೀಪದ ಹಲಕಿ ಗ್ರಾಮದ ಕಾಶಿಲಿಂಗಪ್ಪ ಮತ್ತು ಯಮನಪ್ಪಗಡದಾರ ಸಹೋದರರು ಸಾಕಿ ಬೆಳೆಸಿದ್ದ ಎತ್ತು ಬರೋಬ್ಬರಿ 14 ಲಕ್ಷ ರೂ.ಗಳಿಗೆ ಮಾರಾಟವಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಎರಡೂವರೆ ವರ್ಷದ ಹಿಂದೆ ಮೂಡಲಗಿ ತಾಲೂಕಿನ ರಡರಟ್ಟಿ ಗ್ರಾಮದಿಂದ 5 ಲಕ್ಷ ರೂ. ಕೊಟ್ಟು ಈ ಎತ್ತು ಖರೀದಿಸಿದ್ದರು. ಎರಡುವರೆ ವರ್ಷದಲ್ಲಿಕಟ್ಟು ಮಸ್ತಾಗಿ ಬೆಳೆದ ಎತ್ತು ಇಂದು ಬರೋಬ್ಬರಿ 14 ಲಕ್ಷರೂಪಾಯಿಗೆ ಮಾರಾಟವಾಗಿದೆ. ಸುಮಾರು 50ಕ್ಕೂ ಹೆಚ್ಚು ಕಣದಲ್ಲಿ ಸ್ಪರ್ಧೆ ನೀಡಿ, ಎಲ್ಲಕಡೆ ಬಹುಮಾನಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, 6 ಬೈಕ್, 5 ತೋಲಿ ಬಂಗಾರ, 12ಲಕ್ಷ ರೂ.ಗಳನ್ನ ಗಳಿಸಿದೆ.

ಸದ್ಯ ಈ ಎತ್ತನ್ನು ರಬಕವಿ-ಬನಹಟ್ಟಿತಾಲೂಕಿನ ನಂದಗಾಂವ ಗ್ರಾಮದ ವಿಠ್ಠಲ ಮ್ಯಾಗಾಡಿಯವರು 14ಲಕ್ಷ ರೂ.ಗೆ ಖರೀದಿಸಿದ್ದಾರೆ. ಯಾವುದೇ ಕಣಕ್ಕೆ ಇಳಿದರೂ ಬಹುಮಾನ ನಿಶ್ಚಿತವಾಗಿ ಪಡೆದುಕೊಳ್ಳುತ್ತಿತ್ತು.

ಕರ್ನಾಟಕದಲ್ಲಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಗ್ರಾಮಸ್ಥರು ತಮ್ಮ ನೆಚ್ಚಿನ ಎತ್ತನ್ನುಆರತಿ ಎತ್ತಿ ಭಾವನಾತ್ಮಕವಾಗಿ ಬೀಳ್ಕೊಟ್ಟರು.


ನವೀನ ಹಳೆಯದು