ಮುಧೋಳ ನಗರಸಭೆಯ ಬಜೆಟ್‌ ಪೂರ್ವಭಾವಿ ಸಭೆ ಇಂದುಮುಧೋಳ: ಸನ್ 2023-24 ನೇ ಸಾಲಿನ ಮುಧೋಳ ನಗರಸಭೆಯ ಆಯವ್ಯಯ ಪತ್ರಿಕೆ ತಯಾರಿಸಬೇಕಾಗಿದ್ದು ಅದಕ್ಕಾಗಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ನಗರಸಭೆಯ ಸಭಾ ಭವನದಲ್ಲಿ ಜ.9 ರಂದು ಸಂಜೆ 4 ಗಂಟೆಗೆ ಪೂರ್ವಭಾವಿ ಸಭೆ ಕರೆಯಲಾಗಿದೆ ಕಾರಣ ಮುಧೋಳ ನಗರದ ಸಾರ್ವಜನಿಕರು, ವಿವಿಧ ಸಂಘ-ಸ ೦ಸ್ಥೆಯವರು, ವರ್ತಕರು, ಉದ್ಯಮಿದಾರರು, ನಗರದ ಮುಖಂಡರುಗಳು ಮತ್ತಿತರರು ಈ ಪೂರ್ವಭಾವಿ ಸಭೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಧೋಳ ನಗರದ ಅಭಿವೃದ್ಧಿ ಕುರಿತು ತಮ್ಮ ಸಲಹೆ ಸೂಚನೆ ನೀಡ ಬೇಕೆಂದು ನಗರಸಭೆ ಅಧ್ಯಕ್ಷ ಮಂಜುನಾಥ ಮಾನೆ, ಉಪಾಧ್ಯಕ್ಷೆ ಸುನೀತಾ ಭೋವಿ, ಪೌರಾಯುಕ್ತ ಶಿವಪ್ಪ ಅಂಬಿಗೇರ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
ನವೀನ ಹಳೆಯದು