ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಶಿರೋಳ ಬಾಲಕಿಯರು ಆಯ್ಕೆ, ಕ್ರೀಡೆಯನ್ನು ಪ್ರೋತ್ಸಾಹಿಸಲು ಮಕ್ಕಳನ್ನು ದತ್ತು ತೆಗೆದುಕೊಂಡ ಗ್ರಾಮಸ್ಥರು

ಶಿರೋಳ : ತಾಲೂಕಿನ ಶಿರೋಳ ಗ್ರಾಮದ ಕಾಡಸಿದ್ದೇಶ್ವರ ಹಿರಿಯ ಪಾಥಮಿಕ ಬಾಲಕಿಯರು ಶಾಲೆಯ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಈ ಮಕ್ಕಳನ್ನು ದತ್ತು ಪಡೆದು ಅವರಿಗೆ ಪೌಷ್ಟಿಕ ಆಹಾರ ಉತ್ತಮ ತರಬೇತಿ ಹಾಗೂ ಖರ್ಚಿಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದು ಒಂದು ಮಾದರಿಯಾಗಿದೆ.

ಕಳೆದ ನವೆಂಬರ್ ನಲ್ಲಿ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಶಿರೋಳ ಗ್ರಾಮದ ಮಹಾನಂದ ಜಮಖಂಡಿ, ನೇತ್ರಾ ಮರನೂ‌ರ, ಸೌಜನ್ಯ ಚಿಂಚಲಿ, ಗಂಗಾ ಕಾಂಬಳೆ ಶ್ವೇತಾ ಬ್ಯಾಕೋಡ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ. ವಿದ್ಯಾರ್ಥಿನಿಯರಾಗಿದ್ದಾರೆ.

ಇದು ಶಿರೋಳ ಗ್ರಾಮಕ್ಕೆ ದೊಡ್ಡ ಹೆಮ್ಮೆಯನ್ನು ಉಂಟು ಮಾಡಿದೆ ಗ್ರಾಮಸ್ಥರೆಲ್ಲ ಸೇರಿ ಸಭೆ ನಡೆಸಿ ಸನ್ಮಾನಿಸಿದ್ದಾರೆ.

ಇದೇ ಸಂದರ್ಭದಲ್ಲಿ ಈ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ಮತ್ತು ಉತ್ತಮ ತರಬೇತಿಗೆ ಖರ್ಚಿಗೆ ಹಣ ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಅದಕ್ಕಾಗಿ ಅವರು ಒಂದು ನಿವೇಶನ ಗೊತ್ತು ಮಾಡಿ ಅಲ್ಲಿ ಅಡಿಗೆ ಮತ್ತು ತರಬೇತಿಗೆ ವ್ಯವಸ್ಥೆ ಮಾಡಿದ್ದಾರೆ. ಮುಖ್ಯ ಶಿಕ್ಷಕ ಆರ್ ಆರ್  ಶಿವಪುರ್ ಮತ್ತು ದೈಹಿಕ ಶಿಕ್ಷಕ ಜಡಗಣ್ಣವರ ಅವರು ಊಟ ಮತ್ತು ತರಬೇತಿ ಮೇಲ್ವಿಚಾರಣೆಯ ಹೊಣೆ ಹೊತ್ತುಕೊಂಡಿದ್ದಾರೆ. ಇಡೀ ಗ್ರಾಮದ ಜನ ಹೆಮ್ಮೆಯಿಂದ ಆಗಾಗ ಬಂದು ಅವರನ್ನು ಬೆಂಬಲಿಸಿ ಹೋಗುತ್ತಿದ್ದಾರೆ.

ನವೀನ ಹಳೆಯದು