Glory saint: ಮಹಾಲಿಂಗಪುರ ಮಹಾಲಿಂಗೇಶ್ವರ ಮಹಿಮೆ ಕಂಡು ಬೆರಗಾಗಿದ್ದ ಮುಧೋಳ ಸಂಸ್ಥಾನದ ರಾಜ

   ಮುಧೋಳ ರಾಜನಾದ ಮಾಲೋಜಿ ಘೋರ್ಪಡೆಗೂ ಆಶ್ಚರ್ಯ ಉಂಟುಮಾಡಿತು. ಆತ ಮಹಾತ್ಮರ ಶ್ರೀ ಚರಣ ಕಮಲಗಳ ದರುಶನ ಭಾಗ್ಯ ಪಡೆಯಬೇಕೆಂದು ಬಯಸಿದ. ಮಾಲೋಜಿ ದೊರೆಯು ನರಗಟ್ಟಿಗೆ ಹೋಗಲು ಆನೆ ಕುದುರೆ ರಥ ಕಾಲಾಳು, ಸೇನೆ, ಮಂಗಲ ವಾದ್ಯಗಳೊಂದಿಗೆ ಚತುರಂಗ ಬಲಸಹಿತ ನರಗಟ್ಟಿಗೆ ಹೊರಟನು. ನರಗಟ್ಟಿ ಊರಿನ ಮುಖ್ಯ ಬೀದಿಗಳಲ್ಲಿ ಮಾಲೋಜಿಯ ಚತುರಂಗ ಸೈನ್ಯದ ಭವ್ಯ ಮೆರವಣಿಗೆ ಹೊರಟಿತು.

    ಮಕ್ಕಳೂ ಸಹ ಬೆರಗಾಗಿ ಆ ದೃಶ್ಯವನ್ನು ನೋಡುತ್ತಿದ್ದರು. ಮಕ್ಕಳ ಗುಂಪಿನಲ್ಲಿದ್ದ ಮಹಾಲಿಂಗನೆಂಬ ಬಾಲಕನು ಮುನ್ನುಗ್ಗಿ ನಡೆದಾಗ ಮಧ್ಯದಲ್ಲಿ ಬಂದ, ಆ ಬಾಲಕನನ್ನು ನೋಡಿದ ದೊರೆಯ ಆನೆ ಮದವೇರಿದಂತೆ ಕೋಪಿಸಿಕೊಂಡು ಸೊಂಡಿಲುನಿಂದ ಚಂಡನ್ನು ಒಗೆಯುವಂತೆ ಆ ಮಗುವನ್ನು ಎತ್ತಿ ನೆಲಕಪ್ಪಳಿಸಿತು, ಆಗ ಆ ಮಗು ಅಸುನಿಗಿತು. ಸುದ್ದಿ ತಿಳಿದ ತಾಯಿ ಗಂಗವ್ವ ಹುಚ್ಚಿಯಂತೆ ಓಡೋಡಿ ಬಂದು ಜೋರಾಗಿ ಅಳತೊಡಗಿದಳು.

    ಆಗ ಮಾಲೋಜಿ ಅರಸನು ದುಖಃ ತಪ್ಪನಾಗಿ “ಎಲೇ ತಾಯಿಯೇ ಅಳಬೇಡ ಪರಮ ಪಾವನರಾದ ಮಹಾಲಿಂಗ ಮುನಿವರ್ಯರನ್ನು ಪ್ರಾರ್ಥಿಸಿ ಮಗುವನ್ನು ಬದುಕಿಸಿ ಕೊಡುವೆ” ಎಂದು ಹೇಳಿದನು. ಮಾಲೋಜಿ ಅರಸನು ದುಖಃದಿಂದ ಪರಿತಪಿಸುತ ನರಗಟ್ಟಿಯ ಚನ್ನಗಿರಿಗೆ ಬಂದನು.

    ಪರಿಪರಿಯಿಂದ ಬೇಡಿಕೊಂಡನು ಆಗ ಶಿವಭಕ್ತೆ ಗಂಗವ್ವಳು ಸಹ ಅನೇಕ ವೃತ, ಲಿಂಗ ಪೂಜೆಗಳ ಫಲದಿಂದ ಪಡೆದ ಮಗನಿಗೆ ಮಹಾಲಿಂಗನೆಂದು ಹೆಸರಿಟ್ಟು ಅವನನ್ನು ಕಳೆದುಕೊಂಡಿದ್ದೇನೆ” ಏನು ಮಾಡಲಿ ಎಂದು ಜೋರಾಗಿ ಪರಿತಪಿಸಿದಳು.

    ಮಹಾಲಿಂಗ ಮುನಿನಾಥನು ಮಾಲೋಜಿ ದೊರೆಯನ್ನು ಗಂಗವ್ವಳನ್ನು ಸಮಾಧಾನಪಡಿಸಿದರು. “ಶಿವನ ಪಂಚಾಕ್ಷರಿ ಮಂತ್ರ, ವಿಭೂತಿ ಮಹಿಮೆಯನ್ನು ಜಗಕ್ಕೆ ತೋರಲು ಅವನಾಡಿದ ಲೀಲೆ” ಎಂದು ಹೇಳಿದರು “ನಮಃ ಶಿವಾಯ” ಎಂಬ ಪಂಚಾಕ್ಷರಿ

ವಿಭೂತಿಯನ್ನು ಮಗುವಿನ ಹಣೆಗೆ ಧರಿಸಿದ ಕೂಡಲೇ ನಿದ್ರೆಯಿಂದ ಎಚ್ಚೆತ್ತಂತೆ ಎದ್ದು ಕುಳಿತಿತು ಆಗ ಮಾಲೋಜಿಗೆ ಹೋದ ಜೀವ ಬಂದಂತಾಯಿತು ಮತ್ತು ಮಹಾಲಿಂಗೇಶ್ವರರಿಗೆ ನಮಸ್ಕರಿಸಿದರು ಇಂದಿಗೂ ಘೋರ್ಪಡೆ ಮನೆತನದ ಕುಲದೈವ ಮಹಾಲಿಂಗೇಶ್ವರರೇ ಆಗಿದ್ದಾರೆ. 

ಮಾಲೋಜಿ ದೊರೆಯಿಂದ ನರಗಟ್ಟಿಪುರದ ದಾನ

    ಮಾಲೋಜಿ ಗೋರ್ಪಡೆ ರಾಜನಿಗೆ ಈ ಘಟನೆಯಿಂದ ಮನಸ್ಸು ತುಂಬಿ ಬಂದಿತು “ಈ ನರಗಟ್ಟಿಪುರವನ್ನು ದಾನವಾಗಿ ಕೊಡುತ್ತೇನೆ ಸ್ವೀಕರಿಸಬೇಕು ಎಂದು ಅರಿಕೆ ಮಾಡಿಕೊಂಡಾಗ ಮುನಿಗಳು ಕನಸಿನಲ್ಲಿಯೂ ನೆನಸದ ಶಾಶ್ಚತವಲ್ಲದ ಈ ಭೂಮಿಯನ್ನು ನಾನು ಸ್ವೀಕರಿಸಲಾರೆ”.

    ರಾಜನು ಪರಿಪರಿಯಿಂದ ಅವರನ್ನು ಬೇಡಿಕೊಂಡನು ರಾಜನ ಅಚಲ ನಿಷ್ಠೆಗೆ ಸೋತನು ಮತ್ತು ರಾಜನು “ಚಂದ್ರಬಿಂಬ ಬಿಸಿಯಾಗಬಹುದು ಸೂರ್ಯ ತಂಪಾಗಬಹುದು ನಾನಿತ್ತ ದಾನವನ್ನು ಮರಳಿ ಬಯಸಿದರೆ ನನಗೆ ಗೋಹತ್ಯ ಮಾಡಿದ ಪಾಪ ' ಪ್ರಾಪ್ತವಾಗಲಿ. 

                    ನರಗಟ್ಟಿಪುರವನ್ನು ದಾನ ಮಾಡಿದ ಸನ್ನದು

ನನ್ನ ಭಕ್ತಿ ಕಾಣಿಕೆಯೆಂದು ಈ ಗ್ರಾಮವನ್ನು ಸ್ವೀಕರಿಸು ಗುರುವೇ ಎಂದು ಬಿನ್ನವಸಿಕೊಂಡನು. ಮುನಿಗಳು ಒಪ್ಪಿದರು ನರಗಟ್ಟಿಯ ದಾನ ಪತ್ರವನ್ನು ಕಂಚಿನ "ಪಟದಲ್ಲಿ ಬರೆಯಿಸಿ ಅವರಿಗಿತ್ತನು.

    ಈಗಲೂ ದಾನ ಪತ್ರ ಶ್ರೀ ಮಹಾಲಿಂಗೇಶ್ವರ ಮಠದಲ್ಲಿದೆ. ನಾನಾ ವರ್ಣದ ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಮಹಾಲಿಂಗೇಶ್ವರರನ್ನು ಕುಳ್ಳಿರಿಸಿ ವಂದಿಮಾಗದರಿಂದ ಜಯಘೋಷ ಹಾಕುತ್ತ ಮೆರವಣಿಗೆ ನಡೆಯಿತು. ಎಂಟು ದಿಕ್ಕುಗಳಲ್ಲಿ ಎಂಟು ಲಿಂಗಮುದ್ರೆಗಳು ಸ್ಥಾಪನೆಯಾಗಿದ್ದು ಇಂದಿಗೂ ಇವೆ. ಈ ಲಿಂಗಮುದ್ರೆಗಳ ಜಾತ್ರೆ ಇಂದಿಗೂ ನಡೆಯುತ್ತದೆ.

ನವೀನ ಹಳೆಯದು