ಬಾಗಲಕೋಟೆ: ಕೇಂದ್ರ ಸಹಕಾರಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ದ್ವಿಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.
2022ರ ಮಾರ್ಚ್ ತಿಂಗಳಲ್ಲಿ ಆಡಳಿತ/ ಸಿಬ್ಬಂದಿ/ ನೇಮಕಾತಿಯ ಆದೇಶವನ್ನು ಡಿಸಿಸಿ ಬ್ಯಾಂಕ್ ಹೊರಡಿಸಿತ್ತು. ಆದರೆ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ನಿಯಮಗಳ ಪಾಲನೆಯಾಗುತ್ತಿಲ್ಲ ಎಂದು ಮಾಲತೇಶ ಮಲ್ಲಪ್ಪ ಮಲಘಾಣ, ರಮೇಶ ಸತ್ಯಪ್ಪ ಮೆಳ್ಳಿ, ತುಳಸಿಗೇರಿ ದ್ಯಾವಪ್ಪ ಶೆಲ್ಲಿಕೇರಿ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ ಮತ್ತು ಉಮೇಶ ಅಡಿಗ ಅವರಿದ್ದ ನ್ಯಾಯಪೀಠವು ತಡೆಯಾಜ್ಞೆ ನೀಡಿದೆ.