ಧಾರವಾಡ-ಫಂಡರಪುರ ಉರುಳು ಸೇವೆ

ಮುಧೋಳ : ಶ್ರೀ ವಿಠ್ಠಲ ರುಕ್ಮೀಣೀ ಹರಿಮಂದಿರ ಟ್ರಸ್ಟ್‌ಕಮಿಟಿ ನರೇಂದ್ರದಿಂದ-ಫಂಡರಪುರದವರೆಗೆ ಈಶ್ವರ ಯಲ್ಲಪ್ಪ ಅಂಬಣ್ಣನವರ 3ನೇ ವರ್ಷದ ಉರುಳು ಸೇವೆ ಮಾಡುತ್ತಿದ್ದಾರೆ. ಧಾರವಾಡದ ನರೇಂದ್ರ ಗ್ರಾಮದಿಂದ ಉರುಳು ಸೇವೆ ಆರಂಭಿಸಿ ಮುಧೋಳ ನಗರಕ್ಕೆ ಬಂದು ತಲುಪಿದ್ದಾರೆ.

ಜಮಖಂಡಿ, ಕೃಷ್ಣಾನದಿ, ಬಿಕೆ ಜಂಬಗಿ, ಸಾವಳಗಿ, ತೆಲಸಂಗ, ಜತ್ತ, ಶೇಗಾಂವ ಮಾಂಝರಿ ಮಾರ್ಗವಾಗಿ ಪಂಡರಪೂರ ತಲುಪಲಿದ್ದಾರೆ. ಹರಕೆ ಹೊತ್ತು ಪ್ರತಿವರ್ಷ ಉರುಳು ಸೇವೆ ಮಾಡುತ್ತಿದ್ದಾರೆ.

ದಾರಿ ಮಧ್ಯೆ ಅಲ್ಲಲ್ಲಿ ವಿಶ್ರಾಂತಿ ಪಡೆದು, ಪಾಂಡುರಂಗನನ್ನು ಧ್ಯಾನಿಸುತ್ತಾ, ತಾವು ತಲುಪಬೇಕಾದ ಸ್ಥಳವನ್ನು ಈಶ್ವರ ಅಂಬಣ್ಣವರ ತಲುಪಲಿದ್ದಾರೆ.


ನವೀನ ಹಳೆಯದು