ಶತಮಾನ ಪೂರ್ಣಗೊಳಿಸಿದ ಮುಧೋಳದ ಕಟ್ಟಡ

ಐತಿಹಾಸಿಕ ಕಾಲದ ಕಟ್ಟಡಗಳು ಗಟ್ಟಿತನಕ್ಕೆ ಹೆಸರು ಮಾಡಿವೆ. ಇಂತಹ ಅಪರೂಪದ ಕಟ್ಟಡಗಳಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಈ ಕಟ್ಟಡವೂ ಒಂದು "ಕಿಂಗ್ ಎಡ್ವರ್ಡ್" ಎಂಬ ಇಂಗ್ಲೆಂಡಿನ ಬ್ರಿಟಿಷ್ ರಾಜನ ಸ್ಮರಣಾರ್ಥವಾಗಿ ೧೯೨೩ ರಲ್ಲಿ ನಿರ್ಮಿಸಲಾದ ಈ ಕಟ್ಟಡದಲ್ಲಿ ಬ್ರಿಟೀಷರ ಕಾಲದಲ್ಲಿ ಅನಾಥ ಮಕ್ಕಳ ಶಾಲೆ ನಡೆಸಲಾಗುತ್ತಿತ್ತಂತೆ. ಮುಂದೆ ಹಲವು ತಾಣಗಳಾಗಿ ಬದಲಾಯಿತು ಶತಮಾನ ಕಾಣುತ್ತಿರುವ ಈ ಕಟ್ಟಡದ ವಿನ್ಯಾಸ: ಇಂದಿನ ಯಾವ ಇಂಜಿನಿಯರ್ಗಳೂ ಮಾಡಲಾರರು ಅನಿಸುತ್ತೆ.


1923 ರಲ್ಲಿ ಮುಧೋಳ ಸಂಸ್ಥಾನಿಕರಿಂದ ಉದ್ಘಾಟನೆ

ಐತಿಹಾಸಿಕ ಕಾಲದ ಮೆಚ್ಚಿನ ನಿರ್ಮಾಣ ತಂತ್ರ ಎನ್ನಿಸಿಕೊಂಡಿದ್ದ ಗಚ್ಚು ಮತ್ತು ಸಂಪೂರ್ಣ ಕಾಡುಗಲ್ಲಿನಲ್ಲಿ ಕಟ್ಟಲಾಗಿರುವ ಈ ಕಟ್ಟಡ ಅಂದು ಬ್ರಿಟಿಷರ ಅಳ್ವಿಕೆಯಲ್ಲಿ "ಧರ್ಮಾರ್ಥ ದವಾಖಾನೆ” ಆಗಿತ್ತು. ಸ್ವಾತಂತ್ರ್ಯ ನಂತರ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಿಣಿಗಳು ವಿಶ್ರಮಿಸುವ ತಾಣವಾಗಿತ್ತು. ತದನಂತರ ಸರ್ಕಾರಿ ಆಸ್ಪತ್ರೆಯಾಗಿ ಜನ್ಮ ತಾಳಿತ್ತು. ನಂತರದ ದಿನಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿಶೇಷ ವಾಸಸ್ಥಳವಾಗಿತ್ತು, ಆದರೆ ಸಧ್ಯಕ್ಕೆ ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳ ಕಾರ್ಯಾಲಯವಾಗಿದೆ. ಕಟ್ಟಡದ ವಿನ್ಯಾಸ ನೋಡಿದರೆ ಇದೊಂದು ಶ್ರಮಜೀವಿಗಳ ವಿಶ್ರಾಂತಿ ಧಾಮ ಎನ್ನುವಂತಿದೆ. ಜಮಜಂಡಿಯ ಮಹಾರಾಜ ತನ್ನ ಕಾಠೇವಾಡ ಕುದುರೆಯೊಂದಿಗೆ ಇಲ್ಲಿ ವಿಹಾರಕ್ಕಾಗಿ ಬರುತ್ತಿದ್ದ ಎಂಬ ಇತಿಹಾಸವೂ ಇದೆ, (ಈ ಕುರಿತಂತೆ ಪೂರ್ಣ ಇತಿಹಾಸ ಲಭ್ಯವಾಗಲಿಲ್ಲಾ)ಕಿಂಗ್ ಎಡ್ವರ್ಡ್ ಸ್ಮಾರಕ ಕಟ್ಟ

ಈ ಕಟ್ಟಡದ ಒಳಾವರಣ ನೋಡಿದರೆ ಅದ್ಭುತ ವಿನ್ಯಾಸ ಹೊಂದಿದೆ. ಅಂದಿನ ಬೆಳಕಿಂಡಿಗಳ ನಿರ್ಮಾಣ ನೋಡಿದರೆ ನಿಜಕ್ಕೂ ವಿಸ್ಮಯವಾಗುತ್ತೆ, ಭಯಂಕರ ಮಳೆ ಸುರಿದರೂ ಒಂದು ಹನಿ ನೀರೂ ಒಳಗೆ ಸಿಡಿಯದಂತೆ ಕಲಾತ್ಮಕವಾಗಿ ತಯಾರಿಸಿದ್ದಾರೆ. ಅಂದಿನ ಈ ಕಟ್ಟಡದ ಕಿಟಕಿ, ಬಾಗಿಲುಗಳ ಕಟ್ಟಿಗಳನ್ನು ಮುಟ್ಟಿ ನೋಡಿದರೆ ಕಲ್ಲು ಮುಟ್ಟಿದಂತಾಗುತ್ತದೆ. ಇಷ್ಟು ವರ್ಷ ಕಳೆದರೂ ಕೊಂಚವೂ ಮುಕ್ಕಾಗಿಲ್ಲಾ, ಗೋಡೆಯ ಒಳಗೇ ಕಪಾಟು ಮಾದರಿಯಲ್ಲಿ ಕೂಡ್ರಿಸಿದ ರೋಮನ್ ಗಡಿಯಾರ, ವಿಶಾಲ ಪ್ರಾಂಗಣದಲ್ಲಿ ಕಟ್ಟಿಗೆಯ ತುಂಡುಗಳಿಂದಲೇ ನಿರ್ಮಿಸಲಾಗಿರುವ ಕಲಾತ್ಮಕ ಸೂರು ನಿಂತು ನೋಡುವಂತಿದೆ.

ನವೀನ ಹಳೆಯದು