ಕಳಚಿತು ಮುಧೋಳ ರಂಗಭೂಮಿಯ ಧ್ರುವತಾರೆ

ಮುಧೋಳ: 1942ರಲ್ಲಿ ತಾಲೂಕಿನ ರಂಜಣಗಿಯಲ್ಲಿ ಜನಸಿದ್ದ ಹನುಮಂತ ಚನ್ನಾಳ ಅವರು ಹವ್ಯಾಸಿ ನಾಟಕ ರಂಗಭೂಮಿಗೆ 1962 ರಲ್ಲಿ ಆದರ್ಶ ಪ್ರೇಮ ಎಂಬ ನಾಟಕದ ಸ್ತ್ರೀ ಪಾತ್ರದೊಂದಿಗೆ ಪ್ರವೇಶ ಮಾಡಿದ್ದರು. ಮೊದಲು ಹಲವಾರು ನಾಟಕಗಳಲ್ಲಿ ಕಥಾನಾಯಕಿ, ಖಳನಾಯಕಿ, ಹಾಸ್ಯ ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿ ಅದ್ಭುತ ಕಲಾವಿದರೆನಿಸಿಕೊಂಡು ಮುಂದೆ ಪುರುಷ ಪಾತ್ರಗಳಲ್ಲಿ ನವರಸಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಾ, ಒಂದು ನಾಟಕದಲ್ಲಿ ಮೂರು ಪಾತ್ರ ಹಾಗೂ ಮೂರು ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡು ತಾಲೂಕಿಗೆ ಗೌರವ ತಂದ ಕಲಾವಿದರು. 2012 ರ ವರೆಗೆ ನಾಟಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗೆ ಈ ಕಲಾ ಸೇವೆಯೊಂದಿಗೆ ಹಲವಾರು ಭಜನಾ ಪದಗಳನ್ನು ಹಾಡುತ್ತಾ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಜನೇವರಿ 3, 2023 ರಂದು ತಮ್ಮ ಬದುಕಿನ ರಂಗಭೂಮಿಯ ಪಾತ್ರವನ್ನು ಮುಗಿಸಿದ್ದಾರೆ.

ನವೀನ ಹಳೆಯದು