ಜಿಲ್ಲೆಯಲ್ಲಿ ಇಂದಿನಿಂದ 5G ಸೇವೆ ಆರಂಭ

ಮುಧೋಳ: ದೇಶದಲ್ಲಿ ಜಿಯೋ 5ಜಿ ಭಾರೀ ಸದ್ದು ಮಾಡುತ್ತಿದೆ. ಈ ಮಧ್ಯೆ ಸದ್ಯ ರಿಲಯನ್ಸ್​ ಜಿಯೋ ಮತ್ತೆ ಕರ್ನಾಟಕದ 5 ಜಿಲ್ಲೆಗಳಲ್ಲಿ ತನ್ನ 5ಜಿ ಸೇವೆಯನ್ನು ವಿಸ್ತರಿಸಿದೆ. 

ಎಲ್ಲೆಲ್ಲಿ ಲಭ್ಯ?

ಜಿಯೋ ಈ ಹಿಂದೆ ಕರ್ನಾಟಕದ ಹಲವು ಕಡೆಗಳಲ್ಲಿ 5ಜಿ ಸೇವೆಯನ್ನು ಆರಂಭಿಸಿತ್ತು. ಇದೀಗ ಕರ್ನಾಟಕದ ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ತುಮಕೂರಿನಲ್ಲಿ ಜಿಯೋ ಟ್ರೂ 5ಜಿ ಸೇವೆಯನ್ನು ಸ್ಥಾಪಿಸಿದೆ.

ಒಂದೇ ದಿನದಲ್ಲಿ 50 ನಗರಗಳಲ್ಲಿ ಜಿಯೋ 5ಜಿ

ಭಾರತದ ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ ರಿಲಯನ್ಸ್ ಜಿಯೋ ಇದೇ ಜನವರಿ 24 ರ ಮಂಗಳವಾರದಂದು 50 ನಗರಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳ ಅತಿದೊಡ್ಡ ಬಿಡುಗಡೆಯನ್ನು ಘೋಷಿಸಿದೆ. ಈ ಆರಂಭದೊಂದಿಗೆ ದೇಶದಲ್ಲಿ ಇದುವರೆಗೆ 184 ನಗರಗಳಲ್ಲಿ ಜಿಯೋ ಬಳಕೆದಾರರು ಈಗ ಜಿಯೋ ಟ್ರೂ 5ಜಿ ಸೇವೆಗಳನ್ನು ಪಡೆಯುತ್ತಿದ್ದಾರೆ.

ಜಿಯೋ 5ಜಿ ಬಗ್ಗೆ ವಕ್ತಾರರ ಮಾತು

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, "ಕರ್ನಾಟಕದ ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ತುಮಕೂರು ಹಾಗೂ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 45 ಹೆಚ್ಚುವರಿ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿರುವುದನ್ನು ಘೋಷಿಸಲು ನಾವು ತುಂಬಾನೇ ಸಂತೋಕ್ಷಗೊಂಡಿದ್ದೇವೆ. ಇದರೊಂದಿಗೆ ಒಟ್ಟು 5ಜಿ ನಗರಗಳ ಸಂಖ್ಯೆಯನ್ನು ಭಾರತದ 184 ನಗರಗಳಿಗೆ ಕೊಂಡೊಯ್ಯುತ್ತೇವೆ. ಇದು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಎಲ್ಲೆಡೆ 5ಜಿ ಸೇವೆಗಳ ಅತಿದೊಡ್ಡ ಜಾರಿಗಳಲ್ಲಿ ಒಂದಾಗಿದೆ.

ನವೀನ ಹಳೆಯದು