ಜಿಲ್ಲೆಯಲ್ಲಿ ಇಂದಿನಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿರುವ ಲೋಕಾಯುಕ್ತಮುಧೋಳ: ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಡಿಸೆಂಬರ 17 ರಿಂದ 23ರ ವರೆಗೆ ವಿವಿಧ ತಾಲೂಕಾ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಸಭೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ಡಿಸೆಂಬರ 17 ರಂದು ಬೆ.10:30 ರಿಂದ ಮಧ್ಯಾಹ್ನ 2 ವರೆಗೆ ಬಾಗಲಕೋಟೆ ಲೋಕಾಯುಕ್ತ ಕಚೇರಿ, 19 ರಂದು ಬೆ.10:30 ರಿಂದ ಮಧ್ಯಾಹ್ನ 1.30 ವರೆಗೆ ಬೀಳಗಿ ತಾಲೂಕಾ ಪಂಚಾಯತಿಯಲ್ಲಿ, 20 ರಂದು ಬೆ.10.30 ರಿಂದ ಮಧ್ಯಾಹ್ನ 1.30 ವರೆಗೆ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನವರಿಗೆ ಬಾದಾಮಿ ತಾಲೂಕಾ ಪಂಚಾಯತಿಯಲ್ಲಿ, 21 ರಂದು ಮುಧೋಳ ಪಿಡಬ್ಲೂಡಿ ನಿರೀಕ್ಷಣಾ ಮಂದಿರ, 22 ರಂದು ಜಮಖಂಡಿ ರಮಾನಿವಾಸ ಪ್ರವಾಸಿ ಮಂದಿರ, 23 ರಂದು ಇಲಕಲ್ಲ ಪಿಡಬ್ಲೂಡಿ ನಿರೀಕ್ಷಣಾ ಮಂದಿರದಲ್ಲಿ ಬೆ.10.30 ರಿಂದ ಮಧ್ಯಾಹ್ನ 2 ವರೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-236200, 295170ಗೆ ಸಂಪರ್ಕಿಸುವಂತೆ ಪೊಲೀಸ್ ಉಪಾಧೀಕ್ಷಕಿ ಪುಷ್ಪಲತಾ ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೀನ ಹಳೆಯದು