ಮುಧೋಳಕ್ಕೆ ಸರಕಾರಿ ಮಹಿಳಾ ಕಾಲೇಜು ಮಂಜೂರು.

ಮುಧೋಳ: ನಗರದ ಜನತೆಯ ಬಹು ದಿನದ ಬೇಡಿಕೆ ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಮಹಿಳಾ ಕಾಲೆಜನ ಅವಶ್ಯಕತೆ ಮನಗಂಡು ಇಲ್ಲಿ ಸರಕಾರಿ ಮಹಿಳಾ ಕಾಲೇಜು ಮಂಜೂರಿ ಮಾಡಲಾಗಿದೆ ಎಂದು ಸಚಿವ ಗೋವಿಂದ ಕಾರಜೊಳ ತಿಳಿಸಿದ್ದಾರೆ.

ಅದು ಇದೆ ಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುವದು. ಕಾಲೇಜ್ ನಿರ್ಮಾಣಕ್ಕೆ ಕಟ್ಟಡ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳು ಲಭ್ಯವಿದೆಂದು ಕಾರಜೋಳರು ತಿಳಿಸಿದ್ದಾರೆ. ತಾಯಿ ಮಗು ಆರೈಕೆ ವಿಶೇಷ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಂದು ಅವರು ತಿಳಿಸಿದ್ದಾರೆ.
ನವೀನ ಹಳೆಯದು