ಮುಧೋಳ: ಸ್ಥಳೀಯ ಘೋರ್ಪಡೆ ರಾಜವಂಶಸ್ಥರ ಮಹಾರಾಣಿಯಾಗಿದ್ದ ಇಂದಿರಾಜೆ ಭೈರವಸಿಂಗ್ ಘೋರ್ಪಡೆ (84) ಡಿಸೆಂಬರ್ 10 ರಂದು ಪುಣೆಯಲ್ಲಿ ನಿಧನರಾದರು.
ಅವರಿಗೆ ರಾಜಕುಮಾರಿ ಮೇನಕಾರಾಜೆ ಮೌರ್ಯ ಘೋರ್ಪಡೆ, ಅಳಿಯ ವಿಜಯಸಿಂಗ್ ಮೌರ್ಯ ಹಾಗೂ ರಾಜಮನೆತನದ ಅಪಾರ ಬಂಧುಬಳಗದವರಿದ್ದಾರೆ.
ಮಗಳು ಮೇನಕಾ ರಾಜೆ ಹಾಗೂ ಅಳಿಯ ವಿಜಯಸಿಂಗ್ ಮೌರ್ಯ |
ಭೈರವಸಿಂಗ್ ಘೋರ್ಪಡೆ
ಇಂದಿರಾಜೆ ಘೋರ್ಪಡೆ ಅವರ ಪತಿ ಹಾಗೂ ಮುಧೋಳದ ಕೊನೆಯ ಅರಸರಾದ ಭೈರವಸಿಂಗ್ ಘೋರ್ಪಡೆ ಅವರು ಕೂಡ ಪುಣೆ ಹತ್ತಿರ 1984 ರಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದರು.