ರವಿಚಂದ್ರನ್ ಪುತ್ರ ವಿಕ್ರಮ ನಟನೆಯ ಚಿತ್ರದಲ್ಲಿ ಮುಧೋಳ ನಾಯಿ.


ಸ್ಯಾಂಡಲ್‌ವುಡ್‌ ಕನಸುಗಾರ ಕ್ರೇಜಿಸ್ಟಾರ್‌ ರವಿಚಂದ್ರನ್‌ ಇಬ್ಬರು ಪುತ್ರರೂ ಈಗ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. 'ಸಾಹೇಬ' ಚಿತ್ರದ ಮೂಲಕ ಮೊದಲ ಪುತ್ರ ಮನುರಂಜನ್‌ ಸಿನಿಮಾಗೆ ಬಂದರೆ ಎರಡನೇ ಪುತ್ರ ವಿಕ್ರಮ್‌, 'ತ್ರಿವಿಕ್ರಮ' ಚಿತ್ರದ ಮೂಲಕ ನಟನಾಗಿ ಬೆಳ್ಳಿ ತೆರೆಗೆ ಬಂದರು. ಇದೇ ವರ್ಷ ಜೂನ್‌ನಲ್ಲಿ 'ತ್ರಿವಿಕ್ರಮ' ಚಿತ್ರ ತೆರೆ ಕಂಡಿತ್ತು. ಈ ಚಿತ್ರವನ್ನು ಸಹನಾಮೂರ್ತಿ ನಿರ್ದೇಶಿಸಿದ್ದಾರೆ.

ಸಿನಿಮಾದಲ್ಲಿ ವಿಕ್ರಮ್‌ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ವಿಕ್ರಮ್‌ ಈಗ ಎರಡನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್‌ ಫಿಕ್ಸ್‌ ಮಾಡಿಲ್ಲ. ಇದು ವಿಕ್ರಮ್‌ ಎರಡನೇ ಸಿನಿಮಾ ಆಗಿರುವುದರಿಂದ ಸದ್ಯಕ್ಕೆ ಈ ಚಿತ್ರಕ್ಕೆ VKR 2 ಎಂದು ಹೆಸರಿಡಲಾಗಿದೆ. ವಿಕ್ರಮ್‌ 2ನೇ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ‌ ಸಹೋದರ ಮನುರಂಜನ್‌ ರವಿಚಂದ್ರನ್ ದೇವಿ ಸನ್ನಿಧಿಯಲ್ಲಿ ಸ್ಕ್ರಿಪ್ಟ್‌ ಪೂಜೆಯಲ್ಲಿ ಭಾಗಿಯಾಗಿದ್ದ ಚಿತ್ರದ ನಿರ್ದೇಶಕ, ಮನುರಂಜನ್‌ ಹಾಗೂ ವಿಕ್ರಮ್‌. ವಿಕ್ರಮ್‌ ಎರಡನೇ ಸಿನಿಮಾವನ್ನು ಕಾರ್ತಿಕ್‌ ರಾಜನ್‌ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದು ಕಾರ್ತಿಕ್‌ ನಿರ್ದೇಶನದ ಮೊದಲ ಸಿನಿಮಾ ಮುಹೂರ್ತ ಮುಗಿಸಿರುವ ಚಿತ್ರತಂಡ ಸದ್ಯಕ್ಕೆ ಪ್ರೀ ಪ್ರೊಡಕ್ಷನ್‌ ಕೆಲಸದಲ್ಲಿದೆ. ಚಿತ್ರದ ನಿರ್ಮಾಪಕ, ನಾಯಕಿ, ತಾರಾಬಳಗ ಹಾಗೂ ತಂತ್ರಜ್ಞರ ವಿವರವನ್ನು ಶೀಘ್ರದಲ್ಲೇ ಕೊಡುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.
ಕ್ಯಾಮರಾ ಪೂಜೆ ಮಾಡುತ್ತಿರುವ ವಿಕ್ರಮ್‌ ರವಿಚಂದ್ರನ್‌. ಮೊದಲ ಚಿತ್ರದಲ್ಲಿ ಲವರ್‌ ಬಾಯ್‌ ಆಗಿದ್ದ ವಿಕ್ರಮ್‌, ಎರಡನೇ ಚಿತ್ರದಲ್ಲಿ ರಗಡ್‌ ಅವತಾರದೊಂದಿಗೆ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 

ನವೀನ ಹಳೆಯದು