ಸರಳತೆಯ ಸಾಹುಕಾರ, ಸಮಾನತೆಯ ಸರದಾರ. ಸತೀಶ್ ಬಂಡಿವಡ್ಡರಮುನ್ನುಡಿ

ಮನೆಗೊಂದು ಮರ, ಊರಿಗೊಂದು ವನ

ನೆಲ, ಜಲ, ಸಸ್ಯ ಸಂಪತ್ತಿನಿಂದ ಶ್ರೀಮಂತವಾದ ಭವ್ಯ ಭಾರತ ಜನಸಂಖ್ಯಾ ಹೆಚ್ಚಳದಿಂದ ದಿನೇ ದಿನೇ ಹೆಚ್ಚುತ್ತಿರುವ ಕೈಗಾರಿಕೆಗಳಿಂದ, ಕಾಡನ್ನು ಕಡಿದು ನಾಡನ್ನಾಗಿ ಪರಿವರ್ತಿಸುವ ಪರಿಣಾಮ, ರಸ್ತೆಗಳ ನಿರ್ಮಾಣದಿಂದ ನಿಸರ್ಗದಲ್ಲಿ ದೊರೆವ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಇಂಗಾಲದ ದಾಯಕ್ಸೈಡ್ ಪ್ರಮಾಣ ಹೆಚ್ಚಿ ವಾಯು ಮಾಲಿನ್ಯದ ಪರಿಣಾಮ ಮತ್ತು ಪ್ರಭಾವ ಎಲ್ಲದರ ಮೇಲೂ ಉಂಟಾಗಿದೆ. ಈ ಎಲ್ಲ ಹಿನ್ನಲೆಯನ್ನು ಅರಿವಿಗೆ ತಂದುಕೊಂಡು ತಾನು ಕೇವಲ ತನ್ನ ಕುಟುಂಬಕ್ಕೆ ಮಾತ್ರ ಸೀಮಿತನಾಗಿ ಉಳಿಯದೇ ಪರಹಿತಕ್ಕಾಗಿ ದುಡಿದು ತಮ್ಮ ಗೌರವದೊಂದಿಗೆ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಅಳಿಲು ಸೇವೆಗೆ ಮುಂದಾದ ಮುದುವೊಳಲನ ಮಹಾನ್ ಕನಸುಗಾರ, ಮಮತಾಮಯಿ, ಹೃದಯವಂತ, ಸಮಾಜ ಚಿಂತಕ, ಬಡವರ ಹಾಗೂ ಅಸಹಾಯಕರ ಪಾಲಿನ ಆಶಾಕಿರಣ, ನೊಂದವರ ನಂದಾದೀಪವೇ ಆಗಿರುವ ಶ್ರೀ ಸತೀಶ ಬಂಡಿವಡ್ಡರ ಅವರ “ಮನೆಗೊಂದು ಮರ" ಕಾರ್ಯಕ್ರಮ ಅಭಿಯಾನವಾಗಿ ರೂಪಗೊಂಡು, ಒಂದು ಬಾರಿ ಆಚರಿಸಿ ಮತ್ತೆ ಮುದಗೊಂಡು ಇನ್ನೊಂದು ಬಾರಿಗೆ ಅಭಿಯಾನ 2 ಆಗಿ ಅನುಷ್ಠಾನ ಗೊಳ್ಳುತ್ತಿರುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ತಾನೂ ಬದುಕಬೇಕು, ಮತ್ತೊಬ್ಬರ ಬದುಕಿಗೂ ಆಸರಾಗಬೇಕು ಎಂಬ ಛಲದಿಂದ ಮುಧೋಳ, ವಿಜಾಪೂರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ವಿವಿಧ ಉದ್ದಿಮೆಗಳನ್ನು ಆರಂಭಿಸಿ ಇಂದು ಬಹುಜನ ನಿರುದ್ಯೋಗಿ ವಿದ್ಯಾವಂತರಿಗೆ ಆಶ್ರಯದಾತರಾಗಿದ್ದಾರೆ. ಸಾಮಾಜಿಕವಾಗಿ ಪಡೆದ ಸ್ಥಾನ ಮಾನಕ್ಕಾಗಿ ಋಣ ತೀರಿಸುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ. ಹಸಿದು ಬಂದವರಿಗೆ ಐದು ರೂಪಾಯಿಗಳಲ್ಲಿ ಉಪಹಾರ ಹತ್ತು ರೂಪಾಯಿಗಳಲ್ಲ ಊಟ ಕೊಟ್ಟು ಉಪಕೃತರಾಗಿದ್ದಾರೆ. ಬಾಯಾರಿ ಬಳಲಿ ಬಂದವರಿಗೆ ಅರವಟ್ಟಿಗೆ ಇಡಿಸಿ, ನೀರು ಪೂರೈಸಿ ದಾಹ ತೀರಿಸಿದ ಮಹಾನ್ ಪುಣ್ಯದ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಸಾಮ್ರಾಟ ಅಶೋಕನ ಕಾಲದಲ್ಲಿ ಪ್ರಜಾಹಿತ ಲೋಕ ಕಲ್ಯಾಣಕ್ಕಾಗಿ ಜನಹಿತ ಕಾರ್ಯಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಸಾಲು ಮರಗಳನ್ನು ನೆಡುವುದು, ಪಾದಾಚಾರಿಗಳಿಗೆ ತೊಂದರೆಯಾಗದ ಹಾಗೆ ಅರವಟ್ಟಿಗೆಗಳನ್ನು ಇರಿಸಿದ. ದನ ಕರುಗಳಗೆ ಅನುಕೂಲವಾಗಲೆಂದು ನೀರಿನ ತೊಟ್ಟಿ ಕಟ್ಟಿಸಿದ ಸಂಗತಿಗಳನ್ನು ಇತಿಹಾಸ ಓದಿ ತಿಳಿದಿದ್ದೇವು. ಪ್ರಜೆಗಳನ್ನು ಕುರಿತು ನಾನು ಸಭೆ ನಡೆಸುತ್ತಿರಲಿ, ಊಟ ಮಾಡುತ್ತಿರಲಿ, ಶಯನ ಮಂದಿರದಲ್ಲೇ ಇರಲಿ, ಪ್ರಜೆಗಳು ತಮ್ಮ ಸಮಸ್ಯೆ ಪರಿಹಾರಕ್ಕೆ ನ್ಯಾಯದ ಗಂಟೆ ಬಾರಿಸಬಹುದು ಎಂಬುದನ್ನು ಇತಿಹಾಸದಲ್ಲಿ ಓದಿ ತಿಳಿದಿದ್ದೇವು, ಆದರೆ ಇಂದು ಬಹುಮುಖ ಜನೋಪಕಾರಿ ಕಾರ್ಯಗಳ ಮಾಡುತ್ತಾ. ವಿದಾಯಕ ಕಾರ್ಯಕ್ರಮಗಳನ್ನು ನಡೆಸುತ್ತಾ ಯುವ ಪ್ರತಿಭೆಗಳಿಗೆ ಬೆನ್ನು ತಟ್ಟುತ್ತಾ ಕಲಿಯುವ ಮಕ್ಕಗೆ ಪುರಸ್ಕರಿಸುತ್ತಾ ಮಹಾನುಭಾವರಂತೆ ಮಾದರಿ ವ್ಯಕ್ತಿತ್ವ ರೂಪಿಸಿಕೊಂಡು ಆದರ್ಶ ಮಾರ್ಗದಲ್ಲಿ ಸಾಗುತ್ತಿರುವ ಶ್ರೀ ಮಾನ್ ಬಂಡಿವಡ್ಡರ ಅವರ ಸೇವೆ ಶ್ಲಾಘನೀಯ, ಹಳ್ಳಿ, ಪಟ್ಟಣ ಎನ್ನುವ ತಾರತಮ್ಯ ಸರಿಸಿ, ಶುದ್ಧ ಊಟ, ಉಪಹಾರ, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿಯನ್ನು ಜನಾರೋಗ್ಯಕ್ಕೆ ಪೂರೈಸಲು ಮಾಡಿದ ಸತ್ ಸಂಕಲ್ಪದಂತೆ ಇಡೀ ಮುಧೋಳ ತಾಲೂಕಿನ ಜನರ ಸ್ವಾಸ್ಥ ಜೀವನಕ್ಕೆ ಕಾರ್ಯ ಯೋಜನೆ ರೂಪಿಸಿ ತಮ್ಮ ಅಳಿಲು ಸೇವೆ ಎನ್ನುತ್ತಾ ಜನ ಮನದಲ್ಲಿ ಉಂದು ಮನೆ ಮಾತಾಗಿದ್ದಾರೆ. ಸಮಾಜದ ಹಿರಿಯರ, ಯುವಕರ ಸೇವೆ ಮಾರ್ಗದರ್ಶನಗಳನ್ನು ಪಡೆಯುತ್ತಾ “ಮನೆಗೊಂದು ಮರಭಿಯಾನ-೨" ಕಾರ್ಯಕ್ರಮ ತನ್ನ ಸಾರ್ಥಕತೆಯನ್ನು ಹೆಚ್ಚಿಸಿಕೊಂಡಿದೆ ಅಂತಾ ವಿನಮ್ರದಿಂದ ಹೇಳುವ ಅವರ ಮಾತು ಹೃನ್ಮನ ತಟ್ಟಿದೆ.

ಸಸ್ಯ ರಾಶಿಯನ್ನೇ ನೆಟ್ಟು, ಸೌಂದರ್ಯ ಕಾಶಿಯನ್ನೇ ನಿರ್ಮಿಸುವ ಪಾವನ ಕಾರ್ಯದಲ್ಲಿ ತೊಡಗಿಕೊಂಡ ಸ್ನೇಹದ ಸೇತುವೆ ಕಟ್ಟಿ ಶ್ರಮಿಸುತ್ತಿರುವ ಭಾವ ಅನನ್ಯವಾದುದು. ಜೀವಿತ ಕಾಲದಲ್ಲಒಲೆಯ ಸೌದೆಯಿಂದ ಹಿಡಿದು ಸಂಸಾರದ ಬಹು ಉಪಯೋಗಿ ವಸ್ತುವಾದ ನಾನು ನಿನ್ನ ಕರುಳನಕುಡಿಗೆ ಉಸಿರಾಗಿರುವ ನನ್ನ ಕೊರಆಗೆ ಕೊಡಲಿ ಪೆಟ್ಟು ಹಾಕ ಬೇಡಣ್ಣಾ ಅಂತಾ ಅಂಗಲಾಚಿ ಬೇಡುವ ಮರದ ಧ್ವನಿ ಬಹುಶಃ ಬಂಡಿವಡ್ಡರ ಅವರಿಗೆ ಕೇಚಿಸಿದೆ. ಅವರಿಗಷ್ಟೇ ಕೇಆಸಿದರೆ ಸಾಲದು ಎಲ್ಲರಿಗೂ ಕೇಳಸುವಂತಾಗಬೇಕು. ಬರೀ ಕೇಚಿಸಿದರೆ ಸಾಲದು ಪರ್ಯಾಯವಾಗಿ ಗಿಡನೆಡುವ ಕಾರ್ಯ ಹಸಿರು ಕ್ರಾಂತಿಯಾಗಿ ಉಸಿರಿರುವವರೆಗೂ ಉಆಯಬೇಕು ಎನ್ನುವ ಮಹಾದಾಸಯೇ ಮನೆಗೊಂದು ಮರ ಅಭಿಯಾನಕ್ಕೆ ನಾಂದಿ.

ಅಳಿವುದು ಕಾಯ, ಉಳಿಯುವುದು ಕೀರ್ತಿ ಎನ್ನುವ ಹಂಬಲ ನಿವೇದನೆಗೊಂಡಿದೆ ಹಲವಾರು ವಿದಾಯಕ ಕಾರ್ಯ ಯೋಜನೆಗೆ “ಮನೆಗೊಂದು ಮರ” ಅಭಿಯಾನ ಪ್ರೇರಣೆ ನೀಡಿದೆ. ದನಿವಿಲ್ಲದೇ ದಯೆ ತುಂಬಿ ಧರ್ಮದ ದಾರಿಯಲ್ಲಿ ಸಾಗುತ್ತಿರುವ ಈ ಕಾರ್ಯ ಮಹೋನ್ನತವಾದುದು. ಶ್ರೀಯುತ ಸತೀಶ ಬಂಡಿವಡ್ಡರ ಅವರ ಸೇವೆ ಸಾರ್ಥಕಗೊಂಡಿದೆ. ಮರನೆಟ್ಟು, ಬರ ಅಟ್ಟು ಎನ್ನುವ ಮಾತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವುದನ್ನು ಜಾಗೃತಗೊಳಿಸಿದೆ.

ಮನೆಗೊಂದು ಮರ ನೆನಪು ಅಜರಾಮರ
“ವೃಷ್ಟೋ ರಕ್ಷತಿ ರಕ್ಷಿತಃ”

ಎಮ್. ಜಿ. ದಾಸರ ವಿಶ್ರಾಂತ ಉ.ನಿ 
ಸಾರ್ವಜನಿಕ ಶಿಕ್ಷಣ ಇಲಾಖೆ, ಮುಧೋಳ 

ಪ್ರಾಮಾಣಿಕತೆ, ಸರಳತೆ, ವಿನಯತೆ ಈ ಗುಣಗಳು ಒಬ್ಬರಲ್ಲಿ ಇದ್ದು ಆ ವ್ಯಕ್ತಿ ಅಜಗಣ್ಣನಂತೆ ಗುಪ್ತ ಭಕ್ತಿಯಲ್ಲಿ ಕಾಯಕ ನಿಷ್ಠೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಾವ ಕೀರ್ತಿ ವಾರ್ತೆಯನ್ನು ಬಯಸದೆ, ಪ್ರಶಸ್ತಿ ಪ್ರಖ್ಯಾತಿಯನ್ನು ಆಶಿಸದೆ ಇರುವುದು ಅದ್ಭುತಗಳಲ್ಲಿ ಅದ್ಭುತವಲ್ಲವೆ. ಆದರೂ ಈ ಪ್ರಚಾರ ಯುಗದಲ್ಲಿ ಎಲೆ ಮರೆಯ ಕಾಯಿಯಂತೆ ಕಂಡು ಕಾಣದಂತೆ ತಮ್ಮ ಸೇವೆಯನ್ನು ಸತತವಾಗಿ ಸಲ್ಲಿಸುತ್ತಿರುವ ಮಹಾನ ಶಕ್ತಿ. “ಕವಿ ನೆಲದ ಕಾಯಕ ರತ್ನ” ಸತೀಶ ಬಂಡಿವಡ್ಡರ,

ಎತ್ತರೆತ್ತರಕ್ಕೆ ಬೆಳೆಯುವುದೆಂದರೆ ಅದು ಬೆಳ್ಳಿ ತಟ್ಟೆಯಲ್ಲಿಟ್ಟು ಬಂದ ಕೊಡುಗೆ ಏನಲ್ಲ. ಅದರ ಹಿಂದೆ ಸಹಾಯಕವಾಗಿದ್ದ ಬದುಕನ್ನು ಬದಿಗೆ ತಳ್ಳುವ ತಾಕತ್ತಿನೊಂದಿಗೆ ನಿತ್ಯ ಸವಾಲುಗಳನ್ನು ಸ್ವೀಕರಿಸಿಅವುಗಳನ್ನು ದಿಟ್ಟತನದಿಂದ ಎದುರಿಸಿ ಬದುಕುತ್ತೇನೆಂಬ ಛಲ ಇರುವ ವ್ಯಕ್ತಿಗೆ ಅದು ಸಿದ್ದಿಸಲು ಸಾಧ್ಯ. ಈ ಮಾತು ಕಾಯಕ ರತ್ನ, ಕಾಯಕ ಯೋಗಿ ಶ್ರೀ ಸತೀಶ ಬಂಡಿವಡ್ಡರಿಗೆ ತತ್ವಶಃ ಅನ್ವಯಗೊಳ್ಳುತ್ತದೆ.

ಹೆತ್ತವರ ಋಣ, ಸಮಾಜದ ಋಣ, ಗುರು-ಹಿರಿಯರ ಋಣ. ಹಾಗೂ ಭೂಮಿಯ ಋಣಗಳನ್ನುತೀರಿಸಬೇಕೆಂಬ ಸಂಕಲ್ಪದಿಂದ ತನ್ಮೂಲಕ ಮಾಡುತ್ತಿರುವ ಕವಿ ನೆಲದ ಮಹಾ ಜನತೆಯ ಸೇವೆಗಳನ್ನು ನನಗೆ ಯಾವುದೇ ಅಧಿಕಾರ ಇಲ್ಲದೆಯೂ ನನ್ನ ಉಸಿಲಿರುವವರೆಗೂ ಸ್ವಂತ ದುಡಿಮೆಯಿಂದ ಮುನ್ನಡೆಸುತ್ತೇನೆಂದು ಪ್ರಮಾಣ ಮಾಡಿರುವ ಸತೀಶ ಬಂಡಿವಡ್ಡರ ನೀಜವಾಗಿ “ಕಾಯಕಯೋಗಿ”, “ದಾಸೋಹ ರತ್ನ” ಜನಮುಖಿಯಾದ ಇವರು ಇನ್ನು ಹೆಚ್ಚು ಹೆಚ್ಚು ಜನಪರ, ನಾಡಪರ ಕಾರ್ಯ ಯೋಜನೆಗಳು ಯಶಸ್ವಿಯಾಗಲಿ. ಅವರು ಧೀರ್ಘಕಾಲ ಬಾಳಿ ನಾಡಿನ ಸೇವೆ ಮಾಡುವಂತಾಗ ಎಂದು ಬಸವಾದಿ ಪ್ರಮಥರ ಶರಣರ ಆಶೀರ್ವಾದ ಇವರ ಮೇಲೆ ಇರಲಿ.
ಡಾ. ಸಿದ್ದಣ್ಣ ಬಾಡಗಿ  
ಅಧ್ಯಕ್ಷರು, ಕ. ವ. ಸಾ. ಪ, ಮುಧೋಳ. 

ಮನೆಗೊಂದು ಮರ ಅಭಿಯಾನ ಭಾಗ-1 ಹಾಗೂ 2 ರ ರೂವಾರಿ ಸತೀಶ ಬಂಡಿವಡ್ಡರ ಪರಿಚಯ

ಒಬ್ಬ ಕನಸುಗಾರ, ಪರಿಶ್ರಮಿ, ಸಮಾಜ ಸೇವಕ, ಹೃದಯ ಶ್ರೀಮಂತ, ಬಡವರ, ಅಸಹಾಯಕರ, ಯುವ ಜನತೆಯ ಆಶಾ ಕಿರಣ, ಕಾರ್ಯಕರ್ತರ ಪಾಱನ ಸತೀಶ ಅಣ್ಣ, ಹಿರಿಯರ ಪಾಱನ ಮನೆಮಗ, ಮೃದು ಸ್ವಭಾವದ ಆತನ ನಡೆ-ನುಡಿಯಿಂದ ಸರಿ ಸುಮಾರು 3 ದಶಕಗಳ ಸಾಮಾಜಿಕ, ರಾಜಕೀಯ ಜೀವನಾನುಭವ ಮತ್ತು ಆತನ ಸಮಾಜ ಮುಖಿ ಕಾರ್ಯಗಳು ರಾಜಕೀಯ ಎದುರಾಆಗಳ ಚಿತ್ತ ಕಂಗೆಡಿಸಿರುವ ಛಲಗಾರ ಸತೀಶ ಬಂಡಿವಡ್ಡರ ನೊಂದವರ, ಕಷ್ಟದಲ್ಲಿರುವವರ ಒಳತಿಗಾಗಿ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರ ಜೀವನದ ಸಂಕ್ಷೀಪ್ತ ಪರಿಚಯವನ್ನು ಮಾಡುತ್ತಿದ್ದೇನೆ.

ಅನೇಕ ವ್ಯಕ್ತಿಗಳು ಕಡುಬಡತನದಲ್ಲಿ ಹುಟ್ಟಿ ಜೀವನದುದ್ದಕ್ಕು ಕಷ್ಟಗಳನ್ನು ಎದುರಿಸಿ ಎತ್ತರಕ್ಕೆ ಬೆಳೆದಾಗ ನೊಂದವರಿಗಾಗಿ, ಕಷ್ಟದಲ್ಲಿರುವವರಿಗಾಗಿ ಸಮಾಜದ ಸೇವೆ ಮಾಡುವ ಸಂಕಲ್ಪವನ್ನು ಮಾಡುವ ಜನರು ಅತಿ ವಿರಳ ಅಪರೂಪ ಎಂಬ ಈ ಮಾತನ್ನು ಹುಸಿಗೊಳಿಸಿ ಸಮಾಜದ ಒಆತಿಗಾಗಿ ಶ್ರಮಿಸುತ್ತಿರುವ ಸತೀಶ ಬಂಡಿವಡ್ಡರ ಇತನು ಕಡುಬಡತನದ ಅವಿಭಕ್ತ ಕುಟುಂಬದ ಸೈದಾಪೂರ ಗಲ್ಲಿ ಮುಧೋಳ ನಗರದ ಶ್ರೀ ಚೆನ್ನಪ್ಪ ಹಾಗೂ ಶ್ರೀಮತಿ ಶೆಟ್ಟಿದ್ದಾ ಅನಕ್ಷರಸ್ತ ದಂಪತಿಯ ಹತ್ತು ಜನ ಮಕ್ಕಳಲ್ಲಿ ಹಿರಿಯ ಪುತ್ರನಾಗಿ ಜನಿಸಿದನು.

ತಂದೆ ಕಲ್ಲು ಗಣಿಯಲ್ಲಿ ಕಲ್ಲು ಒಡೆದು ಮುಧೋಳ ನಗರ ಹಾಗೂ ಸುತ್ತನ ಗ್ರಾಮಗಳಿಗೆ ಕೋಣಗಳ ಬಂಡಿಯ ಮುಖಾಂತರ ಕಟ್ಟಡಗಆಗೆ ಪೂರೈಸುವ ಕೆಲಸ. ತಾಯಿ ಕಟ್ಟಡ ಹಾಗೂ ರಸ್ತೆಗಳಗೆ ಬೇಕಾದ ಖಡಿ (ಜಿಲ್ಲೆ) ಒಡೆಯುವ ಕೂಱ ಕೆಲಸ ಮಾಡಿ ಬಂದ ಸಂಪಾದನೆ ಹತ್ತು ಜನ ಮಕ್ಕಳ ಹೊಟ್ಟೆ ಬಟ್ಟೆಗೆ ಸಾಕಾಗುತ್ತಿರಅಲ್ಲ ಅದರಲ್ಲ ಶಿಕ್ಷಣ ಕೊಡಿಸಲು ಹರಸಾಹಸ ಮಾಡುತ್ತಿದ್ದರು.

ಹಿರಿಯ ಪುತ್ರ ಸತೀಶ ನನ್ನು ಮುಧೋಳ ಬಸ್ ನಿಲ್ದಾಣದ ಹತ್ತಿರ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿರುವ ಜೈಹಿಂದ ಸರಕಾರಿ ಶಾಲೆಗೆ ಸೇರಿಸಿ ನಾಲ್ಕನೇಯ ತರಗತಿವರೆಗೆ ಓದಿಸಿದರು. ನಂತರ ಓದಿಸುವುದು ಕಷ್ಟವಾದಾಗ ನಂತರ ಇಂಡಿ ತಾಲೂಕಿನ ಹೊಸಪಡನೂರ ಗ್ರಾಮದ ಬಂಧುಗಳ ಮನೆಯಲ್ಲಿ ಐದನೇಯ ಹಾಗೂ ಆರನೇಯ ವರ್ಗದವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಮುಂದೆ ಮತ್ತೊಬ್ಬ ಬಂಧುಗಳ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ಜಮಖಂಡಿ ತಾಲೂಕಾ ಕಡಪಟ್ಟಯಲ್ಲಿ ಏಳನೇಯ ಹಾಗೂ ಎಂಟನೇಯ ತರಗತಿಯನ್ನು ಮುಗಿಸಿ, 9 ನೇ ತರಗತಿ ಹಾಗೂ 10 ನೇ ತರಗತಿಗಳನ್ನು ಇಂಡಿ ತಾಲೂಕಿನ ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಮಠದಲ್ಲಿ ದಾಸೋಹದಲ್ಲಿ ಊಟ ಮಾಡಿ ಮುಗಿಸಿದರು.

ಮುಂದಿನ ವಿಧ್ಯಾಭ್ಯಾಸವನ್ನು ಬಾಗಲಕೋಟೆಯ ಶ್ರೀ ಬಸವೇಶ್ವರ ಪಾಅಟಿಕ್ನಿಕ್‌ನಲ್ಲಿ ಸಿವಿಲ್ ಇಂಜಿನೀಯರಿಂಗ್ ಮುಗಿಸಿದನು. ಆಸಮಯದಲ್ಲಿ ಗೌರಿ ಶಂಕರ ಖಾನಾವಆಯಲ್ಲಿ ತಿಂಗಳ ಎರಡು ಹೊತ್ತು ಊಟಕ್ಕೆ 180 ರೂ ಇತ್ತು ಇದು ತಂದೆ ತಾಯಿಗೆ ಆರ್ಥಿಕ ಹೊರೆಯಾಗಬಾರದೆಂದು 90 ರೂ ಕೊಟ್ಟು ಒಂದೆ ಹೊತ್ತು ಮಾತ್ರ ಊಟ ಮಾಡುತ್ತಿದ್ದ ನೆನಪು ಈಗಲೂ ನೆನಪಿಸಿಕೊಳ್ಳುತ್ತಾನೆ.

ತನ್ನ ಕಷ್ಟದ ವಿಧ್ಯಾರ್ಥಿ ಜೀವನದ ಅನುಭವದಿಂದ ಮುಧೋಳದಲ್ಲಿ ಉಚಿತ ಶುದ್ಧ ನೀರಿನ ಅರವಟ್ಟಿಗೆಗಳು, ಕೇವಲ 5 ರೂ ಉಪಹಾರ 10 ರೂಗೆ ಊಟ ನೀಡುತ್ತಾ ತನ್ನ ಹಾಗೆ ಕಷ್ಟದಲ್ಲಿರುವವರಿಗೆ ಅನಕೂಲವಾಗಲಿ ಅಂತ ಬಡವರ ಸೇವೆ ಮಾಡುತ್ತಿದ್ದಾನೆ.

ತರಭೇತಿಗಳು
ಗುರಿ ಬದಲಿಸಿದ ಸ್ವ-ಉದ್ಯೋಗ ತರಭೇತಿ
ಸರಕಾರಿ ಇಂಜಿನೀಯರ ಆಗಬೇಕೆಂಬ ಕನಸು ಕಂಡ ಸತೀಶನಿಗೆ ಕಾಲೇಜಿನ ಆಡಳಿತ ಮಂಡಳಿಯವರು ಅಂತಿಮ ವರ್ಷದಲ್ಲಿ ಸ್ವ-ಉದ್ಯೋಗ ತರಬೇತಿ ಏರ್ಪಡಿಸಿದ್ದರು. ಈ ತರಬೇತಿಯ ನಂತರ ಸ್ವ-ಉದ್ಯೋಗ ಮಾಡಿ ಉದ್ದಿಮೆ ಸ್ಥಾಪಿಸುವ ಕನಸು ಕಂಡ. ಛಲದಂಕ ಮಲ್ಲನಂತೆ ಸತತವಾದ ಸ್ವ ಪ್ರಯತ್ನದಿಂದ ಬ್ಯಾಂಕಿನ ಅಧಿಕಾರಿಗಳಿಂದ, ಬಂಧು ಮಿತ್ತರ ಸಹಾಯದಿಂದ 26-01-1992 ರಂದು ಪ್ರಥಮ ಸ್ಟೋನ್ ಕ್ರಷಿಂಗ್ ಉದ್ದಿಮೆ ಅಂದಿನ ಮಾಜಿ ಸಂಸದರು ಹಾಗೂ ರಾಜಕೀಯ ಗುರುಗಳಾದ ದಿವಂಗತ ಶ್ರೀ ಎಸ್. ಟಿ. ಪಾಟೀಲರವರ ಅಮೃತ ಹಸ್ತದಿಂದ ಪ್ರಾರಂಭಿಸಿದರು. ಅಂದಿನಿಂದ ಇಲ್ಲಿಯವರೆಗೆ ಶ್ರಮವಹಿಸಿ ಸಹೋದರರ ಹಾಗೂ ಅತ್ಮೀಯ ಗೆಳೆಯರ ಸಹಕಾರದಿಂದ ಬೇರೆ ಬೇರೆ ಉದ್ಯೋಗ, ಉದ್ದಿಮೆಗಳನ್ನು ಸ್ಥಾಪಿಸುತ್ತಾ ಸಾಕಷ್ಟು ಏರುಪೇರುಗಳನ್ನು ಎದುರಿಸಿ ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿ ಯಶಸ್ವಿ ಉದ್ಯಮಿಯಾಗಿದ್ದಾನೆ.ಈ ಒಂದು ತನ್ನ ಅನುಭವದಿಂದ ಯುವಕರಿಗೆ ಸ್ಥ ಉದ್ಯೋಗ ತರಬೇತಿಗಳಾದ ಮೋಬೈಲ್‌ ರಿಪೇರಿ, ಮೋಟಾರ ರಿವೈಂಡಿಂಗ್,ವಾಟ್ ರಿಪೇರಿ, ಗೃಹ ಬಳಕೆ ವಿದ್ಯುತ್ ಉಪಕರಣಗಳ ರಿಪೇರಿ, ಹಾಗೂ ಉಧ್ಯಮ ಕೌಶಲ್ಯ ತರಬೇತಿಗಳನ್ನು ಯುವಕರಿಗೆ ಉಚಿತವಾಗಿ ನೀಡಿ ಸಾಕಷ್ಟು ಯುವಕರನ್ನು ತಮ್ಮ ಕಾಲಮೇಲೆ ತಾವೆ ನಿಲ್ಲುವಂತೆ ಮಾಡಿದ್ದಾನೆ. ಇದರೊಂದಿಗೆ ಸರಕಾರಿ ನೌಕರಿಗಳಗಾಗಿ ಆಯ್ಕೆ ಪರೀಕ್ಷೆ ಎದುಲಿಸಲು FDA, SDA, KAS, PSI, Police ಹಾಗೂ ಸೈನಿಕ ತರಬೇತಿಗಳಂತಹ ಹಲವಾರು ತರಬೇತಿಗಳನ್ನು ನಿರಂತರವಾಗಿ ಯುವಕ ಯುವತಿಯರಿಗೆ ಉಚಿತವಾಗಿ ನೀಡಿ ಸಾಕಷ್ಟು ಜನರಿಗೆ ಸರಕಾರಿ ನೌಕರಿ ಪಡೆಯಲು ಅನಕೂಲ ಮಾಡಿಕೊಟ್ಟಿದ್ದಾರೆ.

ಕೊರೋನಾ ಸಂಕಷ್ಟದಲ್ಲಿ ಸೇವೆ

ಧುತ್ತನೆ ಅವತರಿಸಿದ ಕೋವಿಡ್-19 (ಕೂರೋನಾ) ಸಂಕಷ್ಟದ ಪರಿಸ್ಥಿತಿ ಸತೀಶ ಅವರ ಸಾಮರ್ಥ್ಯ, ಮಾನವಿಯತೆ ಏನು ಎಂಬುದನ್ನು ರುಜುವಾತು ಮಾಡಲು ಒಂದು ವೇದಿಕೆ ಕಲ್ಪಿಸಿಕೊಟ್ಟತು. ಅಂತರ್ಗತ ತಾಕತ್ತಿರುವ ಸತೀಶ ಈ ಸವಾಲು ಎದುರಾದಾಗ ವಿಚಲಿತರಾಗಲಿಲ್ಲ. ಸವಾಲಿಗೆ ಸವಾಲಾಗಿ ನಿಂತರು. ಇಡೀ ಮನುಕಲಕ್ಕೆ ಮಹಾಮಾರಿಯಾಗಿರುವ ಹೊರೋನಾ ಸಂಕಷ್ಟ ಸನ್ನಿವೇಶದಲ್ಲಿ ತನ್ನ ಧರ್ಮಪತ್ನಿ, ಮಗಳಿಗೆ, ಎಲ್ಲ ಬಂದು ಮಿತ್ರರು ಕೂರೋನಾದಿಂದ ಆಸ್ಪತ್ರೆ ಸೇರಿದರೂ ಸಹ ಅಂಜದೆ ತಾನು ಮಾತ್ರ ಮಹಾಜನತೆಯ ಸೇವೆ ನಿಲ್ಲಸಲಿಲ್ಲ ಯಾವ ಅಂಗಡಿಗಳಲ್ಲಿ ಮಾಸ್ ಹಾಗೂ ಸ್ಯಾನಿಟೈಸರ್ ದೊರೆಯುತ್ತಿರಲಿಲ್ಲ ಆದರೆ ಸುಮ್ಮನೆ ಕೂಡದೆ (ಅನ್‌ಲೈನ್) ಮುಂತಾದ ಬೇರೆ ಬೇರೆ ರಾಜ್ಯಗಳಿಂದ ಮಾಸ್ಕ್‌ ಹಾಗೂ ಮನೆಯಲ್ಲಿಯೇ ತಯಾರಿಸಿ ಉಪಯೋಗಿಸುವುದು, ತಾನೆ ಸ್ವತಃ ಹಳ್ಳಿ, ವಾರ್ಡ, ವಾರ್ಡ ತಿರುಗಾಡಿ ತನ್ನ ಕಾರ್ಯಕರ್ತರೊಂದಿಗೆ ಮಾಸ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾನವಿಯತೆ ಮೆರೆದ. ಸರಕಾರ ಮಾಡುವ ಕೆಲಸವನ್ನು ತಾನೆ ಮನೆ ಮನೆಗೆ ಕರಪತ್ರ, ಬ್ಯಾನರಗಳ ಮುಖಾಂತರ ಜಾಗೃತಿ ಮೂಡಿಸಿದ. ಸಾಕಷ್ಟು ಶೂರೋನಾ ರೋಗಿಗಳಿಗೆ ಔಷದ, ಹಾಸಿಗೆಗಳ ವ್ಯವಸ್ಥೆ, ಊಟ, ಉಪಹಾರ, ಅಂಬ್ಯುಲನ್ಸ್ ಮುಂತಾದ ಸೇವೆಗಳನ್ನು ನೀಡಿ ಸಾಕಷ್ಟು ಜೀವಗಳನ್ನು ಕಾಪಾಡಿದ ಹೆಮ್ಮೆಯ ಜನ ಸೇವಕ. ಜೀವಕ್ಕೆ ಹೆದರಿ ಅಧಿಕಾರದಲ್ಲಿದ್ದ ಯಾವುದೆ ಜನಪ್ರತಿನಿಧಿಯು ಹೊರಗೆ ಬರದಿದ್ದ ಸಮಯದಲ್ಲಿ ತನ್ನ ಜೀವದ ಹಂಗು ತೊರೆದು ಸೇವೆ ಮಾಡಿದ್ದನ್ನು ಮಹಾಜನತೆ ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ.
ಟಿ.ಎನ್ ಅರಳಿಕಟ್ಟಿ. 

ರಾಜಕೀಯ ಪ್ರವೇಶ

ಅತಿ ಚಿಕ್ಕ ವಯಸ್ಸಿನಲ್ಲಿಯೇ ಸೇವಾ ಮನೋಭಾವ, ಸಂಘಟನೆ, ತಾಳ್ಮೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿದ್ದರಿಂದ ತನ್ನ ಇಪ್ಪತ್ತನೇಯ ವಯಸ್ಸಿನಲ್ಲಿಯೇ ಉದ್ಯೋಗದ ಜೊತೆ ಜೊತೆಗೆ ತನ್ನ ತಂದೆಯ ಆತ್ಮೀಯ ನಾಯಕರಾದ ಮಾಜಿ ಸಂಸದರಾದ ದಿ. ಶ್ರೀ ಎಸ್. ಟಿ. ಪಾಟೀಲರ ಶಿಷ್ಯನಾಗಿ ರಾಜಕೀಯ ಪ್ರವೇಶ ಮಾಡಿ ಅವರ ಗರಡಿಯಲ್ಲಿಯೇ ಬೆಳೆದು ಮುಧೋಳ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಮಾಡಿ ನಂತರ ಸತತ 10 ವರ್ಷಗಳವರೆಗೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೇಸ್ ಪಕ್ಷದಿಂದ 2009 ರಲ್ಲಿ ಮುಧೋಳ ಪುರಸಭೆಗೆ ಆಯ್ಕೆಯಾಗಿ ಜನತೆ ಮೆಚ್ಚುವಂತೆ ಸೇವೆ ಮಾಡಿದ್ದಾರೆ. ಪ್ರತಿಷ್ಠಿತ ಮುಧೋಳ ಸಹಕಾರಿ ಬ್ಯಾಂಕ್‌ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾನೆ. ಮುಧೋಳ ಲಾಯನ್ಸ್ ಕ್ಲಬ್‌ ಅಧ್ಯಕ್ಷ, ಬಾಪೂಜಿ ಸೌಹಾರ್ದ ಸಹಕಾರಿ ನಿ, ಬಾಗಲಕೋಟ ಇದರ ನಿರ್ದೇಶಕ, ಮುಧೋಳ ಪತ್ತಿನ ಬ್ಯಾಂಕ್‌ನ ನಿರ್ದೇಶಕ ಮುಂತಾದ ಸೇವೆಗಳನ್ನು ಹಾಗೂ ಸಮಾಜ ಸೇವೆ ಹಾಗೂ 3 ದಶಕಗಳ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದಾರೆ. 2018 ರಲ್ಲಿ ಕಾಂಗ್ರೇಸ್ ಪಕ್ಷ ವಿಧಾನ ಸಭೆಯ ಟಿಕೇಟ್ ಕೊನೆಯ ಗಳಿಗೆಯಲ್ಲಿ ನೀಡಿತು ಆದರೆ ಸಮಯದ ಅಭಾವ ಪಕ್ಷದಲ್ಲಿನ ಕಚ್ಚಾಟ ಒಳ ಜಗಳದಿಂದ ಅಲ್ಪ ಮತಗಳ ಅಂತರದಿಂದ ಸೋಲುಂಡರು. ಆದರೆ ಕಾಂಗ್ರೇಸ್ ಪಕ್ಷದ ಯಾವುದೇ ಅಭ್ಯರ್ಥಿ ಹಿಂದೆಂದು ಇಷ್ಟೊಂದು ಮತಗಳನ್ನು ಪಡೆದಿಲ್ಲ. ಪ್ರಥಮ ಪ್ರಯತ್ನದಲ್ಲಿ ಇದೊಂದು ಧಾಖಲೆ ನಿರ್ಮಿಸಿದ ಸತೀಶ ಎಂತಹ ರಾಜಕೀಯ ಪಟು ಎಂಬುದನ್ನು ಸಾಬೀತು ಪಡೆಸಿದರು. ತನಗೆ ಕೆಲವೊಬ್ಬರಿಂದ ರಾಜಕೀಯವಾಗಿ ಅನೇಕ ಅವಮಾನಗಳಾದರೂ ಕಾಂಗ್ರೇಸ್ ಕಾರ್ಯಕರ್ತರ ಹಾಗೂ ತನಗೆ ಹೆಚ್ಚಿನ ಮತ ನೀಡಿದ ಮಹಾಜನತೆಯ ಹಿತದೃಷ್ಠಿಯಿಂದ ಎಲ್ಲವನ್ನು ಸಹಿಸಿಕೊಂಡರು. ಆದರೆ ಸೋತ ನಂತರ ಸುಮ್ಮನೆ ಕೂರಲಿಲ್ಲ ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸಿ ಅವರ ಸಹಕಾರದೊಂದಿಗೆ ಪಕ್ಷವನ್ನು ಪನರ್‌ ಸಂಘಟಿಸುವತ್ತ ಗಮನಹರಿಸಿ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತು ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅದರೊಂದಿಗೆ ಸಮಾಜ ಸೇವೆ ಮುಂದುವರೆಸಿ ನೆರೆ ಹಾವಳಿ ಹಾಗೂ ಕೋವಿಡ್-19 ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ಜನರ ಸೇವೆಮಾಡಿ ಕ್ಷೇತ್ರದ ಮಹಾಜನತೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಈ ಕಷ್ಟದ ಸಮಯದಲ್ಲಿ ಅಧಿಕಾರದಲ್ಲಿರುವವರು ಯಾರು ನಮ್ಮ ಸಹಾಯಕ್ಕೆ ಬರಲಿಲ್ಲ ಸೋತ ವ್ಯಕ್ತಿ ನಮ್ಮೊಂದಿಗೆ ಇದ್ದು ನಮ್ಮ ಸೇವೆ ಮಾಡಿದ್ದಾನೆ ಅಂತ ಮಹಾಜನತೆ ಹೆಮ್ಮೆಯಿಂದ ಹೇಳುತ್ತಾರೆ. ತನಗಾದ ಅವಮಾನಕ್ಕೆ ಹಾಗೂ ಸೋಲಿಗೆ ತಲೆಕೆಡಿಸಿಕೊಳ್ಳದೆ ಜನತೇಯ ಸೇವೆ ಮಾಡುತ್ತಿರುವ ಈತನಿಗೆ ಆ ದೇವರು ಪರರ ಕಷ್ಟಗಳನ್ನು ನೊಂದವರ ಬಾಳಿಗೆ ಸ್ಪಂಧಿಸುವ ಮನೋಭಾವನೆಯನ್ನು ಇನ್ನು ಹೆಚ್ಚು ನೀಡಲಿ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಸೌಭಾಗ್ಯ ದೊರಕಲೆಂದು ಆಶಿಸುವೆ.
ಶಂಭುವಾಣಿ ಪಡನೂರ. 

ನಾ ನೋಡಿದ ಸತೀಶ ಅಣ್ಣಾ ಎಷ್ಟು ಹೇಳಿದರು ಕಡಿಮೆ ಕೊರೋನಾ ಮೊದಲನೇಯ ಹಾಗೂ ಎರಡನೇಯ ಅಲೆಯಲ್ಲಿ ಜನರು ಭಯಭೀತರಾಗಿದ್ದಾಗ ನಗರ ಹಾಗೂ ಎಲ್ಲ ಹಳ್ಳಿಗಳಿಗೆ ತೆರಃ ತಮ್ಮ ಜೀವ ಲೆಕ್ಕಿಸದೆ ಉಚಿತ ಮಾಸ್ತ, ಸ್ಯಾನಿಟೈಸರ್ ಕೊರೋನಾ ಬರದ ಹಾಗೆ ರೋಗ ನಿರೋಧಕ ಶಕ್ತಿ ಬರಲು ಕಷಾಯ ಪಾವಡರ ಹಾಗೂ ಮಾತ್ರೆಗಳನ್ನು ಮನೆ ಮನೆಗೆ ಹಂಚಿ ಜನರಲ್ಲಿ ದೈರ್ಯ ತುಂಬಿ ಜಾಗೃತಿ ಮೂಡಿಸಿದ “ಕೊರೋನಾ ವಾರಿಯರ” ಸತೀಶ ಅಣ್ಣಾ ಬಂಡಿವಡ್ಡರ, ಅಭಿವೃದ್ಧಿಯ ಕನಸನ್ನು ಹೊತ್ತ ಜನ ನಾಯಕನಿಗೆ ಮುಂದಿನ ದಿನಗಳಲ್ಲಿ ದೇವರ ಹಾಗೂ ಜನರ ಆಶೀರ್ವಾದ ಸದಾ ಇವರ ಮೇಲೆ ಇರು ಎಂದು ಆಶಿಸುತ್ತೇನೆ.
ಉಮೇಶ, ಜಿ. ಬಾಡಗಿ,
ಸಮಾಜ ಚಿಂತಕರು, ಮುಧೋಳ. 

ಮನವಿ

ತಮಗೆಲ್ಲರಿಗೂ ತಿಳಿದಿರುವಂತೆ ನಾನು ಸಕ್ಕರೆಯ ರನ್ನ ನಾಡು ಮುಧೋಳದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು, ಬಡತನದ ಕಷ್ಟ-ದು:ಖಗಳನ್ನೆಲ್ಲಾ ಅನುಭವಿಸಿ ಶ್ರಮ ಸಂಸ್ಕೃತಿಯನ್ನು ಪ್ರೀತಿಸಿ ಬದುಕನ್ನು ಕಟ್ಟಿಕೊಂಡವನು. ನಾನು ಮೂರು ದಶಕಗಳ ಕಾಲ ಉದ್ಯೋಗ, ವ್ಯಾಪಾರದೊಂದಿಗೆ ಸಾರ್ವಜನಿಕ ಜೀವನದಲ್ಲಿದ್ದು ಯಾವುದೇ ಪಕ್ಷ ಬಡವ, ಬಲ್ಲದ, ಜಾತಿ-ಧರ್ಮದ ರಾಜಕಾರಣ ಮಾಡದೆ, ಯಾರೊಬ್ಬರ ಮನಸ್ಸು ನೋಯಿಸುವಂತಹ ಸಂದರ್ಭಗಳನ್ನು ತಂದುಕೊಳ್ಳದೆ, ನನ್ನ ವ್ಯಕ್ತಿತ್ವಕ್ಕೆ ಯಾವುದೇ ಕಳಂಕ ತಂದುಕೊಳ್ಳುವಂತಹ ಕಾರ್ಯ ಮಾಡಿಲ್ಲ. ಕಳೆದ 15 ವರ್ಷಗಳ ಹಿಂದೆಯೇ ನನ್ನ ಉದ್ಯೋಗ, ವ್ಯಾಪಾರದ ಒತ್ತಡದ ಜೀವನದಲ್ಲಿ ಹೃದಯಾಘಾತವಾಗಿ ತಮ್ಮೆಲ್ಲರ ಹಾಗೂ ದೇವರ ದಯದಿಂದ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿ, ತೆರೆದ ಹೃದಯ ಚಿಕಿತ್ಸೆಗೊಳಗಾದ ಈ ಜೀವದ ಬೋನಸ್ ಆಯುಷ್ಯವನ್ನು ಸಮಾಜ ಸೇವೆಗಾಗಿ ಮೀಸಲಿಡಲು ಅಂದೆ ನಿರ್ಧರಿಸಿ “ಜನಸೇವೆಯೇ ಜನಾರ್ದನ ಸೇವೆ" ಎಂಬ ಧೈಯ ವ್ಯಾಕ್ಯವನ್ನೇ ನನ್ನ ಜೀವನದ ಗುರಿಯನ್ನಾಗಿಸಿಕೊಂಡು ಕಾಯಾ, ವಾಚಾ, ಮನಸಾ ನಡೆದುಕೊಂಡು ಬಂದಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಪರಭಾವಗೊಂಡರೂ ತಾವು ಆಶೀರ್ವಾದ ಮಾಡಿ ನೀಡಿದ ಮತಗಳ ಪ್ರಮಾಣದಿಂದ ತೃಪ್ತಿ ತಂದಿದೆ. ಆದರೆ ಜನರ ಕಷ್ಟಗಳಿಗೆ ಧ್ವನಿಯಾಗಲು ಸಿಕ್ಕಂತ ಅದ್ಭುತ ಅವಕಾಶ ತಪ್ಪಿದ ನೋವು ನನಗಿದೆ. ಆದರೆ ಅಷ್ಟೊಂದು ದೊಡ್ಡ ಪ್ರಮಾಣದ ಮತ ನೀಡಿದ ತಮಗೆ ನನ್ನ ಪಕ್ಷದ ನಾಯಕರ, ಕಾರ್ಯಕರ್ತರ ಹಾಗೂ ಅಭಿಮಾನಿಗಳ ಋಣ ತೀರಿಸುವುದು ನನ್ನ ಕರ್ತವ್ಯ ಆದ್ದರಿಂದ ಸೋತರು ಎದೆಗುಂದದೆ ತಮ್ಮೆಲ್ಲರ ಆಶೀರ್ವಾದದಿಂದ ನಾನು ಮತ್ತೆ ಹಗಲಿರುಳು ಲೆಕ್ಕಿಸದೆ ಜನ ಸೇವೆ ಮಾಡುತ್ತ ನಡೆದಿದ್ದೇನೆ. ನಿರ್ಗತಿಕರಿಗೆ, ಅಸಹಾಯಕರಿಗೆ, ಬಡವರ, ಹಸಿದ ಹೊಟ್ಟೆಗೆ ಅನ್ನ, ದುಡಿಯುವ ಕೈಗಳಿಗೆ ಕೆಲಸ, ಓದುವ ಕೈಗಳಿಗೆ ಸೌಲಭ್ಯ, ಯುವಕರಿಗೆ ಮುನ್ನಡೆಯಲು ತಂತ್ರಜ್ಞಾನ ನೀಡಿ ಕಷ್ಟದಲ್ಲಿರುವ ಜನರ ಧ್ವನಿಯಾಗುವ ಗುರಿಯೊಂದಿಗೆ ಪ್ರಾಮಾಣಿಕ ಸೇವೆ ಮಾಡುತ್ತಿದ್ದೇನೆ. ಕಳೆದೆರಡು ಸಲ ನೆರೆ ಹಾವಳಿಯಲ್ಲಿ ಮನೆ ಮಠ ಮುಳುಗಿ ಅತಂತ್ರ ಸ್ಥಿತಿಯಲ್ಲಿದ್ದಸಂತ್ರಸ್ತರೊಂದಿಗೆ ಹಗಲಿರುಳು ಅವರ ಕಷ್ಟದಲ್ಲಿದ್ದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಂತ್ರಸ್ತರಿಗೆ ಊಟ, ನೀರು, ಹಾಸಿಗೆ, ಬಟ್ಟೆಬರಿ, ಪಶು ಎರಡು ಬಾರಿ ಮಹಾಮಾರಿ ಕೊರೋನಾ ಸಂಕಷ್ಟದ ಸಮಯದಲ್ಲಿ ಸಾವು ನೋವಿನಿಂದ ನಮ್ಮ ಜನ ಕಣ್ಣಿರು ಹಾಕಿದಾಗ ನನ್ನ ಜೊತೆಗೆ ಕ್ಷೇತ್ರದ ನನ್ನ ನಾಯಕರು,ಕಾರ್ಯಕರ್ತರು ಜನರಿಗೆ ಆತ್ಮಸ್ಥೆರ್ಯ ತುಂಬಿ ಅವರ ಕಣ್ಣಿರು ಒರೆಸಿ ನಿಮ್ಮೊಂದಿಗೆ ನಾವಿದ್ದೇವೆ ಹೆದರಬೇಡಿ ಅಂತ ದೈರ್ಯ ನೀಡಿದರು. ನಮ್ಮ ಜನರ ಬಳಿ ದುಡ್ಡಿತ್ತು, ಬಂಧು ಬಳಗವಿತ್ತು, ಎಲ್ಲವು ಇತ್ತು ಅದರ ಕೊರೋನಾ ಸಂದರ್ಭದಲ್ಲಿ ಜನರಿಗೆ ಆಸ್ಪತ್ರೆಗಳಿಲ್ಲ, ಡಾಕ್ಟರ್ ಇಲ್ಲ, ಬೆಡ್‌ಗಳಿಲ್ಲ, ಔಷದಗಳಿಲ್ಲ, ಅಕ್ಸಿಜನ್ ಇಲ್ಲ, ಆಂಬ್ಯುಲನ್ಸ್‌ ಸಿಗಲಿಲ್ಲ ಕೂರೋನಾ ರೋಗಿಗಳಿಗೆ ಹಾಗೂ ಅವರ ಹಿಂಬಾಲಕರಿಗೆ ಲಾಕ್‌ಡೌನ್‌ನಿಂದ ಊಟ, ನೀರು ಸಿಗುತ್ತಿರಲಿಲ್ಲ ಈ ಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ನನ್ನೊಂದಿಗೆ ನನ್ನ ನಾಯಕರು ಹಾಗೂ ಕಾರ್ಯಕರ್ತರು ಜನರ ಸೇವೆಗೆ ನಿಂತರು. ಕಷ್ಟದಲ್ಲಿದ್ದ ಜನರಿಗೆ ಅಂಬ್ಯುಲನ್ಸ್, ಬ್ರೆಡ್, ಆಕ್ಸಿಜನ್, ಔಷದ, ಊಟ, ನೀರು, ಸ್ಯಾನಿಟೈಸರ್, ಮಾಸ್, ಪಿಪಿ ಕಿಟ್ ಮುಂತಾದವುಗಳ ಸಹಾಯ ಮಾಡಿದರು ಸಹ ನಮ್ಮ ಕಣ್ಣ ಮುಂದೆನೆ ನೂರಾರು ಜನರನ್ನ ಕಳೆದುಕೊಂಡವು. ನನ್ನ ಅತ್ಮೀಯ ಗೆಳೆಯ ಮಹಾಂತೇಶ ಉದಪುಡಿ, ನಮ್ಮ ಹಿರಿಯರಾದ ಗೋವಿಂದಪ್ಪ ಸುರಮಂಜಿ, ಆರ್. ಎಲ್, ಕಣಬೂರ ವಕೀಲರು, ಗುರುರಾಜ ಕಟ್ಟಿ, ನಗರಸಭೆ ಅಧ್ಯಕ್ಷ ಸಂಜು ಮಾನೆ ಹಾಗೂ ಅವರ ತಾಯಿ, ಹಿರಿಯರಾದ ಹಿರೇಸೋಮಣ್ಣವರ ಸರ್, ರಾಮತೀರ್ಥ ನ‌, ಕೆ ಡಿ ಸಾರವಾಡ, ನಿಂಗಾಪೂರದ ಚಾಂದಸಾಬ ನರಕಾವಸ್ತ, ಬೆಳಗಲಿಯ ಮಹಾದೇವ ಮಲಬೂರ, ಗೋವಿಂದ ಒಂಟಗೋಡಿ ದಂಪತಿಗಳು, ಮಿರ್ಜಿಯ ಸಂಜು ಕದಮ, ಶಂಕರಪ್ಪ ಮಡಿವಾಳರ, ಒಂಟಗೋಡಿಯ ಗೋವಿಂದಗೌಡ, ಬಿದರಿಯ ಹೊಳಬಸಪ್ಪ ಬಾವಲು, ಯಡಹಳ್ಳಿಯ ಸದಪ್ಪ ಬೆಳಗಲಿ ಮುಂತಾದ ನೂರಾರು ಜನ ನಮ್ಮ ಕಣ್ಣ ಮುಂದೆ ಜೀವ ಜಟ್ಟರು. ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಸಾಕಷ್ಟು ಜನ ಬೆಡ್ ಇಲ್ಲದೆ ಆಸ್ಪತ್ರೆ ಬಾಗಿಲಲ್ಲಿ, ಆಸ್ಪತ್ರೆಯ ಹೊರಾಂಗಣದಲ್ಲಿ, ವಾಹನಗಳಲ್ಲಿ ಹಾಗೂ ಅಂಬ್ಯುಲನ್ಸ್‌ಗಳಲ್ಲಿ ಪ್ರಾಣ ಬಿಟ್ಟರು. ಕೊನೆಯ ಕ್ಷಣದಲ್ಲಿ ಅವರ ಮುಖ ನೋಡುವ ಅವಕಾಶವಿಲ್ಲದ್ದಕ್ಕೆ ಜನ ಕಣ್ಣಿರು ಹಾಕುತ್ತಿರುವಾಗ ಮತನೀಡಿ ಅಧಿಕಾರ ಕೊಟ್ಟ ಜನರ ಪ್ರಾಣ ಹೋದಾಗ ದುಃಖದ ಸಮಯದಲ್ಲಿ ಅಧಿಕಾರದಲ್ಲಿದ್ದ ಯಾವ ಜನ ಪ್ರತಿನಿಧಿಗಳು ಅವರ ಕಣ್ಣಿರು ಒರೆಸಲಿಲ್ಲ, ಆ ಕುಟುಂಬಗಳಿಗೆ ಮಾನವಿಯತೆಯಿಂದ ಸಾಂತ್ವಾನ ಕೂಡ ಹೇಳಲಿಲ್ಲ. ಆದರೆ ನನ್ನೊಂದಿಗೆ ನಮ್ಮ ಕಾರ್ಯಕರ್ತರು ಯಾವ ಸಾಮಾನ್ಯ ಮನುಷ್ಯನ ಮನೆ ಬಿಡದೆ ಅವರ ಕಷ್ಟ ಸುಖ ದುಃಖದಲ್ಲಿ ಬಾಗಿಯಾಗಿ ಆತ್ಮಸ್ಥೆರ್ಯ ನೀಡಿದರು. ಈ ಕ್ಷೇತ್ರದ ಜನ ಒಮ್ಮೆ ನಂಬಿದರೆ ಪ್ರಾಣ ಹೋದರು ಕೈ ಬಿಡುವುದಿಲ್ಲ ಅಂತ ನನಗೆ ಗೊತ್ತು ಏಕೆಂದರೆ ನಾನು ನಿಮ್ಮೊಂದಿಗೆ ಮುಧೋಳದಲ್ಲಿಯೇ ಹುಟ್ಟಿ ಬೆಳೆದು ಬಾಳಿದವನು. ನಿಮ್ಮೂರಿನ ನಿಮ್ಮ ಮನೆ ಮಗನ ಮುಂದಿನ ಭವಿಷ್ಯ ನಿಮ್ಮ ಕೈಯಲ್ಲಿದೆ. ನಿಮ್ಮ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲಿರಲಿ ಅಂತ ತಮ್ಮಲ್ಲಿ ಪ್ರಾರ್ಥಿಸುತ್ತಾ ನನ್ನ ಉಸಿರಿರೊವರೆಗೂ ತಮ್ಮ ಸೇವೆ ಮಾಡುತ್ತೇನೆ. ತಮ್ಮೆಲ್ಲರ ಪ್ರೀತಿ ವಿಶ್ವಾಸ ನನ್ನ ಮೇಲೆ ಹೀಗೆ ಇರಬೇಕು ಅಂತ ಇನ್ನೊಮ್ಮೆ ತಮ್ಮಲ್ಲೆರಲ್ಲಿ ವಿನಯ ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.

ವಂದನೆಗಳೊಂದಿಗೆ
ಇಂತಿ ನಿಮ್ಮ
ಸತೀಶ್ ಬಂಡಿವಡ್ಡರ
ತಮ್ಮ ಸೇವೆಗಾಗಿ ಸಂಪರ್ಕಿಸಿ
ಮೋ: 98801678419743690000, 9538847901
ನವೀನ ಹಳೆಯದು