6.25% ಕ್ಕೆ ರೆಪೋ ದರ ಹೆಚ್ಚಿಸಿದ ಆರ್‌ಬಿಐ. ರೆಪೋ ದರದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ ಬನ್ನಿ.

Published from Blogger Prime Android App

ನವದೆಹಲಿ, ಡಿ.07 : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ರೆಪೋ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 6.25 ಕ್ಕೆ ಹೆಚ್ಚಿಸಿದೆ. ಹಣದುಬ್ಬರ ನಿಧಾನಗತಿಯನ್ನು ಉಲ್ಲೇಖಿಸಿ, ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಈ ದರ ಹೆಚ್ಚಳವನ್ನು ಘೋಷಿಸಲಾಗಿದೆ.

ಆರ್‌ಬಿಐ ಈ ಹಿಂದೆಯೂ ನಾಲ್ಕು ಬಾರಿ ಆರ್‌ಬಿಐ ದಿಡೀರ್ ಆಗಿ ರೆಪೋ ದರ ಏರಿಕೆ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರ ನೇತೃತ್ವದಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧಾರವನ್ನು ಪ್ರಕಟಿಸಿದೆ.

ರೆಪೋ ದರ ಎಂದರೇನು? 

ರಿವರ್ಸ್ ರೆಪೋ ದರಕ್ಕೆ ಏನು ವ್ಯತ್ಯಾಸ? 

ರೆಪೋ ದರ ಇಳಿಕೆಯಾದರೆ ಏನು ಲಾಭ? 

 ಕೊರೊನಾವೈರಸ್‌ನಿಂದಾಗಿ ದೇಶವೇ ಲಾಕ್‌ ಡೌನ್ ಆಗಿರುವ ಸಂದರ್ಭದಲ್ಲಿ ದೇಶದ ಆರ್ಥಿಕತೆಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು, ಜನರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡಲು ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದೆ. 75 ಬೇಸಿಸ್ ಪಾಯಿಂಟ್ಸ್‌ಗಳನ್ನು ಇಳಿಕೆ ಮಾಡಿರುವ ಆರ್‌ಬಿಐ ರೆಪೋ ಬಡ್ಡಿ ದರಗಳನ್ನು 5.1 ರಿಂದ 4.4ಕ್ಕೆ ಇಳಿಕೆ ಮಾಡಿದೆ. ಜೊತೆಗೆ ರಿವರ್ಸ್ ರೆಪೋ ದರವನ್ನು 90 ಬೇಸಿಸ್ ಪಾಯಿಂಟ್‌ ಇಳಿಸಿತ್ತು.

ರೆಪೊ ಮತ್ತು ರಿವರ್ಸ್ ರೆಪೊ ಈ ಎರಡೂ ಪದಗಳನ್ನು ನೀವು ಆಗಾಗ ಕೇಳುತ್ತಲೇ ಇರುತ್ತೀರಿ. ಆರ್‌ಬಿಐ ರೆಪೊ ಅಥವಾ ರಿವರ್ಸ್ ಮೇಲಿನ ಬಡ್ಡಿದರ ಕಡಿತ ಮಾಡಿದೆ ಅಥವಾ ಮಾಡಿಲ್ಲವೆಂಬ ವರದಿಗಳು ಆಗಾಗ ಪ್ರಕಟವಾಗುತ್ತಿರುತ್ತವೆ. ಇಂದೂ ಕೂಡ ಆರ್‌ಬಿಐ ರೆಪೋ ದರ ಕಡಿಗೊಳಿಸಿರುವುದು ಸುದ್ದಿಯಾಗಿದೆ. 

ಹಾಗಿದ್ರೆ ರೆಪೋ ದರ ಎಂದರೇನು? ರಿವರ್ಸ್ ರೆಪೋ ದರಕ್ಕೆ ಏನು ವ್ಯತ್ಯಾಸ ?

ರೆಪೋ ದರ ಎಂದರೇನು? ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. 

ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.

ರೆಪೋ ದರವನ್ನು ಹೇಗೆ ವಿಧಿಸಲಾಗುತ್ತದೆ? 

ತಾತ್ಕಾಲಿಕ ಅವಧಿಯ ಅಗತ್ಯ ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಬ್ಯಾಂಕುಗಳು ಫಂಡ್ ಪಡೆಯುತ್ತವೆ. ಬ್ಯಾಂಕುಗಳು ಪಡೆದ ಸಾಲದ ಮೇಲೆ ಆರ್‌ಬಿಐ ಕೊಂಚ ಬಡ್ಡಿದರ ವಿಧಿಸುತ್ತದೆ. ಈ ಬಡ್ಡಿದರವನ್ನೇ ರೆಪೊ ದರವಾಗಿದೆ. ಬ್ಯಾಂಕುಗಳಿಗೆ ಸಾಲ ಪಡೆಯುವುದು ಹೆಚ್ಚು ಕಠಿಣಗೊಳಿಸಲು ಆರ್‌ಬಿಐ ಇಚ್ಚಿಸಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವೂ ರೆಪೊ ದರಗಳನ್ನು ಹೆಚ್ಚಿಸುತ್ತದೆ. ರೆಪೊ ದರ ತಗ್ಗಿಸಿದರೆ ಬ್ಯಾಂಕುಗಳು ಆರ್‌ಬಿಐನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದಾಗಿದೆ. ದೇಶದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ಹೃದಯದ ಬಡಿತವು ರೆಪೊ ದರದ ಜೊತೆ ಮಿಡಿಯುತ್ತದೆ.

ರೆಪೋ ದರದ ಇಳಿಕೆಯಿಂದ ಲಾಭವೇನು? 

ಹಣದ ಬಿಕ್ಕಟ್ಟು ಅಂದರೆ ಮಾರುಕಟ್ಟೆಯಲ್ಲಿ ಹಣದ ಕೊರತೆ ಎದುರಾದಾಗ ರಿಸರ್ವ್‌ ಬ್ಯಾಂಕ್‌, ರೆಪೋ ದರವನ್ನು ಇಳಿಸುವ ಕ್ರಮ ಕೈಗೊಳ್ಳುತ್ತದೆ. ಆರ್‌ಬಿಐನಿಂದ ಕಡಿಮೆ ಬಡ್ಡಿಗೆ ಹಣ ಸಿಗುವುದರಿಂದ ಅದರ ಲಾಭವನ್ನು ಬ್ಯಾಂಕುಗಳು ತನ್ನ ಗ್ರಾಹಕರಿಗೂ ವರ್ಗಾಯಿಸಬಹುದು. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಗಳು ಲಭ್ಯವಾಗುತ್ತದೆ. ಮಾರುಕಟ್ಟೆಗೆ ಹೆಚ್ಚು ಹಣ ಹರಿಯುತ್ತದೆ. ಇದು ಆರ್ಥಿಕತೆಗೆ ಬಲ ನೀಡುವ ನಿರೀಕ್ಷೆ ಇದೆ. ಜೊತೆಗೆ ಬ್ಯಾಂಕ್‌ಗಳಲ್ಲಿನ ಸಾಲದ ಬಡ್ಡಿ ದರವು ಇಳಿಕೆಯಾಗುತ್ತದೆ.

ರಿವರ್ಸ್ ರೆಪೊ ದರ ಎಂದರೇನು? 

ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎನ್ನಲಾಗುತ್ತದೆ. ಹೀಗಾಗಿ ಇದು ರೆಪೊ ದರಕ್ಕಿಂತ ಸಂಪೂರ್ಣ ವಿಭಿನ್ನ. ಬ್ಯಾಂಕಿಂಗ್ ವಲಯದಲ್ಲಿ ಸಮತೋಲನ ಸಾಧಿಸಲು ರಿವರ್ಸ್ ರೆಪೋ ದರ ಪ್ರಮುಖ ಪಾತ್ರ ವಹಿಸುತ್ತದೆ.

ನವೀನ ಹಳೆಯದು