ನಮ್ಮ ಮುಧೋಳದ ಅಂದಿನ ಕರಾಳ ದಿನಕ್ಕೆ ಇಂದಿಗೆ 49 ವರ್ಷಮುಧೋಳ : ಡಿಸೆಂಬರ್ 13 ಮುಧೋಳ ಇತಿಹಾಸದಲ್ಲಿಯ ಕರಾಳ ದಿನ. ಅವಿಭಜೀತ ವಿಜಯಪೂರ ಜಿಲ್ಲೆಯ ಮುಧೋಳ ಶಾಂತಿ ಸೌಹಾರ್ದತೆಯ ತವರು, ಘಟಪ್ರಭೇಯ ತೋಳ್ತತ್ತೇಕ್ಕೆಯಲ್ಲಿ ಬೆಳೆದ ಕವಿ ಚಕ್ರವರ್ತಿ ರನ್ನ ನ ಹೆಗ್ಗಳಿಕೆಯ ನಗರ ಇಂತಹ ಐತಿಹಾಸಿಕ, ಸಾಂಸ್ಕೃತಿಕ ನಗರದ ಇತಿಹಾಸದಲ್ಲಿ ಡಿಸೆಂಬರ್ 13/1973 ಬುಧವಾರ ಇಲ್ಲಿಯ ಜನರ ಪಾಲಿಗೆ ಅತ್ಯಂತ ಕರಾಳ ದಿನ ಮಹಾರಾಷ್ಟ್ರದಲ್ಲಿ ವಿಶೇಷವಾಗಿ ಮುಂಬಯಿ ಮಹಾನಗರದದಲ್ಲಿಯ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ  ವಿರುದ್ಧ ನಡೆದ ಪ್ರತಿಭಟನಾ ರೈಲಿ ಸಮಾಜಘಾತುಕ ಶಕ್ತಿಗಳ ಸೇರ್ಪಡೆಯಿಂದ ಹೋರಾಟ ಉಗ್ರರೂಪ ತಾಳಿ ಪೋಲಿಸರ ಗುಂಡಿಗೆ ಇಬ್ಬರು ಬಲಿಯಾದರೆ ಅನೇಕರು ಗಾಯಗೂಂಡರು ಅಷ್ಟೇ ಅಲ್ಲ ಸಮಾಜಘಾತುಕರ ಹಲ್ಲೆಯಿಂದ ಪೋಲಿಸ್ ಅಧಿಕಾರಿಗಳು ಸಹಿತ ಗಾಯಗೂಂಡರು. ಈ ಕಹಿಘಟನೆಗೆ ಇಂದಿಗೆ 49 ವರ್ಷ ಪೂರ್ಣವಾಗುತ್ತ್ತಿದ್ದು. ಆವಾಗ ನಾನು ಕೇವಲ 12 ವರ್ಷದ ಬಾಲಕ ಆದರೂ ಸಹಿತ ನನ್ನ ನೆನಪು ಹಾಗೂ ಹಿರಿಯರು ನೀಡಿದ ಮಾಹಿತಿ ಮೇರೆಗೆ ಅಂದಿನ ಆ ಕಹಿ ಘಟನೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಒಂದು ಪುಟ್ಟ ಪ್ರಯತ್ನ. ನಾನು ಆವಾಗ ಊರಿನ ಎಕಮೇವ ಮಾಧ್ಯಮಿಕ ಹಾಗೂ ಕನಿಷ್ಠ ಮಹಾವಿದ್ಯಾಲಯವಾದ ಆರ್ ಎಂ ಜಿ ಕನಿಷ್ಠ ಮಹಾವಿದ್ಯಾಲಯದಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದೆ ಎಂದಿನಂತೆ ಶಾಲೆಯ ಪ್ರಾರ್ಥನಾ ಗಂಟೆ ಬಾರಿಸಿದಾಗ ನಾವೆಲ್ಲರೂ ಪ್ರಾರ್ಥನೆಗಾಗಿ ಮೈದಾನದಲ್ಲಿ ಸೇರಿ ಪ್ರಾರ್ಥನೆ ಮುಗಿದ ನಂತರ ಮತ್ತೆ ವರ್ಗದ ಕೋಣೆ ಸೇರುತ್ತಲೆ ಮತ್ತೆ ಗಂಟೆ ಬಾರಿಸಿದಾಗ ನಮಗೆ ಸಖೇದ ಆಶ್ಚರ್ಯ ಮತ್ತೆ ಹುಯ್ಯ ಎಂದು ಮೈದಾನದೆಡೆ ಧಾವಿಸಿದೆವು ಆವಾಗ ನಗರದ ಕನ್ನಡ ಸಾಂಸ್ಕೃತಿಕ ಸಂಘದ ಯುವ ಮುಖಂಡರಾದ ಆರ್ ಡಿ ದೇಶಪಾಂಡೆ ಹಾಗೂ ಮುಂತಾದ ನಾಯಕರು ಮುಂಬಯಿ ಮಹಾನಗರದದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನಾ ರೈಲಿಯಲ್ಲಿ ಭಾಗವಹಸುವಂತೆ ಕೋರಿದಾಗ ಎಲ್ಲ ವಿಧ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು, ಮೆರವಣಿಗೆ ಶಿವಾಜಿ ಚೌಕ (ಅಂದಿನ ಗೋವಿಂದಪೂರ ಗೇಟ್)ಗಾಂಧಿ ಚೌಕ (ಅಂದಿನ ಜಡಗಾ ಬಾಲಾ ವೃತ್ತ)ದ ಮುಖಾಂತರ ಮಾರ್ಕೆಟ್ ಪರಿಸರಕ್ಕೆ ಬಂದಾಗ ಮೆರವಣಿಗೆಯಲ್ಲಿ ಹಲವಾರು ಸಮಾಜ ವಿಘಾತಕ ಜನರು ಸೇರಿಕೊಂಡು ಬಾಂಬೆ ಟೆಲರ್ಸ ಅಂಗಡಿಯ ಮೇಲೆ ಕಲ್ಲುತುರಾಟ ನಡೆಸಿ ನಂತರ ನಗರದ ಉತ್ತರಗೇಟ (ಇಂದಿನ ಜಡಗಾ ಬಾಲಾ ವೃತ್ತ )ದ ಕಚ್ಚಿ ಜನರಲ್ ಸ್ಟೂರ್ಸ ಲೂಟಿ  ಮಾಡಿದ ನಂತರ ಜನಜಂಗುಳಿ ತಲಾಠಿ ಪೆಟ್ರೋಲ್ ಪಂಪ್ (ಇಂದಿನ ಸಂಗೋಳ್ಳಿ ರಾಯಣ್ಣ ವೃತ್ತ)ತಲುಪಿ ಸಮೀಪದ ಮಿರಜ ಮೂಲದ ವ್ಯಕ್ತಿಯ ಗಜಾನನ ಸಿಮೆಂಟ ಪಾಯಿಪ ಕಾರ್ಖಾನೆಗೆ ಬೆಂಕಿ ಹಚ್ಚಿದರು. ರೂಚ್ಚಿಗೆದ್ದ ಜನಜಂಗುಳಿಯನ್ನು ಚದುರಿಸಲು ಪೂಲಿಸರು ನೇರವಾಗಿ ಗೋಲಿಬಾರ್ ಮಾಡಿದರು, ಪೋಲಿಸರ ಗುಂಡೆಟಿಗೆ ಈರಣ್ಣಾ ನಾವಲಗಿ ಹಾಗೂ ಮುತ್ತಣ್ಣಾ ಕೂಣ್ಣೂರ ಎಂಬ ಯುವಕರು ಬಲಿಯಾದರೆ ಮಲ್ಲಯ್ಯ ಪರಿಟ ಎಂಬ ಯುವಕ ಗಾಯಗೂಂಡರು,ಇದರಿಂದ ರೂಚ್ಚಿಗೆದ್ದ ಜನಜಂಗುಳಿ ವರೀಷ್ಠ ಪೋಲಿಸ್ ಅಧಿಕಾರಿಗಳಾದ ಮನ್ನೂಳ್ಳಿ ಹಾಗೂ ವೈ ಎಸ್ ಕರವಡೆ ಅವರ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ  ಗಾಯಗೂಳಿಸಿದರು ಅಧಿಕಾರಿಗಳು ತಮ್ಮ ಜೀವದ ರಕ್ಷಣೆಗಾಗಿ ಬದಿಯ ಒಂದು ಪುಟ್ಟ ಮಂದಿರದಲ್ಲಿ ಆಶ್ರಯ ಪಡೆಯಬೇಕಾಯಿತು. ಶಾಂತಿಯುತವಾಗಿ ನಡೆದ ಹೋರಾಟ ಉಗ್ರರೂಪ ತಾಳಿತು, ನಗರಾದ್ಯಂತ ಆತಂಕ ತಲೆದೂರಿ ಜನಭಯಭಿತರಾದರು ಎಂದು ಕಂಡರಯದ ಗುಂಡಿನ ಶಬ್ದದ ಜೋತೆಗೆ ಆಂಬ್ಯುಲೆನ್ಸ್ ಗಳ ಸೈರನ್ ಶಬ್ದ ಕೇಳಿ ಜನ ಮತ್ತೆ ಎನೇನು ಕಾದಿದೆಯೋ ಎಂದು ಭಾವಿಸಿದರು ಸದಾ ಲಗುಬಗೆಯಿಂದ ಇದ್ದ ಮುಧೋಳ ನಗರದಲ್ಲಿ ಸ್ಮಶಾನ ಮೌನ ಅವರಿಸಿತುತಾಲೂಕಿನಲ್ಲಿ ಆವಾಗ ಬಹಳಷ್ಟು ಪದವಿಧರ  ಯುವಕರು ನಿರುದ್ಯೋಗಿ ಗಳಾಗಿದ್ದರು ಅವರಿಗೆ . ಆಗ ತಾನೆ ಪ್ರಾರಂಭವಾದ ತಾಲೂಕಿನ ಪ್ರಪ್ರಥಮ ಸಕ್ಕರೆ ಕಾರ್ಖಾನೆಯಾದ ಸಮೀರವಾಡಿಯ ಸೋಮಯ್ಯಾ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ನೀಡಬೇಕು ಎಂಬ ಬೇಡಿಕೆ ಕನ್ನಡ ಪರ ಹೋರಾಟಗಾರರದಾಗಿತ್ತು ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಇದಕ್ಕೆ ಒಪ್ಪಲಿಲ್ಲ ಮತ್ತು ಬೆಲ್ಲದ ಗಾಣ ಮಾಡಲು ಕಾರ್ಖಾನೆ ಮಾಲೀಕರು  ವಿರೋಧ ವ್ಯಕ್ತಪಡಿಸುತ್ತಿದ್ದರು ಆದ್ದರಿಂದ ನಾಗರಿಕರು ಹಾಗೂ ಹಲವು ರೃತರಲ್ಲಿ ಅಸಮಾಧಾನ ಇದ್ದುದರಿಂದ ಹೋರಾಟ ಉಗ್ರರೂಪ ತಾಳಿದ್ದರಿಂದಾ  ಜನ ಸಮೀರವಾಡಿಗೆ ಧಾವಿಸಿದರು ಅದಕ್ಕೆ ಮೂದಲೆ  ಬೇರೆ ಊರುಗಳ ಜನ ಸೇರಿದ್ದರಿಂದಾ ಹೋರಾಟ ತೀವ್ರಗೂಂಡು  ಅಲ್ಲಿಯೂ ಸಾಕಷ್ಟು ಆಸ್ತಿಪಾಸ್ತಿ ನಷ್ಟಗೂಳಿಸಲಾಯಿತೆಂದು ಸುದ್ದಿಯಾಯಿತು, ಆವಾಗ ಎಂದಿನಂತೆ ಮಾಧ್ಯಮಗಳುಅಷ್ಟೂಂದು ಜೋರಾಗಿರಲಿಲ್ಲ, ಮುಧೋಳದ ಈ ದುರ್ಘಟನೆಯ ಸುದ್ದಿಯನ್ನು ಆಕಾಶವಾಣಿ ದೆಹಲಿ ಹಾಗೂ ಬಿಬಿಸಿ ಸುದ್ದಿ ಸಂಸ್ಥೆಯವರು ಸುದ್ದಿಯನ್ನು ಬಿತ್ತರಿಸಿದವು.ಇಬ್ಬರು ಯುವಕರ ಬಲಿ ತೆಗೆದು ಕೊಂಡು ಅನೇಕರನ್ನು ಗಾಯಗೂಳಿಸಿತು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಗೆ ಕಾರಣವಾದ ಈ ಹೋರಾಟದ ಪ್ರಕರಣದಲ್ಲಿ ಸುಮಾರು 63 ಜನರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಈ ಪ್ರಕರಣ ಅನೇಕ ವರ್ಷಗಳ ವರೆಗೆ ನ್ಯಾಯಲಯದಲ್ಲಿ ಇತ್ತು, ಬಡ ವಿದ್ಯಾರ್ಥಿಗಳಿಗೆ ನ್ಯಾಯಲಯಕ್ಕೆ ಅಲೆದಾಡಲು  ಬಹಳಷ್ಟು ಆರ್ಥಿಕ ತೊಂದರೆಯಾಗುತ್ತಿತ್ತು ಆವಾಗ ಅಂದಿನ ಧುರೀಣರಾದ ಲಕ್ಷ್ಮಣರಾವ ಉದಪುಡಿ, ನ್ಯಾಯವಾದಿ ಜಿ ಎಲ್ ಪಾಟೀಲ, ಡಾ. ಆಯ್ ಬಿ ಗಂಗಣ್ಣವರ  ಮುಂತಾದವರು ಸ್ವ ಖರ್ಚಿನಿಂದ ನ್ಯಾಯಾಲಯದ ತಾರೀಖುಗಳಿಗೆ ಕರೆದು ಕೂಂಡು ಹೋಗುತ್ತಿದ್ದರು ಮುಂದೆ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಅವರನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಲಾಯಿತು ಎಂದು ತಿಳಿದು ಬಂತಾದರೂ ಹಿರಿಯ ಧುರೀಣರ ಮೇಲಿನ ಪ್ರಕರಣ ವಿಚಾರಣೆ ಮುಂದುವರೆಯಿತು. ಹಲವು ವರ್ಷಗಳ ವರೆಗೆ ನ್ಯಾಯಲಯದಲ್ಲಿ ಈ ಪ್ರಕರಣ ನಡೆದು ಹೋರಾಟಗಾರರಿಗೆ ಶಿಕ್ಷೆಯಾಯಿತು ಆದರೆ ಅಂದಿನ ಈ ಭಾಗದ ಪ್ರಭಾವಿ ರಾಜಕಾರಣಿಗಳೂ ರಾಜ್ಯಸಭಾ ಸದಸ್ಯರು ಹಾಗೂ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಪ್ತ ಗೆಳೆಯರಾದ ಆರ್ ಎಂ ದೇಸಾಯಿ ಹಾಗೂ ಅಂದಿನ ಕಾಂಗ್ರೆಸ್ ಧುರೀಣ ಎಸ್ ಎಸ್ ಸರನಾಯಕ, ಎಸ್ ಟಿ ಪಾಟೀಲ  ಹಾಗೂ ಮುಧೋಳದ ಅಂದಿನ ಶಾಸಕ ಕೆ ಪಿ ನಾಡಗೌಡ ಅವರು ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಮನವೂಲಿಸಿ, ವಿಧಾನ ಸಭೆಯ ಅನುಮೋದನೆ ನಂತರ ರಾಜ್ಯಪಾಲರ ವಿಶೇಷ ಅಧಿಕಾರದಲ್ಲಿ ಹೋರಾಟಗಾರರನ್ನು ಈ ಪ್ರಕರಣದಲ್ಲಿ ಬಿಡುಗಡೆ ಮಾಡಲಾಯಿತು.


ಅಂದಿನ ಈ ಹೋರಾಟದಲ್ಲಿ ಹಿರಿಯರಾದ ಲಕ್ಷ್ಮಣರಾವ ಉದಪುಡಿ ನ್ಯಾಯವಾದಿ ಜಿ ಎಲ್ ಪಾಟೀಲ, ಪತ್ರಕರ್ತ ಬಾಬುರೆಡ್ಡಿ ತುಂಗಳ, ಡಾ ಆಯ್ ಬಿ ಗಂಗಣ್ಣವರ, ಡಾ ಎನ್ ಟಿ ಶಹಾ ,ಎಂ ಪಿ ಶಹಾ, ಕಾಂತಿಲಾಲ ಓರಾ ಹಾಗೂ ಯುವಕರಾದ ಆರ್ ಡಿ ದೇಶಪಾಂಡೆ, ರಾಮರಾವ ಕುಲಕರ್ಣಿ ಶ್ರೀನಿವಾಸ ಕುಲಕರ್ಣಿ, ಸಿದ್ದು ಕಾಳಗಿ, ಪಾಂಡರಂಗ ಧುಳಗೋಂಡ, ಶೇಖರ ಕಂಕನವಾಡಿ, ಅರುಣ್ ತಲಾಠಿ ಮುಂತಾದ ನೂರಾರು ಹೋರಾಟಗಾರರು ಭಾಗವಹಿಸಿದ್ದರು. ಕಳೆದ 49 ವರ್ಷಗಳ ಸುದೀರ್ಘ ಅವಧಿಯಲ್ಲಿ ನಮ್ಮ ಮುಧೋಳ ತಾಲೂಕು ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ  ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೂಂಡಿದ್ದು ಅನೇಕ ಸಕ್ಕರೆ ಹಾಗೂ ಸಿಮೆಂಟ ಉದ್ದಿಮೆಗಳನ್ನು ಹೂಂದಿದ್ದು ಸಹಸ್ರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ನೀಡಿದ್ದು, ರಾಜ್ಯ ಸರಕಾರಕ್ಕೆ ಅತಿ ಹೆಚ್ಚು ಕಂದಾಯ ನೀಡುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬಯಿ ಮಹಾನಗರದದಲ್ಲಿ ಕನ್ನಡಿಗರು ನೆಮ್ಮದಿಯಿಂದ ಇದ್ದಾರೆ ಆದರೆ ಅಂದು ತಾಲೂಕಿನ ನಿರುದ್ಯೋಗ ಹಾಗೂ ಮುಂಬಯಿ ನಿವಾಸಿ ಕನ್ನಡಿಗರಿಗಾಗಿ ಹೋರಾಡಿದ ನಮ್ಮ ಮುಧೋಳದ ಕನ್ನಡಾಭಿಮಾನಿಗಳು ಈಗ ನೆನಪು ಮಾತ್ರ. ಅಂದಿನ ಹೋರಾಟಗಾರರಲ್ಲಿ ಎಷ್ಟೋ ಜನ ನಮ್ಮ ನಡುವೆ ಇಲ್ಲ ಅಂತಹ ಕನ್ನಡದ ಕಲಿಗಳಿಗೆ ನಮ್ಮ ಮುಧೋಳದ ಜನತೆಯ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಈಗಲೂ ಅಂದಿನ ಹಲವು ಹೋರಾಟಗಾರರು ತಮ್ಮ ಜೀವನದ ಬಾಳ ಸಂಜೆಯಲ್ಲಿಯೋ ಗತ ಹೋರಾಟದ ನೆನಪುಗಳನ್ನು ಮೆಲುಕು ಹಾಕುತ್ತಾ ಬದುಕು ಸಾಗಿಸುತ್ತಿರುವ ಕನ್ನಡದ ಕಟ್ಟಾಳುಗಳಿಗೆ  ಹೃದಯಾಂತರಾಳದ ಅಭಿನಂದನೆಗಳು.
ಅಂಕಣ ಎರವಲು
ಶ್ರೀ ಗುರುರಾಜ್ ಪೋತನಿಸ್


ನವೀನ ಹಳೆಯದು