ಮುಧೋಳದಲ್ಲಿ ರಾ..ರಾ..ರಕ್ಕಮ್ಮ ಹಾಡಿಗೆ ನೂರಾರು ಜನರಿಂದ ಭರ್ಜರಿ ಡ್ಯಾನ್ಸ್ಮುಧೋಳ ನಗರದ ಮಾಜಿ ಯೋಧ, ಮುಧೋಳ ತಾಲೂಕಿನ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ್ ಪಸಾರ ಹಾಗೂ ಮಗ ಅರುಣ ಕುಮಾರ ಅವರಿಂದ ಇಂದು (ಜೂನ್ 26) ರಕ್ಕಮ್ಮ ಹಾಡಿಗೆ ಸಾಮೂಹಿಕ ನೃತ್ಯ ನಡೆದಿದೆ.

ಮುಧೋಳ: ಈಗ ಎಲ್ಲ ಕಡೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಹವಾ ಶುರುವಾಗಿದೆ. ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದರೂ, ಟ್ರೈಲರ್ಗೂ ಮುಂಚೆ ಎಲ್ಲರನ್ನೂ ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದ್ದು ರಾ..ರಾ.. ರಕ್ಕಮ್ಮ ಹಾಡು ಹಾಗೂ ನೃತ್ಯ. ಸುದೀಪ್ ಮತ್ತು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಕಿದ ರಕ್ಕಮ್ಮ ಹುಕ್ ಸ್ಟೆಪ್ ಎಲ್ಲರನ್ನೂ ಸೆಳೆದಿದ್ದು, ಇಡೀ ಜಗತ್ತಿನಾದ್ಯಂತ ವೈರಲ್ ಆಗಿದೆ. ನಟ-ನಟಿಯರಿಂದ ಹಿಡಿದು ಜನಸಾಮಾನ್ಯರು, ದಂಪತಿಗಳು ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಇನ್ನು ಇದೇ ಬೆನ್ನಲ್ಲೇ ಮುಧೋಳ ನಗರದ ರನ್ನ ಕ್ರೀಡಾಂಗಣದಲ್ಲಿ ನೂರು ಜನರು ಒಂದೆಡೆ ಸೇರಿ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿದ್ದಾರೆ.
ಮಾಜಿ ಯೋಧ, ಮಗನಿಂದ ಆಯೋಜನೆ ಆಯ್ತು ರಕ್ಕಮ್ಮ ಡ್ಯಾನ್ಸ್:
ಜಿಲ್ಲೆಯ ಮುಧೋಳ ನಗರದ ಮಾಜಿ ಯೋಧ, ಮುಧೋಳ ತಾಲೂಕಿನ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ್ ಪಸಾರ ಹಾಗೂ ಮಗ ಅರುಣ ಕುಮಾರ ಅವರಿಂದ ಇಂದು (ಜೂನ್ 26) ರಕ್ಕಮ್ಮ ಹಾಡಿಗೆ ಸಾಮೂಹಿಕ ನೃತ್ಯ ನಡೆದಿದೆ. ಶ್ರೀಶೈಲ್ ಪಸಾರ ಹಾಗೂ ಮಗ ಅರುಣ ಕುಮಾರ ಕಿಚ್ಚ ಸುದೀಪ್ ಅವರ ಕಟ್ಟಾ ಅಭಿಮಾನಿಗಳಾಗಿದ್ದು, ಸುದೀಪ್ ಮೇಲಿನ ಅಭಿಮಾನದಿಂದ ರಕ್ಕಮ್ಮ ಹಾಡಿಗಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಮುಧೋಳ ನಗರದ ವಿವಿಧ ಶಾಲಾ- ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದ್ದರು. ಆ ಪ್ರಕಾರ ಇಂದು ರನ್ನ ಕ್ರೀಡಾಂಗಣದಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಈ ಬಗ್ಗೆ ಮಾತಾಡಿದ ಮಾಜಿ ಯೋಧ ಶ್ರೀಶೈಲ್ ಪಸಾರ ಹಾಗೂ ಮಗ ಅರುಣ ಕುಮಾರ ತಮ್ಮ ಅಭಿಪ್ರಾಯ ಹಂಚಿಕೊಂಡರು. ಶ್ರೀಶೈಲ್ ಪಸಾರ ಮಾತಾನಾ, ನಾನು ಮಗ ಇಬ್ಬರು ಸುದೀಪ್ ಅಭಿಮಾನಿಗಳು. ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತಹದ್ದೊಂದು ರೀಲ್ಸ್ ಮಾಡೋದಕ್ಕೆ ಅಂತಾನೆ ಊರಿಗೆ ಬಂದಿದ್ದು, ಅನೇಕ ವಿದ್ಯಾರ್ಥಿಗಳು, ಪುಟಾಣಿ ಮಕ್ಕಳು ನೃತ್ಯದಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ ಎಂದರು. ಅರುಣ ಕುಮಾರ ಪ್ರತಿಕ್ರಿಯಿಸಿ, ನಾನು, ನನ್ನ ಸ್ನೇಹಿತರು, ತಂದೆ ಎಲ್ಲರೂ ಸುದೀಪ್ ಅಭಿಮಾನಿಗಳು. ಈ ನೃತ್ಯದ ಮೂಲಕ ಸುದೀಪ್ಗೆ ನಮ್ಮದೊಂದು ಕಿರುಕಾಣಿಕೆ ಎಂದು ಹೇಳಿದರು.
ನವೀನ ಹಳೆಯದು