ಐಆರ್‌ಡಿಎಐ ಮಹತ್ವದ ನಿರ್ಧಾರ, ಕಡಿಮೆಯಾಗಲಿದೆ ಹೊಸ ವಾಹನ ದರವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ವಾಹನಗಳ ಮೇಲಿನ ದೀರ್ಘಾವಧಿ ವಿಮಾ ಪಾಲಿಸಿಗಳನ್ನು ರದ್ದುಪಡಿಸುತ್ತಿದೆ. ಈ ನಿರ್ಧಾರದ ನಂತರ, ಹೊಸ ವಾಹನಗಳ ಬೆಲೆ ಕಡಿಮೆಯಾಗಲಿದೆ. ದೀರ್ಘಾವಧಿ ಮೋಟಾರು ವಿಮಾ ಅನ್ವಯ ನಾಲ್ಕು ಚಕ್ರ ವಾಹನಗಳಿಗೆ 3 ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ 5 ವರ್ಷಗಳ ಅವಧಿಯಿರುತ್ತದೆ.

2018ರ ಸುಪ್ರೀಂ ಕೋರ್ಟ್ ಆದೇಶದ ನಂತರ, ಹೊಸ ವಾಹನಗಳಿಗೆ ಪೀಪಲ್ ಟರ್ಮ್ ಇನ್ಶುರೆನ್ಸ್ ಪಾಲಿಸಿಯನ್ನು ಜಾರಿಗೆ ತರಲಾಯಿತು. ದೀರ್ಘಾವಧಿ ವಿಮಾ ಪಾಲಿಸಿಯು 2020ರ ಆಗಸ್ಟ್ 1ರಿಂದ ಮಾರಾಟವಾಗುವುದಿಲ್ಲ. ಹೊಸ ಆದೇಶದ ಪ್ರಕಾರ, ಸ್ವಂತ ಹಾನಿ ಹಾಗೂ ಥರ್ಡ್ ಪಾರ್ಟಿ ಮೋಟಾರು ವಿಮೆಯ ಮೇಲಿನ ದೀರ್ಘಾವಧಿ ವಿಮೆಯನ್ನು ರದ್ದುಗೊಳಿಸಲಾಗುತ್ತದೆ. ಐಆರ್‌ಡಿಎಐ ಪ್ರಕಾರ, ದೀರ್ಘಾವಧಿಯ ಪಾಲಿಸಿಯು ಹೊಸ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತದೆ.

ಹೊಸ ಮೋಟಾರು ವಿಮೆಯಡಿಯಲ್ಲಿ, ಪಾಲಿಸಿದಾರರು ಕಡಿಮೆ ದಿನಗಳ ವಿಮಾ ರಕ್ಷಣೆಯನ್ನು ಕಡಿಮೆ ದರದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಕರೋನಾ ವೈರಸ್‌ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ವಾಹನಗಳ ಆನ್-ರೋಡ್ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇದರಿಂದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ. ಐಆರ್‌ಡಿಎಐ ಪ್ರಕಾರ, ದೀರ್ಘಾವಧಿಯ ಮೋಟಾರು ವಿಮಾ ರಕ್ಷಣೆಯಿಂದಾಗಿ ಜನರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಇದರಿಂದಾಗಿ ಪಾಲಿಸಿದಾರರು ಫ್ಲೆಕ್ಸಿಬಲ್ ಅಲ್ಲದ ವಿಮೆಯನ್ನು ಖರೀದಿಸುತ್ತಾರೆ.

ಗ್ರಾಹಕರು ಈಗಿರುವ ವಿಮಾ ಕಂಪನಿಯ ಸೇವೆಯು ತೃಪ್ತಿ ನೀಡದಿದ್ದರೆ ವಿಮಾ ಕಂಪನಿಯನ್ನು ಬದಲಿಸಬಹುದು. ದೇಶದ ಬಹುತೇಕ ವಾಹನ ಸವಾರರು ಸಾಲದಲ್ಲಿ ವಾಹನಗಳನ್ನು ಖರೀದಿಸುವ ಕಾರಣಕ್ಕೆ ದೀರ್ಘಾವಧಿ ವಿಮೆಯಿಂದಾಗಿ ಹೆಚ್ಚಿನ ಹೊರೆ ಬೀಳುತ್ತದೆ.

ವಿಮಾ ಕಂಪನಿಯೊಂದಿಗೆ ಗ್ರಾಹಕರು ತೃಪ್ತರಾಗದಿದ್ದರೆ, ಆ ಕಂಪನಿಯು ದೀರ್ಘಾವಧಿ ವಿಮೆಯನ್ನು ಬದಲಿಸಲು ಸಾಧ್ಯವಿಲ್ಲ. ಈ ನಿಯಮವನ್ನು ತೆಗೆದುಹಾಕಿದ ನಂತರ, ಗ್ರಾಹಕರು ತಮ್ಮ ವಿಮಾ ಕಂಪನಿಯನ್ನು ಬದಲಿಸಬಹುದು.

ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳಿಗೆ 5 ವರ್ಷ ಹಾಗೂ ನಾಲ್ಕು ಚಕ್ರ ವಾಹನಗಳಿಗೆ 3 ವರ್ಷದ ದೀರ್ಘಾವಧಿ ವಿಮೆ ಕಡ್ಡಾಯ ಎಂದು 2018 ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ನಂತರ ವಿಮಾ ಕಂಪನಿಗಳು ಗ್ರಾಹಕರಿಗೆ ದೀರ್ಘಾವಧಿ ಪಾಲಿಸಿಗಳನ್ನು ನೀಡಿದವು.

ಹೆಚ್ಚುತ್ತಿರುವ ಕರೋನಾ ವೈರಸ್‌ನಿಂದಾಗಿ ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಲಾಕ್‌ಡೌನ್‌‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶದ ಜನತೆಗೆ ಹಲವಾರು ವಿನಾಯ್ತಿ ಘೋಷಿಸಿರುವ ಕೇಂದ್ರ ಸರ್ಕಾರವು ಎರಡನೇ ಬಾರಿಗೆ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ಮತ್ತೊಮ್ಮೆ ಹೆಚ್ಚಿಸಿದೆ.

ದೇಶಾದ್ಯಂತ ಕರೋನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ವೈರಸ್ ಭೀತಿ ನಡುವೆಯೂ ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗುತ್ತಿದೆ. ಲಾಕ್‌ಡೌನ್‌ನಿಂದಾದ ನಷ್ಟವನ್ನು ಸರಿದೂಗಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರವು ವಾಹನ ಮಾಲೀಕರಿಗೂ ಹಲವಾರು ವಿನಾಯ್ತಿಗಳನ್ನು ನೀಡಿದೆ.

ಮಾರ್ಚ್‌ನಿಂದ ಮೇ ಅವಧಿಯಲ್ಲಿ ಮುಕ್ತಾಯಗೊಂಡ ವಾಹನ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ಎರಡನೇ ಬಾರಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದು, ಸೆಪ್ಟೆಂಬರ್ ತನಕ ಯಾವುದೇ ತೊಂದರೆಯಿಲ್ಲ ಎಂಬುವುದಾಗಿ ಸ್ಪಷ್ಟಪಡಿಸಿದೆ.

ಲಾಕ್‌ಡೌನ್ ಹಿನ್ನಲೆಯಲ್ಲಿ ಈ ಹಿಂದೆ ಜುಲೈ 31ರ ತನಕ ವಾಹನ ದಾಖಲೆಗಳಿಗೆ ಮಾನ್ಯತಾ ಅವಧಿಯನ್ನು ಘೋಷಿಸಿದ್ದ ಕೇಂದ್ರ ಸರ್ಕಾರವು ಇದೀಗ ವೈರಸ್ ಭೀತಿ ಹೆಚ್ಚುತ್ತಿರುವುದರಿಂದ ಸೆಪ್ಟೆಂಬರ್ 30ರ ವರೆಗೆ ಕಾಲಾವಕಾಶ ನೀಡಿದೆ.

ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಂಡ ವಾಹನ ದಾಖಲೆಗಳ ನವೀಕರಣಕ್ಕೆ ಯಾವುದೇ ಹೆಚ್ಚುವರಿ ಮೊತ್ತ ವಿಧಿಸುವುದಿಲ್ಲ ಎಂಬುವುದನ್ನು ಸಹ ಸ್ಪಷ್ಟಪಡಿಸಿರುವ ಕೇಂದ್ರ ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ.

ಹೀಗಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಮಾನ್ಯತೆ ಮುಕ್ತಾಯಗೊಂಡಿದ್ದ ಆರ್‌ಸಿ(ನೋಂದಣಿ ಪ್ರಮಾಣಪತ್ರ), ಡಿಎಲ್(ಚಾಲನಾ ಪ್ರಮಾಣಪತ್ರ) ಮತ್ತು ಎಫ್‌ಸಿ(ಫಿಟ್‌ನೆಸ್ ಪ್ರಮಾಣಪತ್ರ)ಗಳ ಅವಧಿಯು ಲಾಕ್‌ಡೌನ್ ಅವಧಿಯ ಆಧಾರದ ಮೇಲೆ ಸೆಪ್ಟೆಂಬರ್ 30ರ ತನಕ ಮಾನ್ಯತೆ ಪಡೆದುಕೊಂಡಿರಲಿವೆ.

ಆರ್‌ಸಿ, ಡಿಎಲ್ ಮತ್ತು ಎಫ್‌ಸಿ ಹೊರತುಪಡಿಸಿ ಇನ್ಸುರೆನ್ಸ್‌ಗೆ ಯಾವುದೇ ಘೋಷಣೆ ಮಾಡಿಲ್ಲ. ಆದರೆ ಇನ್ಸುರೆನ್ಸ್ ನವೀಕರಣ ಅವಧಿಯನ್ನು ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ ಮಗಿದ್ದ ವಾಹನ ಮಾಲೀಕರಿಗೆ ಲಾಕ್‌ಡೌನ್ ವಿನಾಯ್ತಿಯ ದಿನವರೆಗೂ ವಿಸ್ತರಣೆ ಮಾಡಲಾಗಿತ್ತು. ಆದರೆ ಇದೀಗ ಇನ್ಸುರೆನ್ಸ್ ‌ಗೆ ಯಾವುದೇ ವಿನಾಯ್ತಿ ನೀಡಿಲ್ಲ.

ನವೀನ ಹಳೆಯದು