ಜೂನ್ ಅಂತ್ಯದೊಳಗೆ ರಸ್ತೆ ಕಾಮಗಾರಿಗಳು ಪೂರ್ಣ: ಡಿಸಿಎಂ ಕಾರಜೋಳ


ಬೆಂಗಳೂರ: ರಾಜಧಾನಿ ಬೆಂಗಳೂರಿನ ರಿಂಗ್ ರಸ್ತೆ ಮಾದರಿಯಲ್ಲಿ ನಿರ್ಮಿಸಲು 10 ರಸ್ತೆಗಳನ್ನು ಗುರುತಿಸಿ, ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ. ಜೂನ್ ಅಂತ್ಯದೊಳಗೆ ಹಲವು ರಸ್ತೆ ಕಾಮಗಾರಿಗಳು ಪೂರ್ಣಗೊಂಡು ಸುಗಮ ಸಂಚಾರಕ್ಕೆ ನೆರವಾಗಲಿದೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಗೋವಿಂದ ಎಂ ಕಾರಜೋಳ, 21 ಕಿಲೋ ಮೀಟರ್ ಉದ್ದದ 137 ಕೋಟಿ ರೂಪಾಯಿ ಮೊತ್ತದ ಮೈನಹಳ್ಳಿ-ಬೂದಗೆರೆ ಕ್ರಾಸ್ ರಾಜ್ಯ ಹೆದ್ದಾರಿ ಕಾಮಗಾರಿ, 39 ಕಿಲೋ ಮೀಟರ್ ಉದ್ದದ 182 ಕೋಟಿ ರೂಪಾಯಿ ಮೊತ್ತದ ಹೊಸಕೋಟೆ ರಸ್ತೆ- ಆನೆಕಲ್ ಟು ಅತ್ತಿಬೆಲೆ, ಸರ್ಜಾಪುರ ರಾಜ್ಯ ಹೆದ್ದಾರಿ ಕಾಮಗಾರಿ, 1.3 ಕಿಲೋ ಮೀಟರ್ ಉದ್ದದ 163 ಕೋಟಿ ರೂಪಾಯಿ ವೆಚ್ಚದ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯು ಈಗಾಗಲೇ ಪ್ರಗತಿ ಹಂತದಲ್ಲಿವೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ.
ಈ ಕಾಮಗಾರಿಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಕೈಗೊಳ್ಳುತ್ತಿದೆ. ಈ ಕಾಮಗಾರಿ ಗಳನ್ನು ಶೀಘ್ರವಾಗಿ ಅನುμÁ್ಠನಗೊಳಿಸಲು ಇರುವ ಅಡೆತಡೆ, ಭೂಸ್ವಾಧೀನ, ಸಮಸ್ಯೆ ಗಳನ್ನು ಚರ್ಚಿಸಲಾಗಿದೆ. ಸಮಸ್ಯೆಗಳ ಇತ್ಯರ್ಥಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿ ಸಲಾಗಿದೆ.
ಔಟರ್ ರಿಂಗ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಸಮಸ್ಯೆಯಾಗಿರುವುದರಿಂದ ಅಲ್ಲಲ್ಲಿ 4- 5 ಕಿ.ಮೀ. ಉದ್ದದ ರಸ್ತೆಗಳನ್ನು ನಿರ್ಮಿಸಿ, ಜೋಡಿಸಲಾಗುತ್ತಿದೆ. ಪ್ರಸ್ತಾಪಿತ ರಸ್ತೆ ಕಾಮಗಾರಿ ಗಳಲ್ಲಿ ಮಧ್ಯದಲ್ಲಿ ಮರಗಳಿದ್ದು, ಈ ಮರಗಳನ್ನು ತೆರವುಗೊಳಿಸಿಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಖ್ಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮಕೈಗೊಂಡಿದ್ದಾರೆಂದು ಡಿಸಿಎಂ ಗೋವಿಂದ್ ಎಂ ಕಾರಜೋಳ ತಿಳಿಸಿದ್ದಾರೆ.
ನವೀನ ಹಳೆಯದು