ನಗರದಲ್ಲಿ ವಿಜ್ಞಾನ ಹಬ್ಬ

ಮುಧೋಳ14: ಇಂದಿನ ಸ್ಪಧ್ರಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು  ಹೆಚ್ಚಾಗಿ ಪಠ್ಯದ ಕುರಿತಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದ್ದು ಅವರಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಿ ಅವರಲ್ಲಿರುವ ಸೃಜನಶೀಲತೆ ಹಾಗೂ ಕೌಶಲ್ಯತೆಯನ್ನು ಹೊರತರುವ ಉದ್ದೇಶದಿಂದ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು, ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ  ಸ್ಥಳೀಯ ಬ.ವಿ.ವ ಸಂಘದ ಬೀಳೂರು ಗುರುಬಸವ ಮಹಾಸ್ವಾಮಿಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ತಿಂಗಳಿನ ದಿ. 17 ಮತ್ತು 18 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು (ಃಇಔ) ಮುಧೋಳ, ಇವರ ಸಹಭಾಗಿತ್ವದಲ್ಲಿ ಎರಡು ದಿನಗಳ "ವಿಜ್ಞಾನ ಮಾದರಿಗಳ ಪ್ರದರ್ಶನ ಮೇಳ-ಸವಿಸ್ಕಾರ"ವನ್ನು ಆಯೋಜಿಸಲಾಗಿದೆ. ಮಾದರಿಗಳ ಪ್ರದರ್ಶನ ಮೇಳದಲ್ಲಿ ಭಾಗವಹಿಸುವ ವಿದ್ಯಾಥಿಗಳಿಗೆ  ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ.
ದರ್ಶನದಲ್ಲಿ ಪಾಲ್ಗೊಂಡ ಮಾದರಿಗಳಲ್ಲಿ ಉತ್ತಮವಾದವುಗಳನ್ನು ಆಯ್ಕೆ ಮಾಡಿ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲು ಹಾಗೂ ಅತಿ ಹೆಚ್ಚು ಮಾದರಿಗಳನ್ನುಪ್ರದಶರ್ಿಸಿದ ಶಾಲೆಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಪ್ರೋತ್ಸಾಹಿಸಲು ಕಾಲೇಜಿನ ಆಡಳಿತ ಮಂಡಳಿಯವರುತೀರ್ಮಾನಿಸಿದ್ದಾರೆ. ಈ ಎರಡು ದಿನಗಳ ವಿಜ್ಞಾನಹಬ್ಬದಲ್ಲಿ ದೇಶದ ವಿವಿಧ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಿಂದ ಹಿರಿಯ ವಿಜ್ಞಾನಿಗಳು ಭಾಗವಹಿಸಿ ವಿದ್ಯಾರ್ಥಿಗಳು  ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಆದ ಕಾರಣ ಮುಧೋಳ ಹಾಗೂ ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜ್ಞಾನ ಮಾದರಿಗಳ ಪ್ರದರ್ಶನ ಮೇಳವನ್ನು ಯಶಸ್ವಿಗೊಳಿಸಬೇಕಾಗಿ ಆಡಳಿತ ಮಂಡಳಿಯ ಕಾಯರ್ಾದ್ಯಾಕ್ಷರಾದ ಶ್ರೀಯುತ ಮಹಾಂತೇಶ ಶೆಟ್ಟರ್ ಅವರು ಪ್ರತಿಕಾ ಪ್ರಕಟಣೆ  ಮೂಲಕ ತಿಳಿಸಿದರು.
 ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ// ಶ್ರವಣಕುಮಾರ ಕೆರೂರ, ಕಾರ್ಯಕ್ರಮದ ಸಂಯೋಜಕರಾದ ಪ್ರೋ. ಮಂಜುನಾಥ ಗಬಸವಳಗಿ, ಪ್ರೋ. ಆದಿನಾಥ ದೊಡ್ಡಮನಿ ಮತ್ತು ಮಾದ್ಯಮ ಪ್ರತಿನಿಧಿಯಾದ ಪ್ರೋ. ವಿನಯ ಶೆಟ್ಟರ್ ಉಪಸ್ಥಿತರಿದ್ದರು.
ನೋಂದಣಿಗಾಗಿ ಈ 919035181811, 919886724121, 919611417010, 918095602012ನಂಬರ್ಗಳಿಗೆ ಸಂಪಕರ್ಿಸಬಹುದು.
ನವೀನ ಹಳೆಯದು