ಕಾಲುವೆ ಸುರಂಗದಲ್ಲಿಸಿಲುಕಿದ್ದ ಯುವಕನ ರಕ್ಷಣೆ

ಸವದತ್ತಿ: ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದ ಸಮೀಪ ಮಲಪ್ರಭಾ ನದಿಯಿಂದ ಮುಂದೆ ಹೋಗುವ ಬಲದಂಡೆ ಕಾಲುವೆ ಸುರಂಗ ಮಾರ್ಗದಲ್ಲಿಈಜಲು ಹೋಗಿ ಹಲವು ಗಂಟೆಗಳ ಕಾಲ ಸಿಲುಕಿಕೊಂಡ ಯುವಕನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿ ಹೊರತೆಗೆದಿದ್ದಾರೆ.

ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ಮಂಗಳವಾರ ಆಗಮಿಸಿದ್ದ ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಯುವಕ ವಿಠ್ಠಲ ರಾಮಪ್ಪ ಹೊಸಗೌಡರ ಕೆಲವರೊಂದಿಗೆ ಈಜಲು ಈ ಬಲದಂಡೆ ಕಾಲುವೆಗೆ ಆಗಮಿಸಿದ್ದರು. ನೀರಿನ ಹರಿವಿನ ರಭಸವನ್ನು ಅರಿಯದ ಯುವಕ ಒಮ್ಮೆಲೇ ಕಾಲುವೆಯಲ್ಲಿಜಿಗಿದ ಕಾರಣ ಕಾಲುವೆಯಿಂದ ನೇರವಾಗಿ ಸುರಂಗ ಮಾರ್ಗದೊಳಗೆ ಹೋಗಿ ಅಲ್ಲಿರುವ ಕಬ್ಬಿಣದ ಸಲಾಕೆಯನ್ನು ಹಿಡಿದುಕೊಂಡು ಹಲವು ಗಂಟೆಗಳ ಕಾಲ ಅಲ್ಲಿಯೇ ಉಳಿದಿದ್ದರು. ಯುವಕನ ಜತೆಗೆ ಬಂದವರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಯುವಕನ ಪ್ರಾಣ ರಕ್ಷಣೆ ಮಾಡಿದ್ದಾರೆ.

ಸವದತ್ತಿ ಅಗ್ನಿಶಾಮಕ ಠಾಣಾಧಿಕಾರಿ ಎಮ್‌.ಕೆ.ಕಲಾದಗಿ ನೇತೃತ್ವದಲ್ಲಿಸಿಬ್ಬಂದಿ ಸಂಜು ಮಠಪತಿ, ಉಮೇಶ ಅಂಗಡಿ, ವಿನೋದ ತೋಡಕರ, ಮಂಜು ಪಂಚೆನ್ನವರ, ನವೀನ ಪವಾಡಿ ಬಲದಂಡೆ ಕಾಲುವೆ ಸುರಂಗ ಮಾರ್ಗದಲ್ಲಿಸಿಲುಕಿಕೊಂಡ ಯುವಕನನ್ನು ಹಗ್ಗದಿಂದ ನೀರಿನಲ್ಲಿಇಳಿದು ಮೇಲಕ್ಕೆ ತಂದಿದ್ದಾರೆ.
ನವೀನ ಹಳೆಯದು