ವಲ್ಡ್ ಸ್ಕಿಲ್ ಸ್ಪರ್ಧೆಗೆ ಹೆಸರು ನೋಂದಾಯಿಸಲು ಅವಕಾಶ, ಬಹುಮಾನ ಮಿಸ್ ಮಾಡಿಕೊಳ್ಳದಿರಿ

ಬಾಗಲಕೋಟೆ: ವಲ್ಡ್ ಸ್ಕಿಲ್ ಸ್ಪರ್ಧೆಯನ್ನು ಚೀನಾ ದೇಶದ ಶಾಂಘೈ ನಗರದಲ್ಲಿ 2021ರಲ್ಲಿ ಏರ್ಪಡಿಸಲಾಗುತ್ತಿದ್ದು, ಕರ್ನಾಟಕವು 38 ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವ ಮಹಾದಾಸೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಕರ್ನಾಟಕದಿಂದ ವಲ್ಡ್ ಸ್ಕಿಲ್ ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಲು ಕರ್ನಾಟಕ ಸರಕಾರ 2020 ಮಾರ್ಚ್ ತಿಂಗಳಲ್ಲಿ ರಾಜ್ಯ ಮಟ್ಟದ ಕೌಶಲ್ಯ ಸ್ಪರ್ಧೆಯನ್ನು ಏರ್ಪಡಿಸಿದೆ.

ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ರೀತಿಯ ವಿದ್ಯಾರ್ಹತೆಯ ಮಿತಿ ಇರುವುದಿಲ್ಲ. ಕೌಶಲ್ಯ ಮತ್ತು ವಯಸ್ಸು ಒಂದೇ ಅಭ್ಯರ್ಥಿಯ ಅರ್ಹತೆಯಾಗಿರುತ್ತದೆ. 1999ರ ನಂತರದಲ್ಲಿ ಜನಿಸಿದ ಯಾವುದೇ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ವಲ್ಡ್ ಸ್ಕಿಲ್ ಸ್ಪರ್ಧೆಗೆ ಭಾಗವಹಿಸಬಹುದಾಗಿದ್ದು, ಆಸಕ್ತರು ಜನವರಿ 15 ರೊಳಗಾಗಿ ಹೆಸರನ್ನು ನೋಂದಣಿ ಮಡೊಕೊಳ್ಳಬಹುದು.

ನವೀನ ಹಳೆಯದು